ಅಕ್ಟೋಬರ್ 19 ರಂದು ತುಲಾ ರಾಶಿಯಲ್ಲಿ ಮಂಗಳ . ಸೂರ್ಯ, ಬುಧ , ಈ ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ
ತುಲಾ ರಾಶಿಯಲ್ಲಿ ನಾಲ್ಕು ಗ್ರಹಗಳು ಒಟ್ಟಿಗೆ ಬರಲಿವೆ ಯಾವುದೇ ರಾಶಿಚಕ್ರ ಚಿಹ್ನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗವು ಜ್ಯೋತಿಷ್ಯದಲ್ಲಿ ಪ್ರಮುಖ ಘಟನೆ ಎಂದು ಪರಿಗಣಿಸಾಗುತ್ತದೆ.ಇದರಿಂದ ಚತುರ್ಗ್ರಾಹಿಯೋಗ ಉಂಟಾಗುತ್ತದೆ.
ಅಕ್ಟೋಬರ್ 19 ರಂದು ತುಲಾ ರಾಶಿಯಲ್ಲಿ ಗ್ರಹಗಳು ಒಟ್ಟಿಗೆ ಸೇರಲಿದೆ.ಒಂದೇ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯು ಅನೇಕ ಬಾರಿ ಸಂಭವಿಸುತ್ತದೆ. ಈ ತುಲಾ ರಾಶಿಯಲ್ಲಿ ನಾಲ್ಕು ಗ್ರಹಗಳು ಒಟ್ಟಿಗೆ ಇರಲಿದೆ ಇದರಿಂದ ಚತುರ್ಗ್ರಾಹಿಯೋಗ ಉಂಟಾಗುತ್ತದೆ.
ಈಗ ಅಕ್ಟೋಬರ್ 18 ರಂದು ಗ್ರಹಗಳ ರಾಜನಾದ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 19 ರಂದು ಬುಧ ಕೂಡ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ.
ತುಲಾ ರಾಶಿಯಲ್ಲಿ ರೂಪುಗೊಂಡ ಚತುರ್ಗ್ರಾಹಿಯೋಗ ಕರ್ಕ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ಆರ್ಥಿಕ ಪ್ರಗತಿಯನ್ನು ಪಡೆಯಬಹುದು. ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ.ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ.
ಸಿಂಹ ರಾಶಿಯವರಿಗೆ ನಾಲ್ಕು ಗ್ರಹಗಳ ಸಂಯೋಗವು ಪ್ರಯೋಜನಕಾರಿಯಾಗಲಿದೆ.ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ವ್ಯಾಪಾರದಲ್ಲಿ ಲಾಭವನ್ನು ಪಡೆಯಬಹುದು.ಹೊಸ ವೃತ್ತಿ ಸಂಬಂಧಿತ ಅವಕಾಶಗಳನ್ನು ಪಡೆಯಬಹುದು.
ತುಲಾ ರಾಶಿಯಲ್ಲಿ ರೂಪುಗೊಂಡ ಚತುರ್ಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು.ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಬಹುದು. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆ ಇದೆ.