'ಆಕಾಶ ದೀಪ' ಹೀರೋ ಜಯ್ ಡಿಸೋಜ ಎಲ್ಲೋದ್ರು; ಇಲ್ಲಿದೆ ಮಾಹಿತಿ
ಕನ್ನಡ ಕಿರುತೆರೆಯ ಖ್ಯಾತ ನಟ ಜಯ್ ಡಿಸೋಜ ಆಕಾಶ ದೀಪ ಧಾರಾವಾಹಿ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಮತ್ತೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಜಯ್ ಇದೀಗ ಪಕ್ಕದ ರಾಜ್ಯದ ಪ್ರೇಕ್ಷರನ್ನು ರಂಜಿಸಲು ಹೊರಟಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ನಟ ಜಯ್ ಡಿಸೋಜ ಆಕಾಶ ದೀಪ ಧಾರಾವಾಹಿ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಮತ್ತೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಜಯ್ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ಚಾಕೋಲೇಟ್ ಬಾಯ್ ಎಂದೇ ಖ್ಯಾತಿಗಳಿಸಿದ್ದ ಜಯ್ ಇದೀಗ ಪಕ್ಕದ ರಾಜ್ಯದ ಪ್ರೇಕ್ಷರನ್ನು ರಂಜಿಸಲು ಹೊರಟಿದ್ದಾರೆ.
serial
ಈಗಾಗಲೇ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಮಿಂಚಿರುವ ಜಯ್ ಇದೀಗ ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ತಮಿಳಿನ ಸಿಪಿಕ್ಕುಲ್ ಮುತ್ತು ಧಾರಾವಾಹಿಯಲ್ಲಿ ಜಯ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೊಸ ಜರ್ನಿ ಬಗ್ಗೆ ನಟ ಜಯ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ ಸಖತ್ ಎಕ್ಸಾಯಿಟ್ ಆಗಿರುವುದಾಗಿ ಹೇಳಿದ್ದಾರೆ. 'ತಮಿಳು ಧಾರಾವಾಹಿಯ ಪಾತ್ರ ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿದೆ. ಯಾಕೆಂದರೆ ಶ್ರೀಮಂತ ಮನೆಯ ಮೆಂಟಲಿ ಚಾಲೆಂಜೆಡ್ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ತಂದೆ-ತಾಯಿಗೆ ಬೇಡವಾದ ಮಗ. ಮದುವೆ ಕೂಡ ಆಗುತ್ತೆ. ಆದರೆ ಬೇರೆ ಯಾವುದೋ ಉದ್ದೇಶಕ್ಕೆ ಹುಡುಗಿ ಮದುವೆಯಾಗುತ್ತಾರೆ. ನಾನು ಇಲ್ಲಿ ಕ್ಲೀನ್ ಶೇವ್ ಪಾತ್ರದಲ್ಲಿ ನಟಿಸುತ್ತಿದ್ದೀನಿ' ಎಂದು ಹೇಳಿದ್ದಾರೆ.
ಮಾಡಲಿಂಗ್ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ ಜಯ್ ಡಿಸೋಜ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟರು. 2016ರಲ್ಲಿ ಜಯ್ ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದರು.
2016ರಲ್ಲಿ ಬಂದ ಮನೆದೆವ್ರು ಧಾರಾವಾಹಿ ಮೂಲಕ ಜಯ್ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು. ಬಳಿಕ ತೆಲುಗು ಕಿರುತೆರೆ ಕಡೆ ಮುಖಮಾಡಿದ್ದ ಜಯ್ ಪವಿತ್ರ ಬಂಧನಾಮ್ ಧಾರಾವಾಹಿಯಲ್ಲಿ ಜಯ್ ನಟಿಸಿದರು.
ಮೂರು ವರ್ಷಗಳ ಬಳಿಕ ಜಯ್ ಮತ್ತೆ ಕನ್ನಡ ಕಿರುತೆರೆೆಗೆ ಎಂಟ್ರಿ ಕೊಟ್ಟರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆಕಾಶ ದೀಪ ಧಾರಾವಾಹಿಯಲ್ಲಿ ಜಯ್ ಕಾಣಿಸಿಕೊಂಡರು. ಈ ಧಾರಾವಾಹಿಯಲ್ಲಿ ಜಯ್ ಅಂಧನ ಪಾತ್ರದಲ್ಲಿ ಮಿಂಚಿದರು.
ಕನ್ನಡ ಧಾರಾವಾಹಿ ಮತ್ತು ಪರಭಾಷೆಯ ಧಾರಾವಾಹಿಗಳ ಬಗ್ಗೆ ಮಾತನಾಡಿದ ಜಯ್, 'ಕನ್ನಡದಲ್ಲಿ ನಾವು ನಮ್ಮ ಪಾತ್ರಕ್ಕೆ ಡಬ್ ಮಾಡುತ್ತೇವೆ. ಆದರೆ ತಮಿಳು ಮತ್ತು ತೆಲುಗಿನಲ್ಲಿ ಭಾಷೆ ಚೆನ್ನಾಗಿ ಗೊತ್ತಿದ್ದರೂ ಸಹ ಡಬ್ಬಿಂಗ್ ಕಲಾವಿದರ ಬಳಿ ಮಾಡಿಸುತ್ತಾರೆ' ಎಂದಿದ್ದಾರೆ.
'ನಾನು ನನ್ನ ಪಾತ್ರಕ್ಕೆ ನ್ಯಾಯ ಕೊಡಲು ತಮಿಳು ಕಲಿಯಲು ಪ್ರಯತ್ನಿಸುತ್ತಿದ್ದೀನಿ' ಎಂದು ಜಯ್ ಹೇಳಿದ್ದಾರೆ. ಜಯ್ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಿರ್ದೇಶಕ ಮಿತ್ರ ಅವರ ರಾಗ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಭಾಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.