ಏಕಾದಶಿಯಂದು ಜನಿಸಿದ ಮಕ್ಕಳಿಗೆ ಸೋಲಿಲ್ಲ, ಅವರಿಗಿರುತ್ತೆ ವಿಷ್ಣುವಿನ ವಿಶೇಷ ಆಶೀರ್ವಾದ
ಹಿಂದೂ ಧರ್ಮದಲ್ಲಿ, ಪ್ರತಿ ದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಏಕಾದಶಿಯನ್ನು ಎಲ್ಲಕ್ಕಿಂತ ಪ್ರಮುಖ ಎಂದು ನಂಬಲಾಗಿದೆ. ವರ್ಷವಿಡೀ 24 ಏಕಾದಶಿಗಳು ಬರುತ್ತವೆ, ಏಕಾದಶಿಯಲ್ಲಿ ಜನಿಸಿದ ಮಕ್ಕಳ ವಿಶೇಷತೆ ಇಲ್ಲಿದೆ.

ವಿಷ್ಣು ಮತ್ತು ಲಕ್ಷ್ಮಿ ಆಶೀರ್ವಾದ
ಯಾವುದೇ ತಿಂಗಳ ಏಕಾದಶಿಯಂದು ಜನಿಸಿದ ಮಕ್ಕಳಿಗೆ ಭಗವಂತ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದವಿರುತ್ತದೆ. ಈ ಬಾರಿ ವರ್ಷದ ಕೊನೆಯ ಹಾಗೂ ವೈಕುಂಠ ಏಕಾದಶಿ ಇಂದು ಅಂದ್ರೆ ಡಿಸೆಂಬರ್ 30 ರಂದು ಬಂದಿದೆ. 2025ರ ಕೊನೆಯ ಈ ಏಕಾದಶಿ ಸಾಕಷ್ಟು ಮಹತ್ವದ್ದಾಗಿದೆ. ಇಂದು ಜನಿಸಿದ ಮಕ್ಕಳಿಗೆ ವಿಷ್ಣು, ಲಕ್ಷ್ಮಿಯ ಆಶೀರ್ವಾದ ಸದಾ ಸಿಗುತ್ತದೆ. ಈ ದಿನದಂದು ಜನಿಸಿದ ಮಕ್ಕಳು ಸಾಮಾನ್ಯರಲ್ಲ. ಅವರು ಅನೇಕ ವಿಶೇಷ ಗುಣಗಳನ್ನು ಹೊಂದಿರುತ್ತಾರೆ.
ಸಾತ್ವಿಕ - ಶಾಂತ ಸ್ವಭಾವ
ಶಾಸ್ತ್ರಗಳ ಪ್ರಕಾರ ವೈಕುಂಠ ಏಕಾದಶಿ ಅಥವಾ ಯಾವುದೇ ಏಕಾದಶಿ ತಿಥಿಯಂದು ಜನಿಸಿದ ಮಕ್ಕಳು ತುಂಬಾ ಶಾಂತ ಸ್ವಭಾವ ಹೊಂದಿರುತ್ತಾರೆ. ಸರಳ ಸ್ವಭಾವದವರಾಗಿರುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಗಂಭೀರ ಸ್ವಭಾವ ಅವರಲ್ಲಿ ಕಾಣಬಹುದು. ಇವರು ಬುದ್ಧಿವಂತರು ಮತ್ತು ಸೌಮ್ಯ ಮತ್ತು ಸಭ್ಯ ನಡವಳಿಕೆಯನ್ನು ಹೊಂದಿರುತ್ತಾರೆ.
ಆಧ್ಯಾತ್ಮಿಕ ಒಲವು
ಏಕಾದಶಿ ತಿಥಿಯಂದು ಜನಿಸಿದ ಮಕ್ಕಳು ವಿಷ್ಣುವಿನಿಂದ ಆಶೀರ್ವಾದ ಪಡೆಯುತ್ತಾರೆ. ಏಕಾಗ್ರತೆ ಅವರಲ್ಲಿ ಹೆಚ್ಚಿರುತ್ತದೆ. ಈ ಮಕ್ಕಳು ಅಧ್ಯಯನದ ಜೊತೆಗೆ ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ನಂಬಿಕೆ ಹೊಂದಿದ್ದಾರೆ.
ಸುಳ್ಳು ಮತ್ತು ಕುತಂತ್ರದಿಂದ ದೂರ
ಏಕಾದಶಿಯಂದು ಜನಿಸಿದ ಮಕ್ಕಳು ಸುಳ್ಳು ಮತ್ತು ಕುತಂತ್ರದಿಂದ ದೂರವಿರುತ್ತಾರೆ. ಈ ಗುಣ ಅವರಿಗೆ ವಿಷ್ಣುವಿನ ಕೃಪೆಯಿಂದ ಲಭಿಸಿರುತ್ತದೆ. ಅವರು ಸತ್ಯದ ಹಾದಿಯಲ್ಲಿ ಮಾತ್ರ ಯಶಸ್ಸನ್ನು ಸಾಧಿಸುತ್ತಾರೆ. ಹಾಗಾಗಿ ಸತ್ಯದ ದಾರಿಯಲ್ಲಿ ನಡೆಯಲು ಬಯಸ್ತಾರೆ.
ಕಷ್ಟಕ್ಕೆ ಹೆದರುವುದಿಲ್ಲ
ಏಕಾದಶಿಯಂದು ಜನಿಸಿದ ಮಕ್ಕಳಲ್ಲಿ ವಿಶೇಷ ಗುಣವಿದೆ. ಅವರು ತಾಳ್ಮೆ ಸ್ವಭಾವ ಹೊಂದಿರುತ್ತಾರೆ. ಈ ಗುಣ ಅವರಲ್ಲಿ ಸಹಜವಾಗಿ ಬಂದಿರುತ್ತದೆ. ಜೀವನ ಎಷ್ಟೇ ಕಷ್ಟಕರವಾಗಿದ್ದರೂ, ಅವರು ಭಯಭೀತರಾಗುವುದಿಲ್ಲ. ಎಲ್ಲ ಕಷ್ಟವನ್ನು ಎದುರಿಸಿ ಅವರು ಜೀವನಬದ ಜೊತೆ ಹೋರಾಡಿ ಯಶಸ್ವಿಯಾಗುತ್ತಾರೆ.
ಕರುಣಾಮಯಿ
ಏಕಾದಶಿಯಂದು ಜನಿಸಿದ ಮಕ್ಕಳು ದಾನಶೀಲ ಮತ್ತು ಕರುಣಾಮಯಿ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಸದಾ ಯಾರಿಗಾದರೂ ಸಹಾಯ ಮಾಡಲು ಸಿದ್ಧರಿರುತ್ತಾರೆ. ಅವರು ಯಾವುದೇ ಜೀವಿಗೆ ತೊಂದರೆ ಕೊಡುವುದಿಲ್ಲ. ಅವರು ತಮ್ಮ ಕುಟುಂಬಕ್ಕೆ ಕೀರ್ತಿ ತರುತ್ತಾರೆ. ಅವರು ಯಾವುದೇ ಕೆಲಸ ಮಾಡಿದರೂ, ಅದನ್ನು ಸಂಪೂರ್ಣ ಸಮರ್ಪಣೆ ಮತ್ತು ಏಕಾಗ್ರತೆಯಿಂದ ಮಾಡುತ್ತಾರೆ. ಅವರು ಅದರಲ್ಲಿ ಯಶಸ್ಸನ್ನು ಸಹ ಸಾಧಿಸುತ್ತಾರೆ.

