- Home
- Life
- Fashion
- ಅತ್ತ ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿ; ಇತ್ತ ರಾಜಸ್ಥಾನದ ಸೌಂದರ್ಯ ಸವಿಯುತ್ತಿರೋ ಪತ್ನಿ ವಿಜಯಲಕ್ಷ್ಮೀ!
ಅತ್ತ ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿ; ಇತ್ತ ರಾಜಸ್ಥಾನದ ಸೌಂದರ್ಯ ಸವಿಯುತ್ತಿರೋ ಪತ್ನಿ ವಿಜಯಲಕ್ಷ್ಮೀ!
ರಾಜಸ್ಥಾನದಲ್ಲಿ ನಟ ದರ್ಶನ್ ತೂಗುದೀಪ ಅವರು ʼದಿ ಡೆವಿಲ್ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ವಿಜಯಲಕ್ಷ್ಮೀ ಅವರು ರಾಜಸ್ಥಾನದ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಕನ್ನಡ ನಟ ದರ್ಶನ್ ಅವರು ʼದಿ ಡೆವಿಲ್ʼ ಸಿನಿಮಾ ಶೂಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಇಷ್ಟೊತ್ತಿಗೆ ರಿಲೀಸ್ ಆಗಬೇಕಿತ್ತು. ಆದರೆ ದರ್ಶನ್ ಅವರು ಜೈಲಿಗೆ ಹೋಗಿದ್ದಕ್ಕೆ ತಡವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವಿಜಯಲಕ್ಷ್ಮೀ ದರ್ಶನ್ ಅವರು ರಾಜಸ್ತಾನದ ಈ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಚೂಡಿದಾರ ಧರಿಸಿ ಅವರು ರಾಜಸ್ಥಾನದ ಸುಂದರ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ವಿಜಯಲಕ್ಷ್ಮೀ ಅವರು ವೆಸ್ಟರ್ನ್, ಟ್ರೆಡಿಷನಲ್ ಡ್ರೆಸ್ ಧರಿಸಿ ಸಾಕಷ್ಟು ರೆಸ್ಟೋರೆಂಟ್‌ಗಳಿಗೆ ಭೇಟಿ ಕೊಡುತ್ತಿರುತ್ತಾರೆ.
ಪ್ರದೇಶದ ಆಧಾರದ ಮೇಲೆ ರಾಜಸ್ಥಾನವು ಅತಿ ಉದ್ದದ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದೆ. ಇಲ್ಲಿನ ಉಡುಪು, ವಾಸ್ತುಶಿಲ್ಪ, ಆಹಾರ ಪದ್ಧತಿ ಎಲ್ಲವೂ ಡಿಫರೆಂಟ್ ಆಗಿದೆ.
ಜಾರ್ಜ್ ಥಾಮಸ್ ಅವರು ಈ ರಾಜ್ಯಕ್ಕೆ ರಾಜಸ್ಥಾನ ಎಂದು ಹೆಸರಿಟ್ಟರು. ಇಲ್ಲಿ ಒಂದು ಕಡೆ ಮರುಭೂಮಿ, ಇನ್ನೊಂದು ಕಡೆ ಸರಸ್ವತಿ ನದಿ ಹರಿಯುವುದು.
ವಿಜಯಲಕ್ಷ್ಮೀ ದರ್ಶನ್ ಅವರು ರಾಜಸ್ಥಾನದ ಈ ಸುಂದರ ಸ್ಥಳ ನೋಡಿ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಬ್ರಂಚ್ ( ತಡವಾಗಿ ತಿನ್ನುವ ತಿಂಡಿ, ಊಟಕ್ಕೂ ಮೊದಲು) ಮಾಡಿರೋದಾಗಿ ಹೇಳಿಕೊಂಡಿದ್ದಾರೆ.