ಚಂದ್ರನಿಂದ ಸರ್ವಾರ್ಥ ಸಿದ್ಧಿ ಯೋಗ, ಕನ್ಯಾ ಜತೆ ಈ ರಾಶಿಗೆ ಆದಾಯ, ಲಾಭ
ಚಂದ್ರನಿಂದ ಶೋಭನ ಯೋಗ, ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ, ಲಕ್ಷ್ಮೀ ನಾರಾಯಣ ಯೋಗ, ಉತ್ತರ ಫಾಲ್ಗುಣಿ ನಕ್ಷತ್ರಗಳ ಶುಭ ಸಂಯೋಗವೂ ನಡೆಯುತ್ತಿದ್ದು, ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.
ರವಿ ಯೋಗದಿಂದ ವೃಷಭ ರಾಶಿಯವರಿಗೆ ಶುಭವಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಪರಿಸ್ಥಿತಿಗಳು ನಿಮ್ಮ ಪರವಾಗಿರುತ್ತವೆ. ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ . ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಉಪಯುಕ್ತ ಸಮಯವಾಗಿದೆ.
ಸಿಂಹ ರಾಶಿಯವರಿಗೆ ಶೋಭನ ಯೋಗದಿಂದ ಶುಭವಾಗುತ್ತದೆ. ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಇದೆ. ವ್ಯಾಪಾರ ಯೋಜನೆಗಳು ನಿಮ್ಮ ವ್ಯಾಪಾರವನ್ನು ಉತ್ತಮವಾಗಿ ನಡೆಸುತ್ತದೆ ಮತ್ತು ಪ್ರಗತಿಯ ಹಾದಿಯನ್ನು ಸುಗಮಗೊಳಿಸುತ್ತದೆ. ಬಾಕಿ ಹಣ ವಾಪಸ್ ಪಡೆಯಬಹುದು.
ಕನ್ಯಾ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗದ ಕಾರಣದಿಂದ ಆಹ್ಲಾದಕಕರವಾಗಿದೆ.ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು.ಬುಧಗ್ರಹದ ಅನುಗ್ರಹದಿಂದ ಉತ್ತಮ ಸಮಯವಾಗಿರುತ್ತದೆ, ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯ ಅವಕಾಶಗಳು ಇವೆ. ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಉತ್ತರ ಫಲ್ಗುಣಿ ನಕ್ಷತ್ರದ ಕಾರಣ ಮಕರ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಆರ್ಥಿಕ ಪ್ರಗತಿಯ ಸಾಧ್ಯತೆಗಳಿವೆ ಮತ್ತು ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ.ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ ಮತ್ತು ಯಾವುದೇ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಬೇರೆ ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು.
ಮೀನ ರಾಶಿಯವರಿಗೆ ಸರ್ವಾರ್ಥ ಸಿದ್ಧಿ ಯೋಗದಿಂದ ಲಾಭದಾಯಕವಾಗಿರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಬಹಳ ಒಳ್ಳೆಯ ಸಮಯವಾಗಿರುತ್ತದೆ. ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಸಹ ಪ್ರಯೋಜನಕಾರಿಯಾಗಿದೆ.ಬುಧ ಗ್ರಹದ ಅನುಗ್ರಹದಿಂದ ವಿದ್ಯಾರ್ಥಿಗಳ ಬುದ್ಧಿವಂತಿಕೆಯು ನಬೆಳೆಯುತ್ತದೆ, ಇದು ಅಧ್ಯಯನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.