ಒಬ್ಬ ಯುವತಿಯ ದೇಹಕ್ಕೆ ಒಂದು ಸಾವಿರ ರೂ.: ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿತ್ತು ಕೆಟ್ಟ ದಂಧೆ!
ಕೊರೋನಾತಂಕ ಇತ್ತ ದೇಶವನ್ನೇ ಕಂಗೆಡಿಸಿದ್ದರೆ, ಅತ್ತ ಸೆಕ್ಸ್ ರಾಕೆಟ್ ದಂಧೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಸದ್ಯ ತಾಜ್ ನಗರಿ ಎಂದೇ ಕರೆಯಲಾಗುವ ಆಗ್ರಾದಲ್ಲಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ಸಿಂಕಂದರಾ ಪೊಲಿಸರು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದು, ಅಡೆ ತಡೆ ಇಲ್ಲದೇ ನಡೆಯುತ್ತಿದ್ದ ಸೆಕ್ಸ್ ರಾಕೆಟ್‌ನ್ನು ಬಯಲುಗಿಳಿಸಿದೆ. ಫಾರ್ಮ್ ಹೌಸ್ ಮಾಲೀಕ ಹಾಗೂ ಮೂವರು ಯುವತಿಯರು ಸೇರಿ ಒಟ್ಟು ಹನ್ನೆರಡು ಮಂದಿಯನ್ನು ಬಂಧಿಸಲಾಗಿದ್ದು, ಯುವತಿಯರೆಲ್ಲರೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದು ಬಂದಿದೆ. ಪೊಲೀಸರ ಅನ್ವಯ ಒಂದರಿಂದ ಎರಡು ಸಾವಿರಕ್ಕೆ ಯುವತಿಯರ ದೇಹ ವ್ಯಾಪಾರ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಸಿಕಂದರಾ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫಾರ್ಮ್ ಹೌಸ್ ಈ ದೇಹ ವ್ಯಾಪಾರದ ಅಡ್ಡೆಯಾಗಿತ್ತೆನ್ನಲಾಗಿದೆ. ಇಲ್ಲಿ ಪಶ್ಚಿಮ ಬಂಗಾಳದ ಯುವತಿಯರನ್ನಿಟ್ಟು ಈ ಕೆಟ್ಟ ದಂಧೆ ನಡೆಸಾಗುತ್ತಿತ್ತು.
ಸಿಕಂದರಾ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫಾರ್ಮ್ ಹೌಸ್ ಈ ದೇಹ ವ್ಯಾಪಾರದ ಅಡ್ಡೆಯಾಗಿತ್ತೆನ್ನಲಾಗಿದೆ. ಇಲ್ಲಿ ಪಶ್ಚಿಮ ಬಂಗಾಳದ ಯುವತಿಯರನ್ನಿಟ್ಟು ಈ ಕೆಟ್ಟ ದಂಧೆ ನಡೆಸಾಗುತ್ತಿತ್ತು.
ಎಎಸ್‌ಪಿ ಬಬ್ಲೂ ಕುಮಾರ್ ಈ ಸಂಬಂಧ ಮಾಹಿತಿ ನೀಡಿದ್ದು, ಇದು ಅಶೋಕ್ ರಾಣಾ ಎಂಬವರ ಫಾರ್ಮ್ ಹೌಸ್ ಆಗಿದೆ. ಸಚಿನ್, ಪರಮ್, ವಿಷ್ಣು ಹಾಗೂ ವಿಶಾಲ್ ಗೋಯಲ್ ರಾಣಾರಿಂದ ಈ ಫಾರ್ಮ್ ಹೌಸ್ ಬಾಡಿಗೆಗೆ ಪಡೆದಿದ್ದರು.
ಸದ್ಯ ನಾಲ್ವರೂ ಪಾರ್ಟ್ನರ್‌ಗಳು ಅರೆಸ್ಟ್ ಆಗಿದ್ದಾರೆ. ಇವರು ಬೇರೆ ಬೇರೆ ಕಡೆಯಿಂದ ಯುವತಿಯರನ್ನು ಕರೆ ತಂದು ಪ್ರತಿಯೊಬ್ಬ ಯುವತಿಗೆ ಒಂದರಿಂದ ಎರಡು ಸಾವಿರ ಹಣ ಫಿಕ್ಸ್ ಮಾಡಿ ಈ ದಂಧೆ ನಡೆಸುತ್ತಿದ್ದರು.
ಇನ್ನು ತಾವು ಸಂಪಾದಿಸಿದ ಹಣದಲ್ಲಿ ಒಂದು ಭಾಗವನ್ನು ಮಾಲೀಕ ಅಶೋಕ್ ರಾಣಾಗೂ ನೀಡುತ್ತಿದ್ದೆವೆಂದು ಅರೆಸ್ಟ್ ಆದ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಅಶೋಕ್ ರಾಣಾಗೆ ತನ್ನ ಫಾರ್ಮ್ ಹೌಸ್‌ನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿತ್ತು.
ಆರೋಪಿಗಳಿಂದ ಏಳು ಮೊಬೈಲ್ , ಆರು ಬಿಯರ್ ಹಾಗೂ ಇನ್ನೂ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.