2024 ರಲ್ಲಿ ಸೂರ್ಯ ಚಂದ್ರ ಗ್ರಹಣ ಯಾವಾಗ..? ಭಾರತದಲ್ಲಿ ಎಷ್ಟು ಗ್ರಹಣ ಸಂಭವಿಸುತ್ತೆ..?
ವರ್ಷದ ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28 ರಂದು ಸಂಭವಿಸಿದೆ. 2024 ರಲ್ಲಿ ಎಷ್ಟು ಸಂಪೂರ್ಣ ಗ್ರಹಣಗಳು ಸಂಭವಿಸುತ್ತವೆ ಮತ್ತು ಯಾವ ಗ್ರಹಣಗಳು ಯಾವಾಗ ಸಂಭವಿಸುತ್ತವೆ ಎಂಬುದನ್ನು ನೋಡಿ.
ಹಿಂದೂ ಧರ್ಮದಲ್ಲಿ ಚಂದ್ರಗ್ರಹಣ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.ಗ್ರಹಣವು ಧಾರ್ಮಿಕ ಮಹತ್ವವನ್ನು ಹೊಂದಿದೆ.ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸದ ಚಂದ್ರಗ್ರಹಣವು ಧಾರ್ಮಿಕ ಮಹತ್ವವನ್ನು ಹೊಂದಿಲ್ಲ.
2024 ರಲ್ಲಿ ಮೊದಲ ಚಂದ್ರಗ್ರಹಣವು ಸೋಮವಾರ ಮಾರ್ಚ್ 25, 2024 ರಂದು ಸಂಭವಿಸುತ್ತದೆ.2024 ರ ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18,2024 ರಂದು ಬುಧವಾರ ಸಂಭವಿಸುತ್ತದೆ.
2024 ರ ಮೊದಲ ಸೂರ್ಯಗ್ರಹಣವು ಸೋಮವಾರ ಏಪ್ರಿಲ್ 08, 2024 ರಂದು ಸಂಭವಿಸುತ್ತದೆ.ಇದು ಸಂಪೂರ್ಣ ಸೂರ್ಯ ಗ್ರಹಣ ವಾಗಲಿದೆ. ಇದು ಭಾರದಲ್ಲಿ ಗೋಚರಿಸುವುದಿಲ್ಲ.
2024 ರ ಎರಡನೇ ಸೂರ್ಯಗ್ರಹಣವು ಬುಧವಾರ ಅಕ್ಟೋಬರ್ 2,2024 ರಂದು ಸಂಭವಿಸಲಿದೆ. ಎರಡನೇ ಸೂರ್ಯಗ್ರಹಣ ಭಾರದಲ್ಲಿ ಗೋಚರಿಸುವುದಿಲ್ಲ.