ಆಟೋ ಚಾಲಕನ ಮಗಳು ಗೀತಾ ಸೆಕ್ಸ್ ರಾಕೆಟ್ ನಡೆಸುವ ಕ್ವೀನ್ ಆಗಿದ್ದು ಹೇಗೆ?
ಪೊಲೀಸರಿಗೆ ಬಹು ದೊಡ್ಡ ತಲೆನೋವಾಗಿದ್ದ ಸೋನು ಪಂಜಾಬನ್‌ಗೆ ಕೊನೆಗೂ ಶಿಕ್ಷೆ ಪ್ರಮಾಣ ಪ್ರಕಟವಾಗಿದೆ. ಹನ್ನೆರಡು ವರ್ಷದ ಅಪ್ರಾಪ್ತ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತೊಡಗಿಸಿಕೊಂಡ ಆರೋಪದಡಿಯಲ್ಲಿ ಈಕೆ 2017 ಪೊಲೀಸರ ಬಲೆಗೆ ಬಿದ್ದಿದ್ದಳು. ಈ ಪ್ರಕರಣ ಸಂಬಂಧ ಬುಧವಾರ ಈಕೆಗೆ 24 ವರ್ಷ ಜೈಲು ಶಿಕ್ಷೆಯಾಗಿದೆ. ಹೀಗಿರುವಾಗ ಸಾಮಾನ್ಯ ಆಟೋ ಚಾಲಕನ ಮಗಳು ವೇಶ್ಯಾವಾಟಿಕೆ ದಂಧೆ ನಡೆಸುವ ಕ್ವೀನ್ ಆಗಿದ್ದು ಹೇಗೆ ಎಂಬ ವಿಚಾರ ಬಹಳ ಕುತೂಹಲ ಮೂಡಿಸುವಂತಿದೆ.
ಸೋನು ಪಂಜಾಬನ್ ಅಸಲಿ ಹೆಸರು ಗೀತಾ ಅರೋರಾ. ಈಕೆಯ ತಂದೆ ಹರ್ಯಾಣದ ರೋಹ್ತಕ್‌ನಿಂದ ದಿನಗೂಲಿ ಕೆಲಸದ ಹುಡುಕಾಟಕ್ಕೆ ದೆಹಲಿಗೆ ಬಂದಿದ್ದರು. ಅಲಕ್ಷ್ಮೀನಗರದಲ್ಲಿ ಉಳಿದುಕೊಂಡ ಅವವರು ಆಟೋ ಚಲಾಯಿಸಿ ಕುಟುಂಬ ನಡೆಸುತ್ತಿದ್ದರು. ಇತ್ತ ಹತ್ತನೇ ತರಗತಿ ಪಾಸ್ ಆದ ಸೋನು ಬ್ಯೂಟಿ ಪಾರ್ಲರ್ ತೆರೆದಳು. ಕೆಲ ಸಮಯದ ಬಳಿಕ ಈಕೆ ದೇಹ ವ್ಯಾಪಾರವನ್ನಾರಂಭಿಸಿದಳು.
ಕಾರ್ಪೋರೇಟ್ ಕಂಪನಿಯಂತೆ ಆಕೆ ಈ ವ್ಯಾಪಾರವನ್ನು ಆರಂಭಿಸಿದಳು. ತನ್ನ ಸೌಂದರ್ಯದಿಂದ ಆಕರ್ಷಿಸಿ ಅನೇಕ ಮಂದಿ ಜೊತೆ ಮದುವೆಯೂ ಆದಳು. ಈಕೆಗೆ ಮೂರು ಮದುವೆಯಾಗಿದ್ದು, ಇವರೆಲ್ಲರೂ ಎನ್‌ಕೌಂಟರ್‌ಗೆ ಬಲಿಯಾಗುತ್ತಿದ್ದರು. ಹೀಗಿರುವಾಗ ಸೋನು ಈ ಅಕ್ರಮ ಉದ್ಯಮ ವಿಸ್ತರಣೆಯಾಯ್ತು. ಪೊಲೀಸರಿಗೆ ಈಕೆ ತಲೆನೋವವಾದಾಗ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 1999 ಅಡಿಯಲ್ಲಿ ಪ್ರಕರಣವೂ ದಾಖಲಾಯ್ತು. ಆಧರೆ ಸೋನು ಮಾತ್ರ ಇದರಿಂದಲೂ ಪಾರಾದಳು.
ಕೇವಲ 17 ವರ್ಷ ವಯಸ್ಸಿಗೆ ಆಕೆ ಹರ್ಯಾಣದ ರೌಡಿ ಶೀಟರ್ ವಿಜಯ್ ಜೊತೆ ವಿವಾಹವಾಗಿದ್ದಳು. ಈತ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಶ್ರೀ ಪ್ರಕಾಶ್ ಶುಕ್ಲಾ ಆಪ್ತನಾಗಿದ್ದ. ಉತ್ತರ ಪ್ರದೇಶ ಎಸ್‌ಟಿಎಫ್ ವಿಜಯ್‌ರನ್ನು 2003ರಲ್ಲಿ ಎನ್‌ಕೌಂಟರ್ ಮಾಡಿದ್ದರು. ಇದಾಧ ಬಳಿಕ ಸೋನು ಪವರ್ ಹಾಗೂ ಹಣಕ್ಕಾಗಿ ಸೆಕ್ಸ್ ರಾಕೆಟ್ ಆರಂಭಿಸಿದಳು. ಬಳಿಕ ಈಕೆ ತನ್ನ ಸುರಕ್ಷತೆಗಾಗಿ ಗೂಂಡಾ ಆಗಿದ್ದ ದೀಪಕ್ ಸೋನು ಜೊತೆ ವಿವಾಹವಾದಳು. ಆದರೆ ಈತನೂ 2004ರಲ್ಲಿ ಎನ್‌ಕೌಂಟರ್‌ಗೆ ಬಲಿಯಾದ.
