- Home
- News
- Crime
- ಭಾರತದಲ್ಲಿ ಅತಿಹೆಚ್ಚು ಹ್ಯಾಕ್ ಆಗಿರುವ ಟಾಪ್ 5 ಪಾಸ್‌ವರ್ಡ್‌ಗಳಿವು..! ನೀವು ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದರೇ ಎಚ್ಚರ
ಭಾರತದಲ್ಲಿ ಅತಿಹೆಚ್ಚು ಹ್ಯಾಕ್ ಆಗಿರುವ ಟಾಪ್ 5 ಪಾಸ್‌ವರ್ಡ್‌ಗಳಿವು..! ನೀವು ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದರೇ ಎಚ್ಚರ
ಬೆಂಗಳೂರು: ಇದು ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್‌ಲೈನ್ ಮಯವಾಗಿ ಹೋಗಿದೆ. ಆಧುನಿಕ ಜಗತ್ತಿನಲ್ಲಿ ಖಾಸಗಿತನ ಕಾಪಾಡಿಕೊಳ್ಳುವುದು ದೊಡ್ಡ ಸವಾಲೇ ಸರಿ. ನಾವು ಸೋಷಿಯಲ್ ಮೀಡಿಯಾದಿಂದ ಹಿಡಿದು ಆನ್‌ಲೈನ್ ಶಾಪಿಂಗ್‌ವರೆಗೂ ಹಲವು ಆಪ್‌ಗಳನ್ನು ಬಳಸುತ್ತೇವೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಪ್ರಕಾರ, ಸಾಮಾನ್ಯವಾಗಿ ಹ್ಯಾಕ್ ಮಾಡಿದ ಪಾಸ್‌ವರ್ಡ್‌ಗಳು ಯಾವುವು ಎನ್ನುವ ವಿಚಾರ ಬಯಲಾಗಿದೆ. ನೀವು ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದರೇ ಆದಷ್ಟು ಬೇಗ ಬದಲಾಯಿಸಿಬಿಡಿ.

ಟಾಪ್ 1 ಪಾಸ್‌ವರ್ಡ್: 123456
ಭಾರತದಲ್ಲಿ ಅತಿಹೆಚ್ಚು ಮಂದಿ ಇಟ್ಟುಕೊಂಡಿರುವ ಪಾಸ್‌ವರ್ಡ್ ಎಂದರೆ ಅದು 123456. ತುಂಬಾ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎನ್ನುವ ಕಾರಣಕ್ಕೆ 2.32 ಕೋಟಿ ಮಂದಿ ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದಾರೆ. ಇದು ಸುಲಭವಾಗಿ ಹ್ಯಾಕ್ ಆಗಿರುವ ಪಾಸ್‌ವರ್ಡ್.
ಟಾಪ್ 2 ಪಾಸ್‌ವರ್ಡ್: 123456789
ಸೈಬರ್ ಕ್ರೈಂ ಬಗ್ಗೆ ಹಲವರಿಗೆ ಸೂಕ್ತ ಮಾಹಿತಿಯ ಕೊರತೆಯಿದೆ. ಈ ಕಾರಣಕ್ಕಾಗಿಯೇ ಸುಮಾರು 7.70 ಲಕ್ಷ ಮಂದಿ 123456789 ಪಾಸ್‌ವರ್ಡ್ ಸೆಟ್ ಮಾಡಿಕೊಂಡಿದ್ದು, ಇದು ಎರಡನೇ ದುರ್ಬಲ ಪಾಸ್‌ವರ್ಡ್ ಎನಿಸಿಕೊಂಡಿದೆ.
ಟಾಪ್ 3 ಪಾಸ್‌ವರ್ಡ್: Qwerty
ಕಂಪ್ಯೂಟರ್ ಕೀ ಬೋರ್ಡ್‌ನ ಮೊದಲ ಸಾಲಿನ 5 ಅಕ್ಷರಗಳಾದ Qwerty ಎನ್ನುವ ಪದವನ್ನು ಸುಮಾರು 3.8 ಲಕ್ಷ ಮಂದಿ ಪಾಸ್‌ವರ್ಡ್ ಅನ್ನಾಗಿ ಇಟ್ಟುಕೊಂಡಿದ್ದಾರೆ. ಇದು ಕೂಡಾ ಸುಲಭವಾಗಿ ಹ್ಯಾಕ್ ಆಗುತ್ತಿರುವ ಪಾಸ್‌ವರ್ಡ್ ಎನಿಸಿಕೊಂಡಿದೆ.
ಟಾಪ್ 4 ಪಾಸ್‌ವರ್ಡ್: Password
ಇಂದು ತುಂಬಾ ಇಂಟ್ರೆಸ್ಟಿಂಗ್ ಪಾಸ್‌ವರ್ಡ್ ಎನಿಸಿಕೊಂಡಿದೆ. ಸುಮಾರು 3.6 ಲಕ್ಷ ಜನ ತಮ್ಮ ಪಾಸ್‌ವರ್ಡ್ ಅನ್ನು Password ಎಂದೇ ಸೆಟ್ ಮಾಡಿಕೊಂಡಿದ್ದಾರೆ. ಇದು ಕೂಡಾ ಸೇಫ್ ಪಾಸ್‌ವರ್ಡ್ ಅಲ್ಲ ಎನ್ನುವುದ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸೆಂಟರ್ ತಿಳಿಸಿದೆ.
ಟಾಪ್ 5 ಪಾಸ್‌ವರ್ಡ್: 111111
111111 ಇದು ಭಾರತದಲ್ಲಿ ಅತಿಹೆಚ್ಚು ಬಳಸುವ ಪಾಸ್‌ವರ್ಡ್‌ಗಳ ಪೈಕಿ 5ನೇ ಸ್ಥಾನ ಪಡೆದಿರುವ ಪಾಸ್‌ವರ್ಡ್ ಎನಿಸಿದೆ. ದೇಶದಲ್ಲಿ 111111 ಈ ಪಾಸ್‌ವರ್ಡ್ ಅನ್ನು 3.1 ಲಕ್ಷ ಮಂದಿ ಬಳಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