2025ರ ಗುರು ಪರಿವರ್ತನೆ, ಈ ರಾಶಿಗೆ ಗುರು ಬಲ, ಈ ರಾಶಿಗಳಿಗೆ ಸುಖದ ಸುಪ್ಪತ್ತಿಗೆ
ವೃಷಭ ರಾಶಿಯಿಂದ ಮಿಥುನ ರಾಶಿಗೆ ಪರಿವರ್ತನೆಗೊಂಡ ಗುರುವು 12 ರಾಶಿಗಳಿಗೆ ಹೇಗಿರಲಿದೆ ಅನ್ನೋದನ್ನ ನೋಡೋಣ.

ಪ್ರತಿ ವರ್ಷ ಗುರುವು ರಾಶಿ ಬದಲಾಯಿಸುತ್ತಾನೆ. ಈ ಬದಲಾವಣೆ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೇ ಪಂಚಾಂಗದ ಪ್ರಕಾರ ಗುರುವು ವೃಷಭದಿಂದ ಮಿಥುನಕ್ಕೆ ಬಂದಿದ್ದಾನೆ.
ಮೇಷ ರಾಶಿಯವರಿಗೆ 2ನೇ ಮನೆಯಲ್ಲಿದ್ದ ಗುರು ಈಗ 3ನೇ ಮನೆಗೆ ಬಂದಿದ್ದಾನೆ. ಹೊಸ ವಾಹನ ಖರೀದಿ ಸಾಧ್ಯತೆ. ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ. ನಿಮ್ಮ ಹಣಕಾಸಿನ ಅವಶ್ಯಕತೆಗಳು ಪೂರ್ಣಗೊಳ್ಳುತ್ತವೆ.
ವೃಷಭ ರಾಶಿಯವರಿಗೆ ಗುರು 2ನೇ ಮನೆಗೆ ಬಂದಿದ್ದಾನೆ. ಇದು ಧನ ಸ್ಥಾನ. ಇದುವರೆಗೂ ಇದ್ದ ಅಡೆತಡೆಗಳು ದೂರವಾಗುತ್ತವೆ. ಆದಾಯ ಹೆಚ್ಚಳ. ಹಣಕಾಸಿನಲ್ಲಿ ಪ್ರಗತಿ.
ಮಿಥುನ ರಾಶಿ: 2025ರ ಗುರು ಪರಿವರ್ತನೆ ಮಿಥುನ ರಾಶಿಯವರಿಗೆ ಗುರು ಲಗ್ನದಲ್ಲೇ ಇದ್ದಾನೆ. ಹಣಕಾಸಿನ ಒಳಹರಿವು ಚೆನ್ನಾಗಿರುತ್ತದೆ. ಮದುವೆ ಆಗಬಹುದು.
ಕರ್ಕಾಟಕ ರಾಶಿಯವರಿಗೆ ಗುರು 12ನೇ ಮನೆಯಲ್ಲಿದ್ದಾನೆ. ಇದು ವ್ಯಯ ಸ್ಥಾನ. ಎಲ್ಲಾ ಪ್ರಯತ್ನಗಳಲ್ಲೂ ಯಶಸ್ಸು. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಳ.
ಸಿಂಹ ರಾಶಿಯವರಿಗೆ ಗುರು 11ನೇ ಮನೆಯಲ್ಲಿದ್ದಾನೆ. ಹಣಕಾಸಿನ ಸಮಸ್ಯೆಗಳು ಪರಿಹಾರ. ಲಾಭ ಸ್ಥಾನದಲ್ಲಿರುವ ಗುರು ಹಣಕಾಸಿನಲ್ಲಿ ಪ್ರಗತಿ ತರುತ್ತಾನೆ.
ಕನ್ಯಾ ರಾಶಿಯವರಿಗೆ ಗುರು 10ನೇ ಮನೆಯಲ್ಲಿದ್ದಾನೆ. ಇದು ವೃತ್ತಿ ಸ್ಥಾನ. ಹಣಕಾಸಿನ ಸಮಸ್ಯೆಗಳು ಪರಿಹಾರ. ಆರೋಗ್ಯದಲ್ಲಿ ಸುಧಾರಣೆ. ವಾಹನ ಖರೀದಿ ಯೋಗ.
ತುಲಾ ರಾಶಿಯವರಿಗೆ ಗುರು 9ನೇ ಮನೆಯಲ್ಲಿದ್ದಾನೆ. ಪೂರ್ವಿಕ ಆಸ್ತಿ ಲಾಭ. ಸಮಾಜದಲ್ಲಿ ಗೌರವ ಹೆಚ್ಚಳ. ಬೇರೆಯಾಗಿದ್ದವರು ಒಂದಾಗುವ ಸಾಧ್ಯತೆ.
ವೃಶ್ಚಿಕ ರಾಶಿಯವರಿಗೆ ಗುರು 8ನೇ ಮನೆಯಲ್ಲಿದ್ದಾನೆ. ಇದು ಅಷ್ಟಮ ಸ್ಥಾನ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ. ಖರ್ಚು ಹೆಚ್ಚಾಗಬಹುದು.
ಧನು ರಾಶಿಯವರಿಗೆ ಗುರು ೭ನೇ ಮನೆಯಲ್ಲಿದ್ದಾನೆ. ಇದು ಕಳತ್ರ ಸ್ಥಾನ. ಮದುವೆ ಆಗದವರಿಗೆ ಮದುವೆ ಆಗಬಹುದು. ಮನೆ ಕಟ್ಟುವ ಯೋಗ. ವಾಹನ ಖರೀದಿ. ಉದ್ಯೋಗದಲ್ಲಿ ಪ್ರಗತಿ.
ಮಕರ ರಾಶಿ: 2025ರ ಗುರು ಪರಿವರ್ತನೆ ಮಕರ ರಾಶಿಯವರಿಗೆ ಗುರು 6ನೇ ಮನೆಯಲ್ಲಿದ್ದಾನೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹೂಡಿಕೆಯಿಂದ ಲಾಭ.
ಕುಂಭ ರಾಶಿ: 2025ರ ಗುರು ಪರಿವರ್ತನೆ ಕುಂಭ ರಾಶಿಯವರಿಗೆ ಗುರು 5ನೇ ಮನೆಯಲ್ಲಿದ್ದಾನೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಸ ಜವಾಬ್ದಾರಿಗಳು.
ಮೀನ ರಾಶಿ: 2025ರ ಗುರು ಪರಿವರ್ತನೆ ಮೀನ ರಾಶಿಯವರಿಗೆ ಗುರು 4ನೇ ಮನೆಯಲ್ಲಿದ್ದಾನೆ. ಮೆಚ್ಚುಗೆಗಳು. ಗೌರವ ಹೆಚ್ಚಳ. ನಿಮ್ಮ ಹಳೆಯ ಆಸೆಗಳು ಈಡೇರುತ್ತವೆ.