ಬಳಿಕ ಈಕೆ ದೀಪಕ್‌ನ ಕಿರಿಯ ಸಹೋದರ ಹೇಮಂತ್ ಸೋನು ಜೊತೆ ವಿವಾಹವಾದಳು ಆದರೆ ಆತನೂ 2006 ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ. ಗೀತಾ ಅರೋರಾ ಇಲ್ಲಿಂದಲೇ ಸೋನು ಪಂಜಾಬನ್ ಆದಳು. ಇವೆಲ್ಲದರ ಬೆನ್ನಲ್ಲೇ ಆಕೆ ಹೇಮಂತ್ ಗೆಳೆಯನಾಗಿದ್ದ ಅಶೋಕ್ ಬಂಟೀಗೆ ಆಪ್ತಳಾದಳು. ಆತನೇ ಸೋನುಗೆ ದೊಡ್ಡ ಮಟ್ಟದಲ್ಲಿ ಸೆಕ್ಸ್ ರಾಕೆಟ್ ನಡೆಸಲು ಐಡಿಯಾ ಕೊಟ್ಟಿದ್ದು
ಆದರೆ ಕೆಲ ಸಮಯದ ಬಳಿಕ ಅಶೋಕ್ ಕೂಡಾ ಎನ್‌ಕೌಂಟರ್‌ಗೆ ಬಲಿಯಾದ ಆದರೆ ಇತ್ತ ಸೋನು ನಡೆಸುತ್ತಿದ್ದ ಕಪ್ಪು ದಂಧೆ ಉತ್ತುಂಗಕ್ಕೇರಿತ್ತು. ಒಂದು ಕಂಪನಿಯಂತೆ ಆಕೆ ಅನೇಕ ಹುಡುಗರನ್ನು ದಲ್ಲಾಳಿಗಳಂತೆ ಇಟ್ಟುಕೊಂಡಳು. ಸಣ್ಣ ವಯಸ್ಸಿನ ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸಿ ಕರೆ ತರುವುದೇ ಸೋನು ಇವರಿಗೆ ವಹಿಸಿದ್ದ ಕೆಲಸವಾಗಿತ್ತು. ಅನೇಕ ಮಾಡೆಲ್ ಹಾಗೂ ಶಾಲಾ ಕಾಲೇಜಿನ ಹುಡುಗಿಯರನ್ನೂ ಈಕೆ ಸಪ್ಲೈ ಮಾಡಲಾರಂಭಿಸಿದಳು.
ಪೊಲೀಸ್ ಅಧಿಕಾರಿಗಳನ್ವಯ ಸೋನು ಈ ದಂಧೆಯನ್ನು ಸಂಘಟಿತವಾಗಿ ಮಾಡುತ್ತಿದ್ದಳು. ಆಕೆ ಫ್ರೀಲಾನ್ಸ್ ಕಾಲ್ ಗರ್ಲ್ಸ್‌ನ್ನು ಕ್ಲೈಂಟ್‌ಗಳ ಬಳಿ ಕಳುಹಿಸುತ್ತಿದ್ದಳು. ವಾಟ್ಸಾಪ್ ಹಾಗೂ ವಿಡಿಯೋ ಕಾಲ್ ಮೂಲಕ ಇವರ ಜೊತೆ ಸೋನು ಸಂಪರ್ಕದಲ್ಲಿರುತ್ತಿದ್ದಳು. ಈಕೆ ಪ್ರತಿ ಕ್ಲೈಂಟ್ ಬಳಿ ಹುಡುಗಿಯರನ್ನು ಕಳುಇಸಲು ಸುಮಾರು 25 ಸಾವಿರ ರೂಪಾಯಿ ಕಮಿಷನ್ ಪಡೆಯುತ್ತಿದ್ದಳು.
ಬಹುತೇಕ ಈ ಹಣದ ವಹಿವಾಟನ್ನು ಸೋನು ಇ-ವಾಲೆಟ್ ಮೂಲಕ ನಡೆಸುತ್ತಿದ್ದಳು. ಈ ಮೂಲಕ ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಎಚ್ಚರ ವಹಿಸುತ್ತಿದ್ದಳು. ಸೋನು ವಿರುದ್ಧ ಕೊಲೆ ಸೇರಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಆದರೆ ಶಿಕ್ಷೆ ವಿಧಿಸಿದ್ದು ಮಾತ್ರ ಇದೇ ಮೊದಲ ಬಾರಿ.