ಆದಿತ್ಯ ಮಂಗಳ ಯೋಗದ ಪ್ರಭಾವ; ಅಕ್ಟೋಬರ್ 13 ರಿಂದ 19ರವರೆಗೆ 7 ರಾಶಿಗಳಿಗೆ ಅದೃಷ್ಟದ ಹೊಳೆ!
ಅಕ್ಟೋಬರ್ 13 ರಿಂದ 19, 2025 ರ ವಾರದ ಟ್ಯಾರೋ ಕಾರ್ಡ್ ಭವಿಷ್ಯವು ಆದಿತ್ಯ ಮಂಗಳ ಯೋಗದಿಂದ ಪ್ರಭಾವಿತವಾಗಿದೆ. ತುಲಾ ರಾಶಿಯಲ್ಲಿ ಸೂರ್ಯ ಮತ್ತು ಮಂಗಳ ಸಂಯೋಗದಿಂದಾಗಿ, ಏಳು ರಾಶಿಚಕ್ರದವರಿಗೆ ಈ ವಾರವು ವಿಶೇಷವಾಗಿ ಫಲಪ್ರದವಾಗಲಿದೆ. ನಿಮ್ಮ ರಾಶಿಯ ವಿಸ್ತೃತ ಭವಿಷ್ಯವನ್ನು ಇಲ್ಲಿ ತಿಳಿಯಿರಿ.
113

Image Credit : AIK Meta
ಟ್ಯಾರೋ ಕಾರ್ಡ್
ಅಕ್ಟೋಬರ್ 13 ರಿಂದ 19, 2025 ವಾರದ ಜಾತಕ: ಮುಂದಿನ ವಾರ ಆದಿತ್ಯ ಮಂಗಳ ಯೋಗದಿಂದ ಪ್ರಭಾವಿತವಾಗಿರಲಿದೆ. ಈ ವಾರ ಸೂರ್ಯ ಮತ್ತು ಮಂಗಳ ತುಲಾ ರಾಶಿಯಲ್ಲಿ ಸಾಗಲಿವೆ. ತುಲಾ ರಾಶಿಯಲ್ಲಿ ಸೂರ್ಯ ದುರ್ಬಲನಾದ್ರೆ, ಮಂಗಳದೊಂದಿಗಿನ ಸಂಯೋಗ ಸೂರ್ಯ ದುರ್ಬಲತೆ ರಕ್ಷಿಸುತ್ತದೆ. ಟ್ಯಾರೋ ಕಾರ್ಡ್ ಪ್ರಕಾರ, ಏಳು ರಾಶಿಗಳ ಮೇಲೆ ಉತ್ತಮ ಪ್ರಭಾವ ಬೀರಲುದೆ. ಟ್ಯಾರೋ ಕಾರ್ಡ್ ಪ್ರಕಾರ, ಅಕ್ಟೋಬರ್ ಮೂರನೇ ವಾರದ ಜಾತಕಫಲ ಹೀಗಿದೆ.
213
Image Credit : SOCIAL MEDIA
ಮೇಷ ರಾಶಿ
- ಈ ವಾರ ನಿರೀಕ್ಷಿತ ಫಲಿತಾಂಶಗಳು ಸಿಗಲಿವೆ
- ಕೆಲಸದಿಂದ ಅಧಿಕ ದಣಿವು
- ಅನಗತ್ಯ ಖರ್ಚು ತಪ್ಪಿಸಬೇಕು.
- ಸಂಗಾತಿ ಅಥವಾ ವ್ಯವಹಾರ ಪಾಲುದಾರರು ಅಥವಾ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಸಾಧ್ಯತೆ
313
Image Credit : others
ವೃಷಭ ರಾಶಿ
- ಕೆಲಸದಲ್ಲಿ ಹೊಸ ಅವಕಾಶಗಳು ಸಿಗಲಿದ್ದು, ಧನಾಗಮನ ಸಾಧ್ಯತೆ
- ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವಿಕೆ
- ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯ ಜೀವನ
- ಹಳೆಯ ಸಂಬಂಧದಿಂದ ಹೊಸ ಶಕ್ತಿ ಸಿಗಲಿದೆ
413
Image Credit : OTHERS
ಮಿಥುನ ರಾಶಿ
- ಈ ವಾರ ಮಿಥುನ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ.
