ಹೆಸರಿಗಷ್ಟೇ ಸಿಂಗಲ್ ಮದರ್: ಮಕ್ಕಳಿಗೆ ಈ ನಟಿಯರು ಕೊಟ್ಟ ಪ್ರೀತಿ ಡಬಲ್

First Published 12, May 2019, 5:24 PM

ಇಂದು ಅಮ್ಮಂದಿರ ದಿನ, ಅಮ್ಮಂದಿರಿಗೆಂದೇ ಮೀಸಲಿಟ್ಟ ದಿನ. ಅಮ್ಮ ಎಂದರೇ ವಿಶೇಷ, ಆಕೆಯ ಮಮತೆ, ಪ್ರೀತಿ, ಕಾಳಜಿ, ಸಹನೆಗೆ ಸರಿ ಸಾಟಿಯಿಲ್ಲ. ತನ್ನ ನೋವನ್ನು ಮರೆತು, ಮಕ್ಕಳ ಸುಖವನ್ನು ಬಯಸುವ ಅಮ್ಮನನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಅಮ್ಮಂದಿರ ದಿನವಾದ ಇಂದು ಅನಾಥ ಮಕ್ಕಳನ್ನು ದತ್ತು ಪಡೆದ ಹಾಗೂ ಪತಿಯನ್ನು ಅವಲಂಭಿಸದೆ ಸಿಂಗಲ್ ಮದರ್ಸ್ ಆದ ಬಾಲಿವುಡ್ ನಟಿಯರನ್ನು ನೆನಪಿಸಿಕೊಳ್ಳಲೇಬೇಕು. ಅಂದ ಹಾಗೆ ಇವರೆಲ್ಲರೂ ಸಿಂಗಲ್ ಮದರ್ಸ್ ಆಗಿದ್ದರೂ ಮಕ್ಕಳಿಗೆ ಕೊಟ್ಟ ಪ್ರೀತಿ ಮಾತ್ರ ಡಬಲ್

ಬಾಲಿವುಡ್ ತಾರೆ ಹಾಗೂ ಮಾಜಿ ಮಿಸ್ ಯುನಿವರ್ಸ್ ಸುಶ್ಮಿತಾ ಸೇನ್ ಗೆ 43 ವರ್ಷ, ಇವರೊಬ್ಬ ಸಿಂಗಲ್ ಮದರ್. ಸುಶ್ಮಿತಾ 2000ನೇ ಇಸವಿಯಲ್ಲಿ ಓರ್ವ ಮಗುವನ್ನು ದತ್ತು ಪಡೆದಿದ್ದರು. ಈ ಮಗುವಿಗೆ ರಿನೆ ಎಂದು ನಾಮಕರಣ ಮಾಡಿದ್ದರು. ರಿನೆಯನ್ನು ದತ್ತು ಪಡೆದಾಗ. ಸುಶ್ಮಿತಾ ವಯಸ್ಸು ಕೇವಲ 25 ವರ್ಷ.

2010ರಲ್ಲಿ ಸುಶ್ಮಿತಾ ಸೇನ್ ಎರಡನೇ ಮಗು ಅಲೀಜಾರನ್ನು ದತ್ತು ಪಡೆದರು. ಇಬ್ಬರೂ ಮಕ್ಕಳನ್ನು ಜೀವಕ್ಕಿಂತ ಅತಿಯಾಗಿ ಪ್ರೀತಿಸುವ ಸುಶ್ಮಿತಾ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡುತ್ತಿರುತ್ತಾರೆ.

ನಟಿ ರವೀನಾ ಟಂಡನ್ ಚಿಕ್ಕ ವಯಸ್ಸಿನಲ್ಲೇ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು ಎಂಬ ವಿಚಾರ ಕೆಲವರಿಗಷ್ಟೇ ತಿಳಿದಿದೆ. 1994ರಲ್ಲಿ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದ ವೇಳೆ ರವೀನಾರವರ ವಯಸ್ಸು ಕೇವಲ 21 ವರ್ಷ.

ರವೀನಾ ದತ್ತು ಪಡೆದಿದ್ದ ವೇಳೆ ಮಕ್ಕಳಾದ ಪೂಜಾ 11 ವರ್ಷವಾಗಿದ್ದರೆ, ಛಾಯಾ 8 ವರ್ಷದವರಾಗಿದ್ದರು. ಈ ಮಕ್ಕಳ ತಾಯಿ ರವೀನಾರವರ ಸೋದರ ಸಂಬಂಧಿಯಾಗಿದ್ದರು. ಅವರ ಕಸಿನ್ ಮೃತಪಟ್ಟಿದ್ದರಿಂದ ಮಕ್ಕಳನ್ನು ರವೀನಾರವರೇ ಆ ಮಕ್ಕಳನ್ನು ದತ್ತು ಪಡೆದಿದ್ದರು

ಬಾಲಿವುಡ್ ನಟಿ ಕರಿಶ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆ ವಿವಾಹವಾಗಿದ್ದರು. ಮದುವೆ ಬಳಿಕ ಈ ದಂಪತಿಗೆ ಇಬ್ಬರು ಮಕ್ಕಳಾದರು. 2005ರಲ್ಲಿ ಮಗಳು ಸಮಾರ್ರಾ ಜನಿಸಿದರೆ, 2010ರಲ್ಲಿ ಮಗ ಕಿಯಾನ್ ಜನಿಸಿದ.

