- Home
- Astrology
- Festivals
- Chanakya Niti: ಪತಿ-ಪತ್ನಿ ಈ ನಾಲ್ಕು ವಿಷ್ಯಗಳ ಬಗ್ಗೆ ನಾಚಿಕೆ ಬಿಟ್ರೆ ದಾಂಪತ್ಯ ಜೀವನ ಬೊಂಬಾಟ್
Chanakya Niti: ಪತಿ-ಪತ್ನಿ ಈ ನಾಲ್ಕು ವಿಷ್ಯಗಳ ಬಗ್ಗೆ ನಾಚಿಕೆ ಬಿಟ್ರೆ ದಾಂಪತ್ಯ ಜೀವನ ಬೊಂಬಾಟ್
Chanakya Niti: ಗಂಡ ಹೆಂಡತಿಯ ಸಂಬಂಧವು ಅತ್ಯಂತ ವಿಶೇಷವಾದದ್ದು. ಏಳು ಜನ್ಮಗಳ ಬಂಧವಾಗಿರುವ ಈ ಸಂಬಂಧವು ತುಂಬಾ ಸೂಕ್ಷ್ಮವಾಗಿದೆ. ಈ ಬಂಧದ ಶಾಶ್ವತವಾಗಿರಬೇಕು ಎಂದು ನೀವು ಬಯಸಿದ್ರೆ ಆಚಾರ್ಯ ಚಾಣಕ್ಯ ತಿಳಿಸಿದಂತಹ ಯಶಸ್ವಿ ದಾಂಪತ್ಯ ಜೀವನದ ಸಲಹೆಗಳನ್ನು ನೀವು ಪಾಲಿಸಬೇಕು.

ಸಂತೋಷದ ದಾಂಪತ್ಯಕ್ಕೆ ಚಾಣಕ್ಯನ ನಾಲ್ಕು ಸಲಹೆಗಳು
ಪ್ರತಿಯೊಬ್ಬರೂ ಸಂತೋಷದ ದಾಂಪತ್ಯ ಜೀವನವನ್ನು ಬಯಸುತ್ತಾರೆ, ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಕೆಲವೊಮ್ಮೆ ದಂಪತಿಗಳು ಹೆಚ್ಚು ಪ್ರಯತ್ನ ಪಟ್ಟ ಬಳಿಕವೂ ಅವರು ಅನ್ಯೋನ್ಯವಾಗಿರಲು ಸಾಧ್ಯವಾಗೋದಿಲ್ಲ. ಅದಕ್ಕಾಗಿ ಚಾಣಕ್ಯ ನೀತಿಯನ್ನು ಪಾಲಿಸಬೇಕು.
ವಿವಾಹಿತ ದಂಪತಿಗಳಿಗೆ ಚಾಣಕ್ಯನ ನೀತಿಗಳು
ಚಾಣಕ್ಯ ನೀತಿಯ ಪ್ರಕಾರ, ನೀವು ಸಂತೋಷದ ದಾಂಪತ್ಯ ಜೀವನವನ್ನು ಬಯಸಿದರೆ, ಗಂಡ ಮತ್ತು ಹೆಂಡತಿಯ ನಡುವೆ ಈ ನಾಲ್ಕು ವಿಷಯಗಳಲ್ಲಿ ಯಾವುದೇ ನಾಚಿಕೆ ಇರಬಾರದು. ಆ ನಾಲ್ಕು ವಿಷಯಗಳು ಯಾವುವು ಎಂಬುದನ್ನು ಕಂಡುಕೊಳ್ಳಿ:
ಅಧಿಕಾರವನ್ನು ಸ್ಥಾಪಿಸುವುದು
ಚಾಣಕ್ಯ ನೀತಿ ಹೇಳುವಂತೆ ಮದುವೆಯ ನಂತರ ದಂಪತಿಗಳು ಪರಸ್ಪರರ ಮೇಲೆ ಅಧಿಕಾರವನ್ನು ಸ್ಥಾಪಿಸಲು ನಾಚಿಕೆಪಡಬಾರದು. ಅಧಿಕಾರ ಅಂದರೆ ಡಾಮಿನೆಂಟ್ ಮಾಡೋದು ಅಂತ ಅಲ್ಲ. ಪ್ರೀತಿಯ ಅಧಿಕಾರ. ಇದರಿಂದ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತೆ. ಗಂಡನಿಗೆ ಪ್ರೀತಿಯಿಂದ ತಿನ್ನಿಸುವ ಅಧಿಕಾರ, ಪ್ರೀತಿಯಿಂದ ಏನನ್ನಾದರು ಕೊಡುವ ಅಧಿಕಾರ ಹೆಂಡ್ತಿಗೆ ಇರಬೇಕು.
