Chanakya Niti: ಮನುಷ್ಯನನ್ನು ಎಲ್ಲಾ ತೊಂದರೆಗಳಿಂದ ದೂರ ಮಾಡೋ ಅಸ್ತ್ರ ಯಾವುದು ಗೊತ್ತಾ?
ಚಾಣಕ್ಯನು ಹಣಕ್ಕಿಂತ ಮಿಗಿಲಾದ ಒಂದು ವಿಷಯವನ್ನು ಹೇಳಿದ್ದಾನೆ, ಅದನ್ನು ಹೊಂದಿರುವವರು ತೊಂದರೆಗಳಿಗೆ ಹೆದರುವುದಿಲ್ಲ. ಚಾಣಕ್ಯನು ಇದನ್ನು ಮನುಷ್ಯನ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಯುತ ಆಯುಧವೆಂದು ಪರಿಗಣಿಸಿದ್ದಾನೆ. ಅದರ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ.
ಚಾಣಕ್ಯನ ನೀತಿಯು(Chanakya niti) ನೀವು ಸಕಾರಾತ್ಮಕವಾಗಿದ್ದರೆ, ತೊಂದರೆಗಳನ್ನು ನಿವಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ ಎಂದು ಹೇಳುತ್ತೆ. ಚಾಣಕ್ಯ ಹಣದ ಬಗ್ಗೆ ತನ್ನ ಅಭಿಪ್ರಾಯಗಳನ್ನು ವಿವರವಾಗಿ ಹಂಚಿಕೊಂಡಿದ್ದಾನೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಕಠಿಣ ಪರಿಶ್ರಮದ ಫಲ ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ.
ಹಣವು ಸಂತೋಷವನ್ನು(Happiness) ನೀಡುತ್ತೆ, ಆದರೆ ಚಾಣಕ್ಯನು ಹಣಕ್ಕಿಂತ ಮುಖ್ಯವಾದ ಒಂದು ವಿಷಯವನ್ನು ಹೇಳಿದ್ದಾನೆ, ಅದು ಜ್ಞಾನ. ಅದನ್ನು ಹೊಂದಿರುವವರು ತೊಂದರೆಗಳಿಗೆ ಹೆದರೋದಿಲ್ಲ. ಚಾಣಕ್ಯನು ಇದನ್ನು ಮನುಷ್ಯನ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಯುತ ಆಯುಧವೆಂದು ಪರಿಗಣಿಸಿದ್ದಾನೆ.
ಜ್ಞಾನವು ಕಾಮಧೇನು(Kamadhenu) ಹಸುವಿನಂತೆ
ಚಾಣಕ್ಯನ ಪ್ರಕಾರ, ಜ್ಞಾನವನ್ನು ಸಂಪಾದಿಸಲು ಎಂದಿಗೂ ಹಿಂಜರಿಯದ ವ್ಯಕ್ತಿಯನ್ನು ದುಃಖ ಸ್ಪರ್ಶಿಸಲು ಸಾಧ್ಯವಿಲ್ಲ. ಜ್ಞಾನದ ಬಲದಿಂದ, ಒಬ್ಬ ವ್ಯಕ್ತಿಯು ಯಶಸ್ಸಿನ ಉತ್ತುಂಗವನ್ನು ತಲುಪಬಹುದು. ಚಾಣಕ್ಯನು ಬುದ್ಧಿವಂತ ಮತ್ತು ಬುದ್ದಿಜೀವಿಯನ್ನು ಶ್ರೀಮಂತರಿಗಿಂತ ಉತ್ತಮ ಮನುಷ್ಯ ಎಂದು ಪರಿಗಣಿಸಿದ್ದಾನೆ.
ಜ್ಞಾನವುಳ್ಳ(Knowledge) ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತೆ, ಅವನು ಆರ್ಥಿಕವಾಗಿ ದುರ್ಬಲನಾಗಿದ್ದರೂ ಸಹ. ಜ್ಞಾನವನ್ನು ಗಳಿಸೋದು ಪ್ರತಿ ಋತುವಿನಲ್ಲಿ ಮನುಷ್ಯನಿಗೆ ಅಮೃತವನ್ನು ಒದಗಿಸುವ ಕಾಮಧೇನು ಹಸುವಿನಂತಿದೆ ಎಂದು ಚಾಣಕ್ಯನು ಹೇಳುತ್ತಾನೆ, ಆದ್ದರಿಂದ ಜ್ಞಾನವು ಲಭ್ಯವಾದಾಗಲೆಲ್ಲಾ, ಎಲ್ಲಿಯಾದರೂ ಪಡೆಯಬೇಕು. ಜ್ಞಾನವು ಎಂದಿಗೂ ವ್ಯರ್ಥವಾಗೋದಿಲ್ಲ.
ಜ್ಞಾನದ ಅನುಭವವು ಯಶಸ್ಸನ್ನು(Success) ತರುತ್ತೆ
ಜ್ಞಾನ ಮತ್ತು ಅನುಭವ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬ ವ್ಯಕ್ತಿಯು ಜ್ಞಾನವನ್ನು ಹೊಂದಿದ್ದಾನೆ ಆದರೆ ಅವನು ಆ ಪರಿಸ್ಥಿತಿಯಲ್ಲಿ ವಾಸಿಸುವಾಗ ಮಾತ್ರ ಅನುಭವವನ್ನು ಪಡೆಯುತ್ತಾನೆ.
ಕಲಿತ ವಿಷಯಗಳನ್ನು ಅಭ್ಯಾಸ ಮಾಡುವುದು ಸಹ ಅವಶ್ಯಕ, ಆಗ ಮಾತ್ರ ಮನುಷ್ಯನು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು(Difference) ಉತ್ತಮ ರೀತಿಯಲ್ಲಿ ಗುರುತಿಸಲು ಸಾಧ್ಯವಾಗುತ್ತೆ. ಮಾನವ ಜೀವನದಲ್ಲಿ ಎಷ್ಟು ಜ್ಞಾನ ಅಗತ್ಯವೋ, ಅನುಭವವೂ ಅಷ್ಟೇ ಅಗತ್ಯ.
ಚಾಣಕ್ಯನ ಪ್ರಕಾರ, ಇದು ಒಂದು ಗುಣವಾಗಿದ್ದು, ಇದರ ಆಧಾರದ ಮೇಲೆ ಒಬ್ಬ ವ್ಯಕ್ತಿಯು ದೊಡ್ಡ ಗುರಿಯನ್ನು(Goal) ಸುಲಭವಾಗಿ ಸಾಧಿಸುತ್ತಾನೆ. ಜ್ಞಾನದ ಬಗ್ಗೆ ಎಂದಿಗೂ ಹೆಮ್ಮೆ ಪಡಬೇಡಿ, ಹಂಚಿಕೊಳ್ಳುವುದರಿಂದ ಜ್ಞಾನವು ಬೆಳೆಯುತ್ತೆ ಮತ್ತು ಇದು ವ್ಯಕ್ತಿಯು ಉನ್ನತ ಸ್ಥಾನವನ್ನು ಪಡೆಯಲು ಕಾರಣವಾಗುತ್ತೆ.