ಆದರೆ ಕೆಲ ಮನಸ್ತಾಪಗಳಿಂದಾಗಿ 2015ರಲ್ಲಿ ಕರಿಶ್ಮಾ ಹಾಗೂ ಸಂಜಯ್ ಇಬ್ಬರೂ ವಿಚ್ಛೇದನ ಪಡೆದರು. ಡೈವೋರ್ಸ್ ಬಳಿಕ ಇಬ್ಬರೂ ಮಕ್ಕಳ ಆರೈಕೆ ಕರಿಶ್ಮಾ ನೋಡಿಕೊಂಡಿದ್ದಾರೆ.

ಬಾಲಿವುಡ್ ನಟಿ ಪೂಜಾ ಬೇಡಿ, 1994ರಲ್ಲಿ ಫರ್ಹಾನ್ ಇಬ್ರಾಹಿಂ ಫರ್ನೀಚರ್ವಾಲಾರನ್ನು ಮದುವೆಯಾಗಿದ್ದರು. ಈ ದಂಪತಿಗೂ ಇಬ್ಬರು ಮಕ್ಕಳು. 1997ರಲ್ಲಿ ಮಗಳು ಆಲಿಯಾ ಜನಿಸಿದರೆ, ಮೂರು ವರ್ಷದ ಬಳಿಕ 2000ನೇ ಇಸವಿಯಲ್ಲಿ ಮಗ ಉಮರ್ ಇಬ್ರಾಹಿಂ ಜನಿಸಿದ.

ಆದರೆ ಪೂಜಾ ಹಾಗೂ ಇಬ್ರಾಹಿಂ ದಾಂಪತ್ಯ ಜೀವನ ಹೆಚ್ಚು ಕಾಲ ಬಾಳಲಿಲ್ಲ. ಮದುವೆಯಾದ 9 ವರ್ಷದ ಬಳಿಕ 2003ರಲ್ಲಿ ವಿಚ್ಛೇದನ ಪಡೆದರು. ಬಳಿಕ ಪೂಜಾ ಏಕಾಂಗಿಯಾಗಿಯೇ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ಬಾಲಿವುಡ್ ನಟಿ ಅಮೃತಾ ಸಿಂಗ್ 1991ರಲ್ಲಿ ನಟ ಸೈಫ್ ಅಲಿ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆ ಬಳಿಕ ಈ ದಂಪತಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಹೆಸರಿನ ಇಬ್ಬರು ಮಕ್ಕಳಾದರು.

ಆದರೆ ದಾಂಪತ್ಯ ಜೀವನದಲ್ಲಿ ತಲೆದೋರಿದ ಮನಸ್ತಾಪದಿಂದಾಗಿ ಮದುವೆಯಾದ 13 ವರ್ಷಗಳ ಬಳಿಕ ಮೃತಾ ಹಾಗೂ ಸೈಫ್ ಇಬ್ಬರೂ ವಿಚ್ಛೇದನ ಪಡೆದುಕೊಂಡರು. ಬಳಿಕ ಅಮೃತಾರವರೇ ಇಬ್ಬರೂ ಮಕ್ಕಳನ್ನು ಬೆಳೆಸಿದ್ದಾರೆ.

ನಟಿ ನೀನಾ ಗುಪ್ತಾ ಕೂಡಾ ಓರ್ವ ಸಿಂಗಲ್ ಮದರ್. ನೀನಾ ಮಗಳು ಮಸಾಬಾ ಗುಪ್ತಾ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿದ್ದಾರೆ. ನೀನಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವ್ ರಿಚರ್ಡ್ಸ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗಲಿಲ್ಲ.

ಮಸಾಬಾ ನೀನಾ ಹಾಗೂ ವಿವ್ ಇಬ್ಬರಿಗೂ ಓರ್ವ ಮಗಳಿದ್ದಾಳೆ. ನೀನಾ ಏಕಾಂಗಿಯಾಗಿ ತನ್ನ ಮಗಳ ಆರೈಕೆ ಮಾಡಿದ್ದಾರೆ.