MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Education
  • School Timing: ಶನಿವಾರ ಸರ್ಕಾರಿ ಶಾಲಾ ಸಮಯ ಬದಲಾವಣೆ: ಇಂದಿನಿಂದಲೇ ಜಾರಿ! ಹೊಸ ಟೈಮಿಂಗ್ ಏನು?

School Timing: ಶನಿವಾರ ಸರ್ಕಾರಿ ಶಾಲಾ ಸಮಯ ಬದಲಾವಣೆ: ಇಂದಿನಿಂದಲೇ ಜಾರಿ! ಹೊಸ ಟೈಮಿಂಗ್ ಏನು?

Karnataka Government School Timing Change: ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಶನಿವಾರದ ದಿನ ಬೆಳಗಿನ ಸಮಯ ಎಷ್ಟು? ತಿಳಿಯಿರಿ

1 Min read
Author : Kannadaprabha News| Kannada Prabha
Published : Jun 27 2026, 05:48 AM IST
Share this Photo Gallery
  • FB
  • TW
  • Linkdin
  • Whatsapp
14
ರಾಜ್ಯಾದ್ಯಂತ ಸರ್ಕಾರಿ ಶಾಲಾ ಸಮಯ ಬದಲಾವಣೆ
Image Credit : Asianet News

ರಾಜ್ಯಾದ್ಯಂತ ಸರ್ಕಾರಿ ಶಾಲಾ ಸಮಯ ಬದಲಾವಣೆ

ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ ಶಾಲೆ ಆರಂಭಿಸಿ ಮಧ್ಯಾಹ್ನ 12. 30ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಏಕರೂಪದ ಸಮಯ ನಿಗದಿಪಡಿಸಿದೆ. ಇದು ಜೂ.27ರ ಶನಿವಾರದಿಂದಲೇ ಜಾರಿಯಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಶನಿವಾರದ ಶಾಲಾ ಸಮಯ ಬದಲಾವಣೆ
Image Credit : Google

ಶನಿವಾರದ ಶಾಲಾ ಸಮಯ ಬದಲಾವಣೆ

ಪ್ರಸ್ತುತ ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಬೇರೆ ಶಾಲಾ ಸಮಯವನ್ನು ಪಾಲಿಸಲಾಗುತ್ತಿದೆ. ಕೆಲವೆಡೆ ಬೆಳಗ್ಗೆ 7.30ರಿಂದ 11.30, ಇನ್ನು ಕೆಲವೆಡೆ ಬೆಳಗ್ಗೆ 8ರಿಂದ 12 ಗಂಟೆ ಹೀಗೆ ಬೇರೆ ಬೇರೆ ಸಮಯ ಪಾಲನೆ ಆಗುತ್ತಿದೆ. ಇದರ ಬದಲು ವಿದ್ಯಾರ್ಥಿ ಹಾಗೂ ಶಿಕ್ಷಕ ಸ್ನೇಹಿಯಾಗಿ ರಾಜ್ಯಾದ್ಯಂತ ಒಂದೇ ಸಮಯ ನಿಗದಿಪಡಿಸಿ ಅದನ್ನು ಅನುಸರಿಸಲು ಸೂಚಿಸಲಾಗಿದೆ.

Related Articles

Related image1
ಫೇಸ್-ಲೊಕೇಶನ್ ಹಾಜರಾತಿ ಎಫೆಕ್ಟ್‌: ನಿಗದಿತ ಸಮಯಕ್ಕೆ ಶಾಲೆ ಅಂಗಳದಲ್ಲಿ ಶಿಕ್ಷಕರು ಹಾಜರ್
Related image2
Now Playing
Ballari Government school Problem: ಬಳ್ಳಾರಿ: 4 ಕೊಠಡಿ, 300 ವಿದ್ಯಾರ್ಥಿಗಳು! ಶಾಲೆಯ ದುಸ್ಥಿತಿ! Suvarna News
34
ಆನ್‌ಲೈನ್ ಹಾಜರಾತಿ ಕಾರಣ:
Image Credit : Asianet News

ಆನ್‌ಲೈನ್ ಹಾಜರಾತಿ ಕಾರಣ:

ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಕರ್ತವ್ಯ ಮೊಬೈಲ್‌ ಅಪ್ಲಿಕೇಷನ್ ಮೂಲಕ ಎಐ ಆಧಾರಿತ ಡಿಜಿಟಲ್‌ ಹಾಜರಾತಿ ಜಾರಿಗೊಳಿಸಿದೆ. ಈವರೆಗೆ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಅವರ ಹಾಜರಿ ದಾಖಲಾಗುತ್ತಿತ್ತು. ಶನಿವಾರ ಬಸ್‌ ಸಿಗದಿರುವುದು ಸೇರಿದಂತೆ ಬೇರೆ ಕಾರಣಗಳಿಂದ ಶಿಕ್ಷಕರು ತಡವಾಗಿ ಬಂದರೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈಗ ಒಂದು ನಿಮಿಷ ತಡವಾದರೂ ಗೈರು ಹಾಜರಾತಿ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸಾರಿಗೆಯನ್ನೇ ನಂಬಿರುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಹಾಗಾಗಿ ಶನಿವಾರ ಶಾಲಾ ಸಮಯ ಬದಲಾವಣೆ ಮಾಡಬೇಕೆಂಬ ಅಭಿಪ್ರಾಯ ಶಿಕ್ಷಕರ ವಲಯದಲ್ಲಿ ಕೇಳಿಬಂದಿತ್ತು. ಹಾಗಾಗಿ ಸಮಯ ತಿದ್ದುಪಡಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

44
ಆಯುಕ್ತರು ಹೇಳಿದ್ದೇನು?
Image Credit : Asianet News

ಆಯುಕ್ತರು ಹೇಳಿದ್ದೇನು?

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರತಿ ಶನಿವಾರಕ್ಕೆ ಮಾತ್ರ ಶಾಲಾ ಸಮಯವನ್ನು ಏಕರೂಪವಾಗಿ ಬದಲಾವಣೆ ಮಾಡಲಾಗಿದೆ. ಕರ್ತವ್ಯ ಅಪ್ಲಿಕೇಷನ್‌ನಲ್ಲೂ ಇದನ್ನು ಅಪ್‌ಡೇಟ್‌ ಮಾಡಲಾಗಿದೆ. ಜೂ.27ರಿಂದಲೇ ಇದು ಅನ್ವಯವಾಗಲಿದೆ.

- ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಶಿಕ್ಷಣ
ಶಾಲೆ
ಶಿಕ್ಷಕರು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿಗೆ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನ!; ಪ್ರತಿಷ್ಠಿತ ಸಂಸ್ಥೆಗೆ ಒಲಿದ ದೊಡ್ಡ ಗೌರವ!
Recommended image2
ಕೊನೆಗೂ ಕೈಬಿಟ್ಟ ವಿವಿ ಹೆಸರು ಬದಲಾವಣೆ ಪ್ರಸ್ತಾಪ; 'ಬರಕತುಲ್ಲಾ ವಿಶ್ವವಿದ್ಯಾಲಯ' ಹೆಸರೇ ಮುಂದುವರಿಕೆ
Recommended image3
ಆಹಾರದ ತಟ್ಟೆಯಲ್ಲೂ ರಾಜಕೀಯ, ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದ್ದೇಕೆ?; NCERT 6ನೇ ಕ್ಲಾಸ್‌ ಕನ್ನಡ ಬುಕ್‌ ವಿರುದ್ಧ ಆಕ್ರೋಶ!
Related Stories
Recommended image1
ಫೇಸ್-ಲೊಕೇಶನ್ ಹಾಜರಾತಿ ಎಫೆಕ್ಟ್‌: ನಿಗದಿತ ಸಮಯಕ್ಕೆ ಶಾಲೆ ಅಂಗಳದಲ್ಲಿ ಶಿಕ್ಷಕರು ಹಾಜರ್
Recommended image2
Now Playing
Ballari Government school Problem: ಬಳ್ಳಾರಿ: 4 ಕೊಠಡಿ, 300 ವಿದ್ಯಾರ್ಥಿಗಳು! ಶಾಲೆಯ ದುಸ್ಥಿತಿ! Suvarna News
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved