'ಭೂತ ಕೋಲ' ಮೇಲೆ ವ್ಯಾಪಾರಕ್ಕಿಳಿದ ಟ್ರಾವೆಲ್ ಏಜೆನ್ಸಿ, 'ನಿಮ್ಮ ತೀರ್ಮಾನ ನಾವ್ ಮಾಡ್ತೀವಿ' ಎಂದ ಕರಾವಳಿ ಜನರು!
ಕಾಂತಾರ ಚಿತ್ರದ ಮೂಲಕ ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ಧಿಯಾಗಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ವಿದೇಶಿಗರು ಕೂಡ ಭೂತ ಕೋಲ ಆಚರಣೆಯ ಕುರಿತ ಮಾತುಗಳನ್ನಾಡುತ್ತಿದ್ದಾರೆ. ಆದರೆ ಇಲ್ಲಿ ಟ್ರಾವೆಲ್ ಏಜೆನ್ಸಿ ಒಂದು ಕಾಂತಾರ ತೋರಿಸಿ ಹೊಸ ವ್ಯಾಪಾರಕ್ಕಿಳಿದಿದೆ.
ಕಾಂತಾರ ಸಿನಿಮಾ ಬಳಿಕ ಭೂತಕೋಲ ಕ್ರೇಜ್ ಹೆಚ್ಚಾಗಿದೆ. ಕಾಂತಾರ -1 ಟೀಸರ್ ರಿಲೀಸ್ ಬೆನ್ನಲ್ಲೆ ಕರಾವಳಿಯಲ್ಲಿ ಹೊಸ ವಿವಾದ ಉಂಟಾಗಿದೆ.ಇಷ್ಟು ದಿನ ಕರಾವಳಿಗರನ್ನಷ್ಟೇ ಸೆಳೆಯುತ್ತಿದ್ದ ಭೂತಕೋಲ ಕಾಂತಾರ ಬಳಿಕ ಭೂತಕೋಲ, ದೈವದ ಬಗ್ಗೆ ಹೆಚ್ಚಿದ ಜನರ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡಿದೆ ಟ್ರಾವೆಲ್ ಏಜೆನ್ಸಿಗಳು.
ಟ್ರಾವೆಲ್ ಏಜೆನ್ಸಿಗಳಿಂದ ಹೊಸ ಟೂರ್ ಪ್ಯಾಕೇಜ್ ಆಫರ್ ನೀಡಲಾಗಿದೆ.ದೈವಕೋಲದ ವೀಕ್ಷಣೆಗೆ ಟೂರ್ ಪ್ಯಾಕೇಜ್ ಆಫರ್‘ಭೂತ ಕೋಲ’ A night with ancient spirits ಹೆಸರಿನಲ್ಲಿ ಆಫರ್ ನೀಡುವ ಮೂಲಕ ತುಳುನಾಡಿನ ನಂಬಿಕೆಯ ದೈವಾರಾಧನೆ ಹೆಸರಲ್ಲಿ ಹೊಸ ದಂಧೆ ಹುಟ್ಟಿಕೊಂಡಿದೆ.
ಈವೆಂಟ್ ರೀತಿ ದೈವನರ್ತನ ವೀಕ್ಷಣೆಗೆ ಟಿಕೆಟ್ ದರ ಫಿಕ್ಸ್ ಮಾಡಲಾಗಿದೆ. travelbuddy ಎಂಬ ಏಜೆನ್ಸಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ನ್ನು ಬಿಟ್ಟಿದೆ. ಟ್ರಾವೆಲ್ ಏಜೆನ್ಸಿ ಪೋಸ್ಟರ್ ವಿರುದ್ಧ ಕರಾವಳಿ ಮಂದಿ ಆಕ್ರೋಶ ಹೊರಕಾಕಿದ್ದಾರೆ.
ಕರಾವಳಿಯ ಕಲೆ, ಸಂಸ್ಕೃತಿ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಪ್ರಕಟ ಮಾಡಿದೆ. ಅದರಲ್ಲಿ ದೈವಾರಾಧನೆ ಜತೆ ಪ್ರವಾಸಿತಾಣಗಳನ್ನು ತೋರಿಸುವುದಾಗಿ ಪೋಸ್ಟ್ ಹಾಕಲಾಗಿದ್ದು ,ಪ್ರತಿ ವ್ಯಕ್ತಿಗೆ 2,899ರೂ. ಟಿಕೆಟ್ ದರ ವಿಧಿಸಿದೆ.
2,899ರೂ. ಕೊಟ್ಟರೆ ಕಂಬಳ, ಭೂತಕೋಲ, ಟ್ರೆಕ್ಕಿಂಗ್ ಸೌಲಭ್ಯ ನೀಡುವುದಾಗಿ ಪೋಸ್ಟರ್ ಮಾಡಿದ್ದಾರೆ . ಇದರ ವಿರುದ್ದ ತುಳುನಾಡಿನ ದೈವಾರಾಧಕರು ಸಿಡಿದು ಇಂಥ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.