ಬಲೆಗೆ ಬಿದ್ದ ಶೋಕಿಲಾಲ ಖನ್ನ, ರಾಗಿಣಿಗೂ-ಈತನಿಗೂ ಏನ್ ಸಂಬಂಧ?
ಬೆಂಗಳೂರು(ಸೆ. 04) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಹೊಸ ಹೊಸ ವ್ಯಕ್ತಿಗಳನ್ನು ಲಿಂಕ್ ಮಾಡುತ್ತಲೇ ಇದೆ. ಒಂದು ಕಡೆ ನಟಿ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈಗ ಮತ್ತೋರ್ವ ಆರೋಪಿ ವೀರೇನ್ ಖನ್ನ ಎಂಬಾತನನ್ನು ದೆಹಲಿಯಿಂದ ಬಂಧಿಸಿ ಕರೆತರಲಾಗಿದೆ.
ದೊಡ್ಡ ಪಾರ್ಟಿ ಗಳನ್ನ ಆಯೋಜನೆ ಮಾಡುತ್ತಿದ್ದ ವಿರೇನ್ ಖನ್ನ
ಬೆಂಗಳೂರಿನ ಪ್ರತಿಷ್ಠಿತ ಹೋಟೇಲ್ ಗಳಲ್ಲಿ ಪಾರ್ಟಿ ಅರೆಂಜ್ ಮಾಡ್ತಿದ್ದ ವಿರೇನ್. ಬೂಮ್ ಬಾಕ್ಸ್ ಹೆಸ್ರಲ್ಲಿ ಪಾರ್ಟಿ ಆರ್ಗನೈಸ್ ಮಾಡ್ತಿದ್ದ ವಿರೇನ್
ಇವನ ಪಾರ್ಟಿಯಲ್ಲಿ ಫಾರಿನ್ ಹುಡುಗಿಯರೇ ಹೆಚ್ಚು ಇರುತ್ತಿದ್ದರು.
ಅದ್ರಲ್ಲೂ ಇರಾನಿ ಹುಡುಗಿರನ್ನು ಹೆಚ್ಚಾಗಿ ಪಾರ್ಟಿಗೆ ಇನ್ವೈಟ್ ಮಾಡ್ತಿದ್ದ ವಿರೇನ್.
ಪಾರ್ಟಿಗೆ ಬರೊ ಪ್ರಮುಖರಿಗೆ ಡ್ರಗ್ಸ್ ನೀಡಲಾಗ್ತಿತ್ತು ಎನ್ನಲಾಗಿದ್ದು ಸ್ಟಾರ್ ನಟ ನಟಿಯರು ಭಾಗವಹಿಸಿದ ದಾಖಲೆಗಳಿವೆ.
ಒಮ್ಮೆ ಪಾರ್ಟಿಗೆ ಬಂದು ನಶೆಯೇರಿಸಿಕೊಂಡವರು ರೆಗ್ಯುಲರ್ ಕಸ್ಟಮರ್ ಆಗುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಖನ್ನಾಗೆ ವಿದೇಶದ ಲಿಂಕ್ ಬಹಳ ಜಾಸ್ತಿನೇ ಇತ್ತು.
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಖನ್ನ
ಕ್ರಿಸ್ ಗೇಲ್ ಜತೆ ಕಾಣಿಸಿಕೊಂಡಿದ್ದ.
ಈತನ ವಿಚಾರಣೆ ಬಳಿಕ ಮತ್ತಷ್ಟು ದೊಡ್ಡ ಕುಳಗಳ ಹೆಸರು ಹೊರಬರುವ ಸಾಧ್ಯತೆ ಇದೆ.
ಅನಿಕಾ ಡಿ ಎಂಬಾಕೆಯ ಬಂಧನದಿಂದ ಸ್ಯಾಂಡಲ್ ವುಡ್ ನಲ್ಲಿಡ್ರಗ್ಸ್ ಘಾಟು ತುಂಬಿಕೊಂಡಿತು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಒಂದಿಷ್ಟು ಆರೋಪ ಮಾಡಿದ್ದರು.
ಖನ್ನಾ ಆಯೋಜಿಸುತ್ತಿದ್ದ ಪಾರ್ಟಿ
ಸೋಶಿಯಲ್ ಮೀಡಿಯಾದಿಂದಲೇ ಜನರನ್ನು ಬರುವಂತೆ ಮಾಡುತ್ತಿದ್ದ
ರಾಗಿಣಿಯನ್ನು ಸಹ ಐದು ತಾಸು ವಿಚಾರಣೆ ನಡೆಸಿ ಅಂತಿಮವಾಗಿ ಬಂಧಿಸಲಾಗಿದೆ.