- ನಿಮ್ಮ ಪ್ರತಿಭೆಯನ್ನು ಎಲ್ಲರೂ ಗುರುತಿಸಿ ಗೌರವಿಸುತ್ತಾರೆ.
- ವೃತ್ತಿ ಮತ್ತು ಖಾಸಗಿ ಜೀವನದಲ್ಲಿ ಅಸಮತೋಲನ
- ಈ ವಾರ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ
- ನಿಮ್ಮೊಳಗಿನ ವಿಶೇಷ ಶಕ್ತಿ ಅನಾವರಣಗೊಳ್ಳಲಿದೆ.
513
Image Credit : OTHERS
ಕರ್ಕಾಟಕ ರಾಶಿ
- ಆತ್ಮವಿಶ್ವಾಸದ ಕೊರತೆ ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಲಿವೆ
- ಈ ವಾರ ಆಯಾಸ ಮತ್ತು ಸೋಮಾರಿತನ ನಿಮ್ಮನ್ನು ಕಾಡಬಹುದು
- ನಿಯಮಿತ ವ್ಯಾಯಾಮ ಮತ್ತು ಸೂರ್ಯ ನಮಸ್ಕಾರ ಮಾಡಿ
- ಸಕಾರಾತ್ಮಕ ಚಿಂತನೆಗಳನ್ನು ಮಾಡಿ
613
Image Credit : SOCIAL MEDIA
ಸಿಂಹ ರಾಶಿ
- ಜೀವನದ ಪ್ರತಿಯೊಂದು ಅಂಶದಲ್ಲೂ ಹೊಂದಾಣಿಕೆ ಅಗತ್ಯ
- ಕೆಲಸಗಳಲ್ಲಿ ತಾಳ್ಮೆ ಅಗತ್ಯ, ದುಡುಕಿನ ನಿರ್ಧಾರ ಬೇಡ
- ಬಡ್ತಿ ಜೊತೆಗೆ ಹೆಚ್ಚಿನ ಜವಾಬ್ದಾರಿ
- ಸಂಬಂಧಗಳ ವಿಷಯದಲ್ಲಿ ಎಚ್ಚರವಾಗಿರಿ, ಅನಗತ್ಯವಾದ ಮಾತುಗಳು ಬೇಡ.
- ಬುದ್ಧಿವಂತಿಕೆ ಮತ್ತು ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ
713
Image Credit : OTHERS
ಕನ್ಯಾ ರಾಶಿ
- ಹೊಸ ವ್ಯವಹಾರ ಅಥವಾ ಉದ್ಯೋಗ ಸಿಗುವ ಸಾಧ್ಯತೆ
- ಭವಿಷ್ಯದ ಭದ್ರತೆಗಾಗಿ ಹಣ ಹೂಡಿಕೆ
- ಪ್ರೇಮ ಜೀವನದಲ್ಲಿ ಅಪಾರ ಯಶಸ್ಸು ಸಿಗುವ ಸಾಧ್ಯತೆ
- ಸೃಜನಶೀಲ ಪ್ರಯತ್ನಗಳಲ್ಲಿ ಯಶಸ್ಸು ಸಾಧ್ಯತೆ
- ಈ ವಾರ ಜೀವನ ಪ್ರಯಾಣ ಮತ್ತು ಸಂತೋಷದಿಂದ ಇರಲಿದೆ
813
Image Credit : OTHERS
ತುಲಾ ರಾಶಿ
- ದೂರ ಪ್ರಯಾಣದಿಂದ ಆಯಾಸ ಮತ್ತು ಆರೋಗ್ಯ ಸಮಸ್ಯೆಗಳು
- ಈ ವಾರ ತಾಳ್ಮೆ ಮತ್ತು ಜಾಗರೂಕತೆ ಅತ್ಯಗತ್ಯವಾಗಿ ಬೇಕು
- ಉದ್ಯೋಗ ಹುಡುಕುತ್ತಿರೋರಿಗೆ ಒಳ್ಳೆಯ ಸುದ್ದಿ ಸಿಗಲಿದೆ
- ಈ ವಾರ ಸಾಲು ಸಾಲು ಸವಾಲುಗಳು ಎದುರಾಗಲಿವೆ
913
Image Credit : OTHERS
ವೃಶ್ಚಿಕ ರಾಶಿ
- ಕೆಲಸದಲ್ಲಿ ಹೊಸ ಅವಕಾಶ ಸೃಷ್ಟಿ
