'ಇದು ಪೆಂಡಮಿಕ್ ಕಾಲ್' ಕುಂಭ ಮೇಳಕ್ಕೆ ಮಲೈಕಾ ಬೇಸರ
ಮುಂಬೈ (ಏ. 16) ಕೊರೋನಾ ಆತಂಕದ ಸಂದರ್ಭದಲ್ಲಿ ಕುಂಭಮೇಳ ನಡೆದಿದೆ. ಹರಿದ್ವಾರದ ಕುಂಭಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದಕ್ಕೆ ನಟಿ ಮಲೈಕಾ ಅರೋರಾ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಕುಂಭಮೇಳದ ಪೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ.
ಇದು ಪೆಂಡಮಿಕ್ ಸಂದರ್ಭ.. ಈ ಪೋಟೋ ಆಘಾತಕಾರಿ ಎಂದು ಹೇಳಿದ್ದರು.
ಬಾಲಿವುಡ್ ನ ಇನ್ನು ಹಲವು ಸೆಲೆಬ್ರಿಟಿಗಳು ತಮ್ಮ ಬೇಸರ ಹೊರಹಾಕಿದ್ದಾರೆ.
ಟಿವಿ ನಿರೂಪಕ ಕರಣ್ ವಾಹಿ ಇಸ್ಟಾ ಮೂಲಕ ವಿಚಾರ ಹಂಚಿಕೊಂಡು 1700 ಜನ ಸೊಂಕಿಗೆ ತುತ್ತಾಗುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನೆ ಮಾಡಿದ್ದಾರೆ.
ಕೊರೋನಾ ಕಾರಣಕ್ಕೆ ಕುಂಭ ಮೇಳವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.
ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೂ ಮಲೈಕಾ ಸರಿಯಾದ ಉತ್ತರವನ್ನೇ ನೀಡಿದ್ದರು.
ಬಾಲಿವುಡ್ ಅನೇಕ ಸೆಲಬ್ರಿಟಿಗಳು ಬೇಸರ ವ್ಯಕ್ತಪಡಿಸಿದ್ದಾರೆ.