Success Tips: ಜೀವನದಲ್ಲಿ ಯಶಸ್ವಿಯಾಗಲು ಯಶಸ್ವಿ ಜನರ ಈ 5 ಸೀಕ್ರೆಟ್ ತಿಳಿಯಿರಿ
ಯಶಸ್ಸು ಸಿಗೋದು ಅಷ್ಟೊಂದು ಸುಲಭ ಏನೂ ಇಲ್ಲ. ಕೆಲವೊಮ್ಮೆ ನಮಗೆ ಅನಿಸುತ್ತೆ ನಾವಿಷ್ಟು ಮಾಡಿದ್ರು ಯಾಕೆ ಯಶಸ್ಸು ಸಿಗೋದೆ ಇಲ್ಲ ಎಂದು, ಆದರೆ ಅದಕ್ಕಾಗಿ ನೀವು ಎಷ್ಟು ಕಷ್ಟ ಪಡಬೇಕು ಅನ್ನೋದು ನಿಮಗೆ ಗೊತ್ತೆ? ಯಶಸ್ಸನ್ನು ಸಾಧಿಸಿದ ಪ್ರಪಂಚದಾದ್ಯಂತದ ಜನರು ತಮ್ಮ ಜೀವನ ಕ್ರಮದಲ್ಲಿ ಅಂತಹ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಅವರು ಯಶಸ್ಸಿನ ಏಣಿಯನ್ನು ಏರಲು ಸಾಧ್ಯವಾಗಿದೆ. ನೀವು ಸಹ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಅದಕ್ಕಾಗಿ ನೀವು ಈ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಅವುಗಳ ಬಗ್ಗೆ ತಿಳಿಯೋಣ.
ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಯಾವುದೇ ಶಾರ್ಟ್ ಕಟ್ ಇಲ್ಲ. ಒಬ್ಬ ವ್ಯಕ್ತಿಯು ತನ್ನ ಅದೃಷ್ಟದಿಂದ ಮಾತ್ರ ಯಶಸ್ಸನ್ನು ಪಡೆದಿದ್ದಾನೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು. ಯಶಸ್ಸಿನ ಹಂತವನ್ನು ಸಾಧಿಸಿದ ಪ್ರಪಂಚದಾದ್ಯಂತದ ಜನರು ತಮ್ಮ ಜೀವನ ಕ್ರಮದಲ್ಲಿ (Life Style) ಅಂತಹ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಅವರು ಯಶಸ್ಸಿನ ಏಣಿಯನ್ನು ಏರಲು ಸಾಧ್ಯವಾಗಿದೆ.
ಯಶಸ್ಸು ಪಡೆಯಲು ಅದೃಷ್ಟ ಮುಖ್ಯ ನಿಜಾ, ಅದಕ್ಕಿಂತ ಹೆಚ್ಚಾಗಿ ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳು ತುಂಬಾನೆ ಮುಖ್ಯ. ನೀವು ಸಹ ಜೀವನದಲ್ಲಿ ಯಶಸ್ವಿಯಾಗಲು (success in life) ಒಂದು ಮಾರ್ಗವನ್ನು ಹುಡುಕುತ್ತಿದ್ದರೆ, ಎಲ್ಲಾ ಯಶಸ್ವಿ ಜನರಲ್ಲಿ ಹೆಚ್ಚಾಗಿ ಒಂದೇ ರೀತಿಯಾಗಿ ಕಾಣುವ ವಿಶೇಷ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ. ಅವುಗಳನ್ನು ನಿಮ್ಮ ಜೀವನದಲ್ಲೂ ಅಳವಡಿಸಿ.
ಯಶಸ್ವಿ ಜನರ 5 ಉತ್ತಮ ಅಭ್ಯಾಸಗಳು:
ಬೇಗ ಏಳಿ: ಯಶಸ್ವಿ ಜನರ ಮೊದಲ ಉತ್ತಮ ಅಭ್ಯಾಸವೆಂದರೆ ಅವರು ಬೆಳಿಗ್ಗೆ ಸೂರ್ಯ ಉದಯಿಸುವ ಮೊದಲು ಎಚ್ಚರಗೊಳ್ಳುತ್ತಾರೆ. ರತನ್ ಟಾಟಾ, ಮುಖೇಶ್ ಅಂಬಾನಿ, ಅಮಿತಾಭ್ ಬಚ್ಚನ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಸಹ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ಜನರು, ಅವರು ಬೆಳಿಗ್ಗೆ ಬೇಗನೆ ಏಳುತ್ತಾರೆ. ಯಶಸ್ವಿ ಜನರು ಬೆಳಿಗ್ಗೆ ಎದ್ದು ಧ್ಯಾನ ಮತ್ತು ವ್ಯಾಯಾಮವನ್ನು ಮಾಡುತ್ತಾರೆ, ಏಕೆಂದರೆ ಈ ಜನರ ದೈನಂದಿನ ಕೆಲಸವು ಹೆಚ್ಚಿನ ಜಾಗೃತಿಯೊಂದಿಗೆ ಪೂರ್ಣಗೊಳ್ಳುತ್ತದೆ.