- ಸಹೋದ್ಯೋಗಿಗಳು ಮತ್ತು ಸ್ನೇಹಿತರಿಂದ ಸಹಾಯ ಮತ್ತು ಬೆಂಬಲ
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಇರಲಿ
- ಕೆಲಸದಲ್ಲಿ ತಾಳ್ಮೆ ಮತ್ತು ಜಾಗರೂಕತೆ ಇರಲಿ
- ಈ ವಾರ ಕೆಲಸಗಳಲ್ಲಿ ವಿಳಂಬ ಸಾಧ್ಯತೆ
1013
Image Credit : OTHERS
ಧನು ರಾಶಿ
- ಹೊಸ ಮೂಲಗಳಿಂದ ಆರ್ಥಿಕ ಲಾಭ
- ಖಾಸಗಿ ಮತ್ತು ವೃತ್ತಿ ಜೀವನದಲ್ಲಿ ಯಾವುದೇ ಆತುರದ ನಿರ್ಧಾರ ಬೇಡ
- ನಿಮ್ಮ ಗುರಿಗಳ ಕಡೆಗೆ ಸ್ವಲ್ಪ ಗಂಭೀರತೆ ಅತ್ಯಗತ್ಯ
- ಸಂಗಾತಿಯಿಂದ ಬೆಂಬಲ, ಕುಟುಂಬದಲ್ಲಿ ಸಾಮರಸ್ಯ
1113
Image Credit : SOCIAL MEDIA
ಮಕರ ರಾಶಿ
- ಈ ವಾರ ಶುಭಕರ ವಿಷಯ ಕೇಳುತ್ತೀರಿ
- ಸೃಜನಶೀಲತೆ ಮತ್ತು ಕಠಿಣ ಪರಿಶ್ರಮಕ್ಕೆ ಶುಭ ಫಲಿತಾಂಶ ಸಿಗಲಿದೆ.
- ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಿ, ಸಮತೋಲಿತ ಆಹಾರ ಸೇವನೆಗೆ ಆದ್ಯತೆ ನೀಡಿ
- ಕುಟುಂಬದಲ್ಲಿ ಶಾಂತಿ ಮತ್ತು ತೃಪ್ತಿ ನೆಲೆಸಲಿದೆ.
- ಕೆಲಸದಲ್ಲಿ ಮೆಚ್ಚುಗೆ ಮತ್ತು ಪ್ರಗತಿ ಸಾಧ್ಯ
1213
Image Credit : SOCIAL MEDIA
ಕುಂಭ ರಾಶಿ
- ವ್ಯಕ್ತಿತ್ವ ಮತ್ತು ವರ್ಚಸ್ಸಿನ ಮೇಲೆ ಪರಿಣಾಮ ಬೀರಲಿದೆ.
- ಆಧ್ಯಾತ್ಮಿಕದತ್ತ ಒಲವು ಮತ್ತು ಆಕರ್ಷಣೆ
- ವೃತ್ತಿ ಮತ್ತು ಉದ್ಯೋಗದಲ್ಲಿ ಪ್ರಗತಿಗೆ ಹೊಸ ಅವಕಾಶಗಳು
- ಆತ್ಮವಿಶ್ವಾಸದಿಂದ ಸವಾಲು ಎದುರಿಸಿದ್ರೆ ಗೆಲುವು ಸಿಗಲಿದೆ
1313
Image Credit : SOCIAL MEDIA
ಮೀನ ರಾಶಿ
- ನಿಮ್ಮ ಯಶಸ್ಸಿನ ಪಯಣಕ್ಕೆ ಕೆಲವರಿಂದ ತೊಂದರೆ
- ಹಿತಶತ್ರುಗಳಿಂದ ಎಚ್ಚರಿಕೆ ಇರಲಿ
- ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.
- ಕೆಲಸ ವಿಳಂಬವಾದ್ರೂ ಫಲಿತಾಂಶ ಸಕಾರಾತ್ಮಕವಾಗಿ ಇರಲಿದೆ
- ಸ್ಪರ್ಧೆಗಳಲ್ಲಿ ಜಯ, ಸೃಜನಶೀಲ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
Latest Videos