ತಮ್ಮ ಮುಖದ ಮೇಲಿನ ಮಚ್ಚೆಯಿಂದಲೇ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟ ಸೆಲೆಬ್ರಿಟಿಗಳಿವರು
ಮೇಕಪ್ ಹಾಕಿ ತಮ್ಮ ಮಚ್ಚೆ ಅಥವಾ ಬ್ಯೂಟಿ ಮಾರ್ಕ್ ಗಳನ್ನು ಮರೆಮಾಡದ ಅನೇಕ ಸುಂದರಿಯರು ಸಿನಿಮಾ ಇಂಡಷ್ಟ್ರಿಯಲ್ಲಿದ್ದಾರೆ. ರೇಖಾ, ನಯತಾರರಿಂದ ಹಿಡಿದು ಚೈತ್ರಾ ಆಚಾರ್ ವರೆಗೂ ಈ ನಟಿಯರು ತಮ್ಮ ಮಚ್ಚೆಯಿಂದಲೇ ಸದ್ದು ಮಾಡ್ತಿದ್ದಾರೆ,

ಮಚ್ಚೆ ಹೊಂದಿರುವ ಸುಂದರಿಯರು
ಸೆಲೆಬ್ರಿಟಿಗಳು ತಮ್ಮ ಮುಖದ ಕಲೆಗಳನ್ನು ಮರೆಮಾಡಲು ಏನೇನೋ ಮೇಕಪ್ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ನೈಸರ್ಗಿಕ ಸೌಂದರ್ಯದ ಗುರುತುಗಳನ್ನು ಪ್ರದರ್ಶಿಸಲು ಇಷ್ಟಪಡುತ್ತಾರೆ. ರೇಖಾ ಅವರ ತುಟಿಯ ಮೇಲಿನ ಮಚ್ಚೆಯು ಅನೇಕರ ಹೃದಯಗಳನ್ನು ಗೆದ್ದಿದ್ದು ಸುಳ್ಳಲ್ಲ, ಅಂತಹ ಹಲವು ಸೆಲೆಬ್ರಿಟಿಗಳ ಲಿಸ್ಟ್ ಇಲ್ಲಿದೆ.
ಪರಿಣಿತಿ ಚೋಪ್ರಾ
ಪರಿಣಿತಿ ಚೋಪ್ರಾ ಅವರ ಮೂಗಿನ ಬಳಿ ಮಚ್ಚೆ ಇದೆ. ಅಂತಹ ಗುರುತುಗಳಿಗೆ ಅನೇಕ ಜನರು ಲೇಸರ್ ಮೂಲಕ ತೆಗೆಸುತ್ತಾರೆ. ಆದರೆ ಪರಿಣಿತಿ ತನ್ನ ಸೌಂದರ್ಯದ ಗುರುತನ್ನು ಹಾಗೆ ಇಟ್ಟುಕೊಂಡಿದ್ದಾರೆ.
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ ಅವರ ಕೆನ್ನೆಯ ಬದಿಯಲ್ಲಿ ಮುದ್ದಾದ ಮಚ್ಚೆಯೂ ಇದೆ. ಇದು ಪ್ರತಿಯೊಂದು ಚಿತ್ರ ಅಥವಾ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅನುಷ್ಕಾ ಅದನ್ನು ಎಂದಿಗೂ ಮೇಕಪ್‌ನಿಂದ ಮರೆಮಾಡುವುದಿಲ್ಲ.
ನಯನತಾರಾ
ನಯನತಾರಾ ಅವರ ಮೇಲಿನ ತುಟಿಯ ಮಧ್ಯಭಾಗದಲ್ಲಿ ಬಹಳ ಸಣ್ಣ ಮಚ್ಚೆ ಇದೆ, ಅದು ನಿಸ್ಸಂಶಯವಾಗಿ ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆ ಮಚ್ಚೆಗೆ ಮನಸೋತವರು ಅನೇಕರಿದ್ದಾರೆ.
ಚೈತ್ರಾ ಆಚಾರ್
ಕನ್ನಡ ಸಿನಿಮಾದಲ್ಲಿ ಸದ್ಯ ಸದ್ದು ಮಾಡುತ್ತಿರುವ ಚೈತ್ರಾ ಆಚಾರ್ ಮುಖದ ಮೇಲೆ ಎದ್ದು ಕಾಣುತ್ತಿರುವ ಮಚ್ಚೆ ಆಕೆಯ ಬೋಲ್ಡ್ ನೆಸ್, ಅಂದವನ್ನು ದುಪ್ಪಟ್ಟು ಮಾಡಿದೆ.
ಕತ್ರಿನಾ ಕೈಫ್
ಕತ್ರಿನಾ ಅವರ ಮುಖದ ಮೇಲೆ ಮೂರು ಅಥವಾ ನಾಲ್ಕು ಸಣ್ಣ ಮಚ್ಚೆಗಳಿವೆ. ಆದರೆ ಅವರ ಮೂಗಿನ ಕೆಳಗಿರುವ ಒಂದು ಮಚ್ಚೆಯು ಪಡ್ಡೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅನಿತಾ ಹಸನಂದಾನಿ
ವೀರಕನ್ನಡಿಗ ಸಿನಿಮಾ ಮೂಲಕ ಮನೆ ಮಾತಾದ ಅನಿತಾ ಹಸನಂದಾನಿ ಅವರ ಮುಖದ ಮೇಲೆ ಸುಂದರವಾದ ಬ್ಯೂಟಿ ಮಾರ್ಕ್ ಕೂಡ ಇದೆ, ಅದು ಅವರ ಚಂದ್ರನಂತಹ ಮುಖದ ಮೇಲೆ ಕಪ್ಪು ಚುಕ್ಕೆಯಂತೆ ಕಾಣುತ್ತದೆ.
ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ಅವರ ತುಟಿಯ ಕೆಳಗೆ ಒಂದು ಸಣ್ಣ ಮಚ್ಚೆ ಇದ್ದು, ಅವರ ಅಭಿಮಾನಿಗಳು ಅದನ್ನು ತುಂಬಾ ಇಷ್ಟಪಡುತ್ತಾರೆ.
ರೇಖಾ
ಬಾಲಿವುಡ್ ನ ಹಿರಿಯ ನಟಿ ರೇಖಾ ಅವರ ತುಟಿಯ ಇರುವಂತಹ ಮಚ್ಚೆ ಅವರ ಹೈಲೈಟ್. ಇದು ಅವರ ಸೌಂದರ್ಯವನ್ನು ಎರಡು ಪಟ್ಟು ಹೆಚ್ಚಿಸಿದೆ.
ಜಯಪ್ರದಾ
ಅಣ್ಣಾವ್ರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಅಪ್ರತಿಮ ಸುಂದರಿ ಜಯಪ್ರದಾ ಅವರ ಮೂಗಿನ ಕೆಳಗಿರುವ ಮಚ್ಚೆ ಕೂಡ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಅಂದ್ರೆ ತಪ್ಪಾಗಲ್ಲ.