ಸಿಟ್ಟಿನಿಂದ ಶಿವನು ಕತ್ತರಿಸಿದ ಗಣೇಶನ ನಿಜವಾದ ತಲೆ ಈಗ ಎಲ್ಲಿದೆ?
ಗಣೇಶನು ಪಾರ್ವತಿಯ ದೇಹದ ಮಣ್ಣಿನಿಂದ ಜನಿಸಿದನು. ಬಳಿಕ ಶಿವನು ಕೋಪದಿಂದ ಗಣೇಶನ ತಲೆಯನ್ನು ದೇಹದಿಂದ ಬೇರ್ಪಡಿಸಿದನು, ಆದರೆ ಗಣೇಶನ ನಿಜವಾದ ಕತ್ತರಿಸಿದ ತಲೆಗೆ ಏನಾಯಿತು ಎಂದು ನಿಮಗೆ ತಿಳಿದಿದೆಯೇ?

ಗಣೇಶನ (Lord Ganesha) ಹುಟ್ಟಿನ ಕಥೆ ನಿಮಗೆ ಗೊತ್ತೇ ಇದೆ ಅಲ್ವಾ? ಆದರೂ ಒಂದು ಸಲ ಕಥೆ ಕೇಳಿ. ಶಿವನಿಗಾಗಿ ಕಾದ ಪಾರ್ವತಿ, ತನ್ನ ದೇಹದ ಮಣ್ಣಿನಿಂದ ಮೂರ್ತಿಯನ್ನು ತಯಾರಿಸಿ, ತನ್ನ ಮಗನೆಂದೇ ತಿಳಿದು, ಅದಕ್ಕೆ ಜೀವ ತುಂಬಿ, ಮನೆಗೆ ಕಾವಲಿರುವಂತೆ ಹೇಳಿದಳು.
ಶಿವನು (Lord Shiva) ಬರುವ ಸಮಯದಲ್ಲಿ ಕಾವಲಿಗಿದ್ದ ಹುಡುಗ, ಒಳಗಡೆ ಬಿಡದಾಗ ಕೋಪಗೊಂಡ ಶಿವನು ಕೋಪದಲ್ಲಿ ಗಣೇಶನ ತಲೆಯನ್ನು ಕತ್ತರಿಸಿದರು. ಆ ತಲೆಯ ಬದಲಾಗಿ ನಂತರ ಶಿವನೇ ಆತನಿಗೆ ಆನೆಯ ತಲೆಯನ್ನು ನೀಡಿದ್ದನು. ನಂತರ ಆತ ಗಜಮುಖನಾದನು.
ನಂಬಿಕೆಯ ಪ್ರಕಾರ, ಶಿವನು ಗಣಪತಿಯ ತಲೆಯನ್ನು ಕತ್ತರಿಸಿದಾಗ, ಆ ತಲೆ ಎಲ್ಲಿ ಬಿದ್ದಿತು ಎಂದು ಯಾರಿಗೂ ತಿಳಿದಿರಲಿಲ್ಲ. ಭಗವಾನ್ ಶಂಕರನು ಗಣೇಶನ ತಲೆಯನ್ನು ಎಷ್ಟು ಕೋಪದಿಂದ ಕತ್ತರಿಸಿದ್ದನೆಂದರೆ ಅವನ ತಲೆ ಭೂಮಿಯ ಮೇಲಿನ ಗುಹೆಯೊಳಗೆ ಬಿದ್ದಿತು ಎಂದು ಹೇಳಲಾಗಿದೆ.
Image: Our Own
ಗಣೇಶನ ತಲೆ ಬಿದ್ದಂತಹ ಗುಹೆ ಉತ್ತರಾಖಂಡ ರಾಜ್ಯದ ಪಿಥೋರಗಢ ಜಿಲ್ಲೆಯಲ್ಲಿದ್ದು, ಇದರ ಹೆಸರು ಪಾತಾಳ ಭುವನೇಶ್ವರ (Patal Bhuvaneshwar). ಇಂದಿಗೂ ಸಹ, ಈ ಗುಹೆಯಲ್ಲಿ ಗಣೇಶನ ಕತ್ತರಿಸಿದ ತಲೆಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
ಈ ಗುಹೆಯಲ್ಲಿ ಕಂಡುಬರುವ ನಾಲ್ಕು ಕಲ್ಲುಗಳು ನಾಲ್ಕು ಯುಗಗಳನ್ನು ಪ್ರತಿನಿಧಿಸುತ್ತವೆ ಮತ್ತು ನಾಲ್ಕನೇ ಕಲ್ಲು ಕಲಿಯುಗದ ಸಂಕೇತವಾಗಿದೆ. ನಾಲ್ಕನೇ ಕಲ್ಲು ಗುಹೆಯ ಗೋಡೆಯನ್ನು ಮುಟ್ಟಿದ ದಿನ ಕಲಿಯುಗ ಕೊನೆಗೊಳ್ಳುತ್ತದೆ ಎಂಬ ಪೌರಾಣಿಕ ನಂಬಿಕೆ ಇದೆ.
ಕೆಲವು ನಂಬಿಕೆಗಳ ಪ್ರಕಾರ, ಶಿವನು ತನ್ನ ತ್ರಿಶೂಲದಿಂದ ಗಣೇಶನ ತಲೆಯನ್ನು ಕತ್ತರಿಸಿದಾಗ, ಆ ತಲೆ ಗಂಗೆಯಲ್ಲಿ ಮುಳುಗಿತು. ಗಂಗಾ ನದಿಯಲ್ಲಿ (Ganga River) ಹರಿಯುವುದರಿಂದ ಗಣೇಶನ ಮೂಲ ತಲೆ ಶಾಶ್ವತವಾಗಿ ಕಳೆದುಹೋಯಿತು ಎನ್ನುವ ನಂಬಿಕೆ ಕೂಡ ಇದೆ.
ಇನ್ನೊಂದು ನಂಬಿಕೆಯ ಪ್ರಕಾರ, ಗಣೇಶನ ಕತ್ತರಿಸಿದ ತಲೆಯನ್ನು ದೇವರುಗಳು ಸ್ವರ್ಗಕ್ಕೆ ತೆಗೆದುಕೊಂಡು ಹೋಗಿ ಸುರಕ್ಷಿತವಾಗಿಟ್ಟರು. ಇನ್ನೂ ಕೆಲವು ತಂತ್ರ ಗ್ರಂಥಗಳ ಪ್ರಕಾರ, ಗಣೇಶನ ತಲೆಯು ದೈವಿಕ ಶಕ್ತಿಯಾಗಿ ರೂಪಾಂತರಗೊಂಡು ಶಿವಲಿಂಗದಲ್ಲಿ ವಿಲೀನವಾಯಿತು.
ಶಿವಲಿಂಗದಲ್ಲಿ ಗಣೇಶ ಸೇರಿದುದರಿಂದ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ ಎಂದೂ ಸಹ ಕೆಲವು ಶಾಸ್ತ್ರಗಳು ಹೇಳುತ್ತವೆ. ಏಕೆಂದರೆ ಅವನ ಮೂಲ ತಲೆಯು ಶಿವನ ಶಕ್ತಿಯಲ್ಲಿ ಲೀನವಾಗಿದೆ. ಇದರಲ್ಲಿ ಯಾವುದು ನಿಜ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಈ ಎಲ್ಲಾ ನಂಬಿಕೆಗಳನ್ನು ಜನರು ನಂಬಿಕೊಂಡು ಬರುತ್ತಿದ್ದಾರೆ.