ರಾಧಿಕಾ ಮರ್ಚೆಂಟ್ ಧರಿಸಿರುವ ಈ ಹಾಟ್ ಬಾಲ್ಮೈನ್ ತುಂಡುಬಟ್ಟೆಗೆ 5.43 ಲಕ್ಷ!
ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಎರಡನೇ ವಿವಾಹಪೂರ್ವ ಸಮಾರಂಭ ಇಟಲಿಯಲ್ಲಿ ನಡೆದ ಕ್ರೂಸ್ ಪಾರ್ಟಿಯ ಒಂದೊಂದೇ ಫೋಟೋಗಳು ಈಗ ಹೊರಬರುತ್ತಿದೆ. ಇದೀಗ ಮತ್ತೊಂದು ಡಿಸೈನರ್ ಓಟ್ಫಿಟ್ ನಲ್ಲಿ ಜೋಡಿ ಹಕ್ಕಿಗಳ ಫೋಟೋ ವೈರಲ್ ಆಗಿದೆ.
ಮೇ 29ರಿಂದ ಜೂ.1ರವರೆಗೆ ಫ್ರಾನ್ಸ್ನಲ್ಲಿ ಮುಕ್ತಾಯಗೊಂಡ ಕ್ರೂಸ್ನಲ್ಲಿ ಅನಂತ್ ರಾಧಿಕಾ ಜೋಡಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟು 4 ದಿನಗಳ ಕಾಲ ನಡೆದ ಈ ಸಮಾರಂಭದ ಒಂದೊಂದೇ ಫೋಟೋಗಳು ಮತ್ತು ಅನಂತ್ ಮತ್ತು ರಾಧಿಕಾ ಧರಿಸಿದ ವಿವಿಧ ಬಟ್ಟೆಗಳು ಒಂದೊಂದು ಡಿಸೈನನಲ್ಲಿದ್ದು ಈಗ ಮತ್ತೊಂದು ಫೋಟೋ ಬಹಿರಂಗವಾಗಿದೆ.
ರಾಧಿಕಾ ಮರ್ಚೆಂಟ್ ಬಾಲ್ಮೈನ್ ಕೆಂಪುಬಣ್ಣದ ಉಡುಪಿನಲ್ಲಿ ಮಿಂಚಿದ್ದು, ಅವರ ಸೌಂದರ್ಯವನ್ನು ದುಪ್ಪಟ್ಟು ಮಾಡಿತ್ತು. ಬೋಲ್ಡ್ ಮತ್ತು ರಚನಾತ್ಮಕ ಶೈಲಿಗೆ ಬಾಲ್ಮೈನ್ ಉಡುಗೆ ಹೆಸರುವಾಸಿಯಾಗಿದೆ.
ರಾಧಿಕಾ ಅವರು ಧರಿಸಿದ ಬಟ್ಟೆಗೆ ಮ್ಯಾಚ್ ಆಗುವಂತೆ ಅನಂತ್ ಅಂಬಾನಿ ಅವರು ಡೋಲ್ಸ್ ಮತ್ತು ಗಬ್ಬಾನಾ ಧರಿಸಿದ್ದರು. ಶಲೀನ ನಾಥನಿ ಅವರು ರಾಧಿಕಾ ಅವರ ಈ ಉಡುಪನ್ನು ಡಿಸೈನ್ ಮಾಡಿದ್ದು, ಅದಕ್ಕೆ ಹೊಂದಿಕೆಯಾಗುವ ಕೆಂಪು ಸ್ಕಾರ್ಫ್, ಡೈಮಂಡ್ ರಿಸ್ಟ್ ಕಫ್, ಸಣ್ಣ ಚೈನ್ನಲ್ಲಿ ಡೈಮಂಡ್ ಪೆಂಡೆಂಟ್, ಡೈಮಂಡ್ ಸ್ಟಡ್ ಕಿವಿಯೋಲೆಗಳು ಮತ್ತು ಸ್ಟೇಟ್ಮೆಂಟ್ ರಿಂಗ್ಗಳೊಂದಿಗೆ ಸ್ಟೈಲ್ ಮಾಡಿದ್ದಾರೆ.
ಮೇ 29 ರಂದು ಇಟಲಿಯಲ್ಲಿ ಪ್ರಾರಂಭವಾದ ಮತ್ತು ಜೂನ್ 1 ರಂದು ಫ್ರಾನ್ಸ್ನಲ್ಲಿ ಕೊನೆಗೊಂಡ ಕ್ರೂಸ್ನಲ್ಲಿ ಭಾವೀ ದಂಪತಿಗಳು ಎರಡನೇ ದಿನದ ಪೂರ್ವ ವಿವಾಹದ ಆಚರಣೆ ವೇಳೆ ಈ ಬಟ್ಟೆ ಧರಿಸಿದ್ದರು. ಈ ಸಿಂಪಲ್ ಬಟ್ಟೆಯ ಬೆಲೆ ಬರೋಬ್ಬರಿ 5.43 ಲಕ್ಷವಂತೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ವಿವಾಹವಾಗಲಿದ್ದಾರೆ. ಅವರ ವಿವಾಹವು ಮೂರು ದಿನಗಳ ಕಾಲ ನಡೆಯಲಿದ್ದು ಜುಲೈ 14 ರಂದು ಆರತಕ್ಷತೆ 'ಮಂಗಲ್ ಉತ್ಸವ' ದೊಂದಿಗೆ ಮುಕ್ತಾಯವಾಗಲಿದೆ.