ಸೆ*ಕ್ಸ್‌ಗೆ ನಿರಾಸಕ್ತಿ ತೋರಿಸಿದ ಪತ್ನಿಗೆ ಬೆಂಕಿ ಹಚ್ಚಿದ ಗಂಡ!
Husband-Wife Dispute: ಮುಂಬೈನಲ್ಲಿ ಲೈಂ*ಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಪತ್ನಿಗೆ ಗಂಡ ಬೆಂಕಿ ಹಚ್ಚಿದ್ದಾನೆ. ಚೆಂಬೂರಲ್ಲಿ ನಡೆದ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಡ-ಹೆಂಡತಿ ಜಗಳ ಅಂದ್ರೆ ಉಂಡು ಮಲಗುವ ತನಕ ಎಂಬ ಮಾತಿದೆ. ಆದ್ರೆ ಇಲ್ಲಿ ಮಲಗುವ ವಿಚಾರಕ್ಕಾಗಿಯೇ ಗಂಡ ಮತ್ತು ಹೆಂಡತಿ ನಡುವೆ ಜಗಳ ನಡೆದಿದೆ. ಕೊನೆಗೆ ಹೆಂಡತಿಗೆ ಬೆಂಕಿ ಹಚ್ಚಿ ಕೊಲ್ಲಲು ಮುಂದಾಗಿದ್ದಾನೆ.
ಮಹಾರಾಷ್ಟ್ರದ ಮುಂಬೈನ ಚೆಂಬೂರ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆ ಸಂಬಂಧ ಹೆಂಡತಿ ಕೊಲೆಗೆ ಮುಂದಾಗಿದ್ದ 46 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಲೈಂಗಿಕ ಸಂಬಂಧ ಹೊಂದುವ ಕುರಿತು ಗಂಡ-ಹೆಂಡತಿ ನಡುವೆ ತೀವ್ರ ಜಗಳ ನಡೆದಿದೆ. ದೈಹಿಕ ಸಂಬಂಧ ಹೊಂದಲು ಪತ್ನಿ ಒಪ್ಪದ ಹಿನ್ನೆಲೆ ಕೋಪಗೊಂಡ ಗಂಡ, ಆಕೆಗೆ ಬೆಂಕಿ ಹಚ್ಚಿದ್ದಾನೆ. ತೀವ್ರವಾಗಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಸಿಯಾನ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಆರೋಪಿ ಪತಿರಾಯ ಗ್ಯಾಸ್ ಸ್ಟೌವ್ ಆನ್ ಮಾಡಿದ್ದಾನೆ. ನಂತರ ಕಾಗದದ ತುಂಡಿನಿಂದ ಬೆಂಕಿ ತೆಗೆದುಕೊಂಡು ಪತ್ನಿಯ ಬಟ್ಟೆಗೆ ಹಚ್ಚಿದ್ದಾನೆ. ರಾತ್ರಿ ಅನ್ಯೋನ್ಯತೆ ಹೊಂದಲು ಒಪ್ಪದ ಹಿನ್ನೆಲೆ ಆರೋಪಿ ಕೊಲೆಗೆ ಮುಂದಾಗಿದ್ದನು ಎಂದು ವರದಿಯಾಗಿದೆ.
ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಿಸಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.