ಸರಳವಾಗಿ ರಿಜಿಸ್ಟರ್ ಮದುವೆಯಾದ ಚೇತನ್, ಹೊಸ ಸಂಪ್ರದಾಯಕ್ಕೆ ನಾಂದಿ
ಅತೀ ಸರಳವಾಗಿ ಆ ದಿನಗಳು ಚೇತನ್ ಮದುವೆಯಾಗಿದ್ದಾರೆ. ರಿಜಿಸ್ಟರ್ಡ್ ಮದುವೆ ಆಗಿ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟ ಆಚರಿಸುವ ಮೂಲಕ ಮಾದರಿ ನಡೆಗೆ ನಾಂದಿ ಹಾಡಲಿದ್ದಾರೆ.
ಮೇಘ ಎಂಬುವರ ಜತೆ ಚೇತನ್ ವಿವಾಹ ನೆರವೇರಿದೆ.
ಮಧ್ಯಪ್ರದೇಶ ಮೂಲದ ಮೇಘ ಮತ್ತು ಚೇತನ್ ಗೆಳೆಯರು.
ಆ ದಿನಗಳು ಚಿತ್ರದಿಂದ ಹೆಸರಾದ ಚೇತನ್ ಹೋರಾಟಗಳಲ್ಲಿಯೂ ತೊಡಗಿಕೊಂಡವರು.
ಚೇತನ್ ಹೋರಾಟದ ಹಾದಿಗೆ ಇಳಿಯಲು ಪ್ರೇರಣೆ ನೀಡಿದವರೇ ಮೇಘ.
ಹ್ಯೂಮನ್ ರೈಟ್ಸ್ ಲಾ ಓದುತ್ತಿರುವ ಮೇಘ ಜತೆ ಚೇತನ್ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ಈ ವಿವಾಹ ಕೂಟದಲ್ಲಿ ಸಾಂಕೇತಿಕವಾಗಿ ಏಕತೆಯನ್ನು ವಿರೋಧಿಸಿ ಬಹುತ್ವ ಪ್ರತಿಪಾದಿಸಬೇಕು ಅನ್ನುವ ಸಂದೇಶ ನೀಡುತ್ತಿದ್ದೇವೆ ಎಂದು ಚೇತನ್ ತಿಳಿಸಿದ್ದಾರೆ.
ಮದುವೆಗೂ ಮುನ್ನ ಅನಾಥ ಮಕ್ಕಳೊಂದಿಗೆ ಜೋಡಿ ಪೋಟೋ ಶೂಟ್ ಮಾಡಿಸಿಕೊಂಡಿತ್ತು.
ಅದ್ದೂರಿ ಆಹ್ವಾನ ಪತ್ರಿಕೆ ಬದಲಾಗಿ ಪರಿಸರ ಸ್ನೇಹಿ ಆಹ್ವಾನ ಪತ್ರಿಕೆ ರೂಪಿಸಿದ್ದರು.
ಈ ಇಕೋ ಫ್ರೆಂಡ್ಲಿ ಆಹ್ವಾನ ಪತ್ರಿಕೆಯಲ್ಲಿ ಚೆಂಡು ಹೂವಿನ ಬೀಜಗಳನ್ನಿಟ್ಟು ಚೆಂಡು ಹೂವಿನ ಗಿಡ ಮೊಳಕೆ ಒಡೆಯುವಂತೆ ಮಾಡಿ ಪರಿಸರ ಪ್ರೇಮ ಮೆರೆದಿದ್ದರು.
ನೂತನ ದಂಪತಿ
ರಿಜಿಸ್ಟರ್ ಆಫೀಸ್ ನಲ್ಲಿ ಸಹಿ
ಮದುವೆಯ ಕ್ಷಣಗಳು
ಸಂವಿಧಾನದ ಪ್ರತಿ ಓದಿದ ಜೋಡಿ.
ಸರಳವಾಗಿ ಮದುವೆಯಾದ ಜೋಡಿ
ಸತಿ-ಪತಿಗಳಾದ ಮೇಘ-ಚೇತನ್ ರಿಹಿಸ್ಟರ್ ಆಫೀಸ್ ನಲ್ಲಿ ಸರಳ ವಿವಾಹ ಒಪ್ಪಿಗೆ ಪತ್ರಕ್ಕೆ ದಂಪತಿಗಳ ಸಹಿ.
ಚೇತನ್ ಅವರಿಂದಲೂ ಸಹಿ