ನಿರಂತರವಾಗಿ ಅಭ್ಯಾಸ ಮಾಡಿ: ಯಶಸ್ವಿ ಜನರು ಯಾವಾಗಲೂ ತಮ್ಮ ಕನಸುಗಳನ್ನು ಈಡೇರಿಸಲು ದೃಢರಾಗಿರುತ್ತಾರೆ. ಯಶಸ್ಸನ್ನು ಸಾಧಿಸಿದವರು ಯಾವಾಗಲೂ ತಮ್ಮ ಕನಸುಗಳನ್ನು ಸಾಧಿಸಲು ಹಠಮಾರಿಗಳಾಗಿರುತ್ತಾರೆ. ತಮ್ಮ ಕನಸನ್ನು ನನಸಾಗಿಸಲು ಅಗತ್ಯವೆಂದು ಅವರು ಭಾವಿಸಿದ ಎಲ್ಲವನ್ನೂ ಅಭ್ಯಾಸ ಮಾಡುತ್ತಾರೆ.
ದೃಢ ಭರವಸೆಗಳು: ಯಶಸ್ವಿ ಜನರು ಯಾವಾಗಲೂ ತಮ್ಮ ನಾಲಿಗೆ ಮತ್ತು ವಾಗ್ದಾನಕ್ಕೆ ಅಂಟಿಕೊಳ್ಳುತ್ತಾರೆ, ಅದು ತಮಗೆ ತಾವೇ ನೀಡಿದ ವಾಗ್ದಾನವಾಗಿದ್ದರೂ ಸಹ, ಏನು ಹೇಳಿರುತ್ತಾರೆಯೋ ಅದನ್ನೇ ಅವರು ಪಾಲಿಸುತ್ತಾರೆ. ನಿಮಗೆ ಏನನ್ನಾದರೂ ಹೇಗೆ ಮಾಡಬೇಕೆಂದು ತಿಳಿದಿಲ್ಲದಿದ್ದರೆ, ಅದನ್ನು ಮಾಡಲು ಹೋಗಬೇಡಿ. ನಿಮಗೆ ಏನು ಮಾಡಲು ಸಾಧ್ಯವೋ ಅದೇ ಪ್ರಾಮಿಸ್ ನ್ನು ನೀವು ಇತರರಿಗೆ ನೀಡಬಹುದು.
ಹೊಸ ವಿಷಯಗಳನ್ನು ಕಲಿಯೋದು: ಯಶಸ್ವಿ ಜನರು ಪ್ರತಿದಿನವೂ ಹೊಸದನ್ನು ಕಲಿಯುತ್ತಲೇ (learning new things) ಇರುತ್ತಾರೆ, ಇದು ಅವರ ಗುರಿಗೆ ಹತ್ತಿರವಾಗಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕಂಫರ್ಟೇಬಲ್ ಝೋನ್ ನ್ನು ತೊರೆದು ಹೊಸ ಜೀವನವನ್ನು ನಡೆಸಲು ಹೊಸ ವಿಷಯಗಳನ್ನು ಕಲಿಯಿರಿ. ಇದರಿಂದ ನಿಮಗೆ ಹೆಚ್ಚಿನ ವಿಷಯ ಅರಿತುಕೊಳ್ಳಲು ಸಾಧ್ಯವಾಗುತ್ತೆ.
ಪ್ಲ್ಯಾನಿಂಗ್: ಜೀವನದಲ್ಲಿ ಯಶಸ್ಸನ್ನು ಪಡೆಯುವ ಜನರ ಈ ಅಭ್ಯಾಸವನ್ನು ನಿರಂತರವಾಗಿ ರೂಢಿಸಿಕೊಳ್ಳಲೇಬೇಕು. ಪ್ಲ್ಯಾನಿಂಗ್ (planning) ನಿಮ್ಮನ್ನು ಮತ್ತು ನಿಮ್ಮ ಸುತ್ತಲಿನ ವಿಷಯಗಳನ್ನು ವ್ಯವಸ್ಥಿತವಾಗಿರಿಸುವುದು ಅಥವಾ ಯೋಜಿತ ರೀತಿಯಲ್ಲಿ ಅವುಗಳ ಮೇಲೆ ಕೆಲಸ ಮಾಡುವುದನ್ನು ಒಳಗೊಂಡಿರುತ್ತದೆ. ಯಶಸ್ಸನ್ನು ಪಡೆಯಲು ನೀವು ನಿಮ್ಮ ಆದ್ಯತೆಗಳು ಮತ್ತು ಗುರಿಗಳನ್ನು ಸಹ ನಿಗದಿಪಡಿಸಬೇಕು.