ಸಮರ್ಪಣೆ ತೋರಿಸುವುದು
ಪತಿ-ಪತ್ನಿಯರು ಪರಸ್ಪರರಿಗೆ ಎಷ್ಟು ಸಮರ್ಪಿತರಾಗಿದ್ದಾರೆಂದು ತಿಳಿಸಲು ಎಂದಿಗೂ ಹಿಂಜರಿಯಬಾರದು ಎಂದು ಚಾಣಕ್ಯ ಹೇಳುತ್ತಾರೆ. ಇದು ಸಂಬಂಧವನ್ನು ಬಲಪಡಿಸುತ್ತದೆ. ಅದಕ್ಕಾಗಿ ನಿಮ್ಮ ಸಂಗಾತಿಗಾಗಿ ಅವರಿಗೆ ಇಷ್ಟ ಇರುವಂತಹ ಏನನ್ನಾದರೂ ನೀವು ಮಾಡಬಹುದು.
ಪ್ರೀತಿ ತೋರಿಸುವುದು
ದಾಂಪತ್ಯದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಪ್ರೀತಿ. ಆದ್ದರಿಂದ, ನೀವು ಸಂತೋಷದ ದಾಂಪತ್ಯ ಜೀವನವನ್ನು ಬಯಸಿದರೆ, ಪರಸ್ಪರ ಪ್ರೀತಿಯನ್ನು ತೋರಿಸಲು ಹಿಂಜರಿಯಬೇಡಿ. ಅದು ಯಾವುದೇ ಸಮಯ ಇರಲಿ, ಸಂದರ್ಭ ಇರಲಿ ಪ್ರೀತಿ ತೋರಲು ಮರೆಯಬೇಡಿ.
ಮುಕ್ತವಾಗಿ ಮಾತನಾಡುವುದು
ಚಾಣಕ್ಯ ನೀತಿ ಹೇಳುವಂತೆ, ಪತಿ ಅಥವಾ ಪತ್ನಿಗೆ ಮೂರನೇ ವ್ಯಕ್ತಿ ಹೇಳುವ ಯಾವುದೋ ವಿಷಯದಿಂದ ನೋವಾಗಿದ್ದರೆ, ಅವರು ಮುಕ್ತವಾಗಿ ಮಾತನಾಡಲು ನಾಚಿಕೆಪಡಬಾರದು. ಒಬ್ಬರಿಗೊಬ್ಬರು ಮುಕ್ತವಾಗಿ ಮಾತನಾಡಿದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ.
ಈ ವಿಷಯಗಳನ್ನು ನೆನಪಿಡಿ
ನಿಮ್ಮ ವೈವಾಹಿಕ ಜೀವನವು ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯಬೇಕೆಂದು ನೀವು ಬಯಸಿದರೆ, ಚಾಣಕ್ಯನ ಈ ನಾಲ್ಕು ವಿಷಯಗಳನ್ನು ನೆನಪಿಡಿ. ಖಂಡಿತವಾಗಿಯೂ ಜೀವನ ಬೊಂಬಾಟ್ ಆಗಿರುತ್ತೆ.