ಗಾಲಿಕುರ್ಚಿಯಲ್ಲಿದ್ದರೆ ಏನಾತು? ಆಕ್ಸ್ ಫರ್ಡ್ ಗೆ ಹೊರಟ ಪ್ರತಿಷ್ಠಾಗೆ ಅಭಿನಂದನೆ ಹೇಳಿ!
ಈಕೆಯ ಹೆಸರು ಪ್ರತಿಷ್ಥಾ ದೇವೇಶ್ವರ, ಪ್ರತಿಭೆಗೆ ಯಾವ ಅಡ್ಡಿ ಇಲ್ಲ. ದೆಹಲಿ ವಿಶ್ವವಿದ್ಯಾಲಯದ ಫೈನಲ್ ವರ್ಷದ ವಿದ್ಯಾರ್ಥಿನಿ ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ವೀಲ್ ಚೇರ್ ನಲ್ಲಿ ಅಧ್ಯಯನ ಮಾಡುವ ಭಾರತದ ಪ್ರಥಮ ಲೇಡಿ ಎಂಬ ಶ್ರೇಯಕ್ಕೂ ಪಾತ್ರವಾಗಿದ್ದಾರೆ.
ಪ್ರತಿಷ್ಥಾ ದೇವೇಶ್ವರ ಪಂಜಾಬ್ ನ ಹೋಶಿಯಾರ್ ಪುರ್ ನವರು.
ಜುಲೈ 15 ರಂದು ಆಕ್ಸ್ ಫರ್ಡ್ ನಿಂದ ಬಂದಿರುವ ಸರ್ಟಿಫಿಕೇಟ್ ಆಫರ್ ನ್ನು ಶೇರ್ ಮಾಡಿದ್ದಾರೆ.
ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿರುವುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಐಸಿಯು ನಿಂಧ ಆಕ್ಸ್ ಫರ್ಡ್ ವರೆಗಿನ ಪಯಣ ಇದು ಎಂದು ಹೇಳಿದ್ದಾರೆ.
ದೆಹಲಿ ಯುನಿವರ್ಸಿಟಿಯ ಶ್ರೀರಾಮ್ ಮಹಿಳಾ ಕಾಲೇಜಿನ ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.
ಪ್ರತಿಷ್ಠಾ ಅವರು ಬರೆದಿರುವ ಶಬ್ದಗಳಲ್ಲೇ ಗೊತ್ತಾಗುತ್ತದೆ ಅವರ ಜೀವನ ನಾವು ತಿಳಿದುಕೊಂಡ ಹಾಗೆ ಹೂವಿನ ಹಾದಿಯಾಗಿರಲಿಲ್ಲ.
ಹೋಶಿರಾಪುರ್ ನಿಂದ ಚಂಡಿಘಡಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಾ ತಮ್ಮ 13 ನೇ ವಯಸ್ಸಿನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು.
ಅಪಘಾತದ ಪರಿಣಾಮ ಬೆನ್ನು ಮಳೆಗೆ ಏಟಾಗಿ ಎದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು.
ಮನೆಯಲ್ಲಿಯೇ ಕುಳಿತು 12 ನೇ ಕ್ಲಾಸ್ ವರೆಗೆ ಅಧ್ಯಯನ ಮಾಡಿದರು. ಮನೆಯ ನಾಲ್ಕು ಗೋಡೆ ಮಧ್ಯೆ ಕಲಿಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆತಾಯಿ ಬಳಿ ಹೇಳಿಕೊಳ್ಳುತ್ತಾರೆ.
ಶ್ರೀರಾಮ್ ಮಹಿಳಾ ಕಾಲೇಜಿಗೆ ಅರ್ಜಿ ಹಾಕಿ ಅಡ್ಮಿಷನ್ ಪಡೆದುಕೊಳ್ಳುತ್ತಾರೆ.
ಈ ಸ್ಥಿತಿಯಲ್ಲಿ ಪ್ರತಿಷ್ಠಾ ಅವರನ್ನು ದೆಹಲಿಗೆ ಕಳುಹಿಸಬೇಡಿ ಎಂದು ವಿದ್ಯಾರ್ಥಿನಿಯ ಕುಟುಂಬಕ್ಕೆ ಸಲಹೆಯನ್ನು ನೀಡಲಾಗುತ್ತದೆ.
ಆದರೆ ಪ್ರತಿಷ್ಠಾ ಎಲ್ಲರ ನಿರೀಕ್ಷೆಗೆ ಮೀರಿ ಸಾಧನೆ ಮಾಡುತ್ತಾರೆ.
ಪ್ರತಿಷ್ಥಾ ದೇವೇಶ್ವರ
ಪ್ರತಿಷ್ಥಾ ದೇವೇಶ್ವರ
ಪ್ರತಿಷ್ಥಾ ದೇವೇಶ್ವರ
ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾ ಅವರ ಸಾಧನೆಗೆ ಅಭಿನಂದನೆಗಳು ಹರಿದು ಬಂದಿದೆ.