ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ವೃತ್ತಿ ಅವಕಾಶ, ಸರಿಯಾದ ಹಾದಿಯಲ್ಲಿದ್ದೀರಾ ಚೆಕ್ ಮಾಡಿ
ನಿಮ್ಮ ವೃತ್ತಿ (Career) ಮತ್ತು ಹುಟ್ಟಿದ ದಿನಾಂಕ (DOB) ಒಂದಕ್ಕೊಂದು ಸಂಬಂಧಿಸಿವೆ. ನಿಮ್ಮ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಇರುವ ವೃತ್ತಿಪರ ಅವಕಾಶಗಳು ಯಾವುದು?

ಹುಟ್ಟಿದ ದಿನಾಂಕದ ಪ್ರಕಾರ ಕೆಲಸದ ಆಯ್ಕೆ
ಕೆಲಸ ಹುಡುಕುವುದು ದೊಡ್ಡ ಸವಾಲು, ಇದರ ಜೊತೆಗೆ ನಮಗಿಷ್ಟವಾದ, ಪೂರಕವಾದ, ಉತ್ತಮ ವೇತನ ಕೆಲಸ ಸಿಗುವುದು ಮತ್ತೊಂದು ಸವಾಲು. ಹಲವರು ತಮ್ಮ ಆಸಕ್ತಿಯ ಕ್ಷೇತ್ರ ಬೇರೆ ಇದ್ದರೂ ಮೊದಲು ಸಿಕ್ಕ ಕೆಲಸಕ್ಕೆ ಸೇರಿ ಬಳಿಕ ಅಲ್ಲೇ ಉಳಿದು ಬಿಡುತ್ತಾರೆ. ಆದರೆ ಜ್ಯೋತಿಷ್ಯಾಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ದಿನಾಂಕಕ್ಕೂ ಕೆಲಸಕ್ಕೂ ಸಂಬಂಧವಿದೆ. ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಹಲವು ವೃತ್ತಿಪರ ಅವಕಾಶಗಳಿವೆ. ಈ ದಾರಿಯಲ್ಲಿ ಸಾಗಿದರೆ ಕೆಲದಲ್ಲಿ ಬಹುಬೇಗನೆ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಕೆಲಸವನ್ನು ಪ್ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.
ಉದಾಹರಣೆಗೆ, 9, 18 ಅಥವಾ 27 ರಂದು ಜನಿಸಿದವರು ಸಾಮಾನ್ಯವಾಗಿ ಕ್ರೀಡಾ ಜಗತ್ತನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಇಂಗ್ಲಿಷ್ ತಿಂಗಳ 1, 10, 19 ಅಥವಾ 28 ರಂದು ಜನಿಸಿದವರು
ಅವರಲ್ಲಿ ಹೆಚ್ಚಿನವರು ಮ್ಯಾನೇಜ್‌ಮೆಂಟ್ ವಿಭಾಗದ ವೃತ್ತಿಯನ್ನು ಆಯ್ಕೆ ಮಾಡಬಹುದು. ಅವರು ಸಣ್ಣ ಅಥವಾ ದೊಡ್ಡ ಯಾವುದೇ ಕಾರ್ಪೊರೇಟ್ ಸಂಸ್ಥೆಯ ಮುಖ್ಯಸ್ಥರಾಗಿ ಕೆಲಸ ಮಾಡಬಹುದು.
ಇಂಗ್ಲಿಷ್ ತಿಂಗಳ 2, 11, 20 ಅಥವಾ 29 ರಂದು ಜನಿಸಿದವರು
ಅವರು ಸೃಜನಶೀಲ ಅಥವಾ ರಾಜತಾಂತ್ರಿಕ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಅವರು ಚಿತ್ರಕಲೆ, ಫ್ಯಾಷನ್ ಡಿಸೈನಿಂಗ್ ಮತ್ತು ನಟನೆಯಂತಹ ವೃತ್ತಿಗಳಿಗೆ ಸಂಬಂಧಿಸಿರಬಹುದು.
ಇಂಗ್ಲಿಷ್ ತಿಂಗಳ 3, 12, 23 ಅಥವಾ 30 ರಂದು ಜನಿಸಿದವರು
ಅವರು ಬ್ಯಾಂಕ್, ಮಾಧ್ಯಮ ಮತ್ತು ರಿಟೇಲರ್ ಸಂಬಂಧಿತ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ ಅಥವಾ ಅಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾರೆ.
ಇಂಗ್ಲಿಷ್ ತಿಂಗಳ 4, 13, 22 ಅಥವಾ 31 ರಂದು ಜನಿಸಿದವರು
ಅವರು ವ್ಯಾಪಾರ ಮಾಡಿದರೆ, ಊಹಾಪೋಹ ಸಂಬಂಧಿತ ಅಥವಾ ವಿಮಾ ಸಂಬಂಧಿತ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ.
ರಿಯಲ್ ಎಸ್ಟೇಟ್ ವ್ಯವಹಾರ
ಉದ್ಯೋಗ ಮಾಡಿದರೆ, ಅವರು ಬಹುತೇಕ ಎಲ್ಲಾ ರೀತಿಯ ಉದ್ಯೋಗಗಳನ್ನು ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ, ಅವರ ಕೆ
ಇಂಗ್ಲಿಷ್ ತಿಂಗಳ 5, 14, ಅಥವಾ 23 ರಂದು ಜನಿಸಿದವರು
ಅವರು ಮಾರಾಟ, ಮಾರ್ಕೆಟಿಂಗ್, ವಿಮೆ, ಪುಸ್ತಕ ಮಾರಾಟ ಅಥವಾ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬಹುದು. ಇಂಗ್ಲಿಷ್ ತಿಂಗಳ 6, 15, ಅಥವಾ 24 ರಂದು ಜನಿಸಿದವರು ಹೋಟೆಲ್ ಅಥವಾ ರೆಸ್ಟೋರೆಂಟ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಹುದು. ಅವರು ಈ ರೀತಿಯ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿರಬಹುದು.
ಇಂಗ್ಲಿಷ್ ತಿಂಗಳ 7, 16, ಅಥವಾ 25 ರಂದು ಜನಿಸಿದವರು
ಇಂಗ್ಲಿಷ್ ತಿಂಗಳ 7, 16, ಅಥವಾ 25 ರಂದು ಜನಿಸಿದವರು : ಅವರು ಸಂಶೋಧನೆಗೆ ಸಂಬಂಧಿಸಿದ ಕೆಲಸವನ್ನು ಆಯ್ಕೆ ಮಾಡಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕೆಲಸಗಳಲ್ಲಿ ಅವರು ತೊಡಗಿಸಿಕೊಳ್ಳಲು ಬಯಸುತ್ತಾರೆ.
ಇಂಗ್ಲಿಷ್ ತಿಂಗಳ 8, 17 ಅಥವಾ 26 ರಂದು ಜನಿಸಿದವರು:ಅವರು ಸಾಮಾನ್ಯವಾಗಿ ತಮ್ಮ ಜೀವನದ ಆರಂಭದಲ್ಲಿ ಉದ್ಯೋಗ ಅಥವಾ ವ್ಯವಹಾರ ಏನೇ ಮಾಡಿದರೂ ಯಶಸ್ಸನ್ನು ಪಡೆಯುವುದಿಲ್ಲ. ಮಧ್ಯ ವಯಸ್ಸಿನ ನಂತರ ಅವರ ಯಶಸ್ಸು ಪ್ರಾರಂಭವಾಗುತ್ತದೆ.
ಜಾಗ-ಜಮೀನು ಸಂಬಂಧಿತ ಉದ್ಯೋಗ ಅಥವಾ ವ್ಯವಹಾರ, ರಿಯಲ್ ಎಸ್ಟೇಟ್ ವ್ಯವಹಾರ
ಸಿವಿಲ್ ಇಂಜಿನಿಯರಿಂಗ್ ಸಂಬಂಧಿತ ಉದ್ಯೋಗ ಅಥವಾ ವ್ಯವಹಾರ, ಖನಿಜಗಳ ವ್ಯವಹಾರ, ಕೃಷಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಅವರು ಮಾಡುತ್ತಾರೆ.
Disclaimer: ಯಾರು ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಂಪೂರ್ಣವಾಗಿ ವೈಯಕ್ತಿಕ ವಿಷಯ. ಇಲ್ಲಿ ಕೆಲವು ವಿಷಯಗಳನ್ನು ಮಾತ್ರ ಹೈಲೈಟ್ ಮಾಡಲಾಗಿದೆ.