ಶ್ರದ್ಧ, ವರುಣ್ ಡ್ಯಾನ್ಸ್, ಅರಿಜಿತ್ ಮ್ಯೂಸಿಕ್, ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿದೆ ವಿಶೇಷತೆ
ಮಾರ್ಚ್ 22ಕ್ಕೆ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2025 ಆವೃತ್ತಿ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಶ್ರದ್ಧಾ ಕಪೂರ್, ವರುಣ್ ಧವನ್, ಅರಿಜಿತ್ ಸಿಂಗ್ ಸೇರಿದಂತೆ ಬಾಲಿವುಡ್ ಸ್ಟಾರ್ ಸೆಲೆಬ್ರೆಟಿಗಳು ಪರ್ಫಾಮೆನ್ಸ್ ನೀಡಲಿದ್ದಾರೆ. ಈ ಬಾರಿಯ ಐಪಿಎಲ್ ಒಪನಿಂಗ್ ಸೆರೆಮನಿಯಲ್ಲಿನ ವಿಶೇಷತೆ ಏನು?

ಬಾಲಿವುಡ್ ತಾರೆಯರ ಆಗಮನ
IPL 2025 ಟೂರ್ನಿ ಆರಂಭಕ್ಕೆ ಕೆಲವೇ ದಿನ ಮಾತ್ರ. ಮಾರ್ಚ್ 22ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2025 ಟೂರ್ನಿ ಆರಂಭಗೊಳ್ಳುತ್ತಿದೆ. ಪಂದ್ಯ, ರೋಚಕ ಹೋರಾಟ, ಬೌಂಡರಿ ಸಿಕ್ಸರ್, ಸ್ಲೆಡ್ಜಿಂಗ್ ಸೇರಿದಂತೆ ಹಲವು ರೋಚಕ ಘಟನೆಗಳಿಗೆ ಐಪಿಎಲ್ ಪಂದ್ಯಗಳು ಸಾಕ್ಷಿಯಾಗಲಿದೆ. ಇದರ ನಡುವೆ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಉದ್ಘಾಟನಾ ಸಮಾರಂಭದ ರೀತಿಯಲ್ಲಿ ಈ ಬಾರಿಯೂ ಅದ್ಧೂರಿಯಾಗಿ ನಡೆಯಲಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬಾಲಿವುಡ್ ಸ್ಟಾರ್ಸ್ ದಂಡೇ ಇರಲಿದೆ. ಪ್ರಮುಖವಾಗಿ ಶ್ರದ್ಧಾ ಕಪೂರ್, ವರುಣ್ ಧವನ್ ಸ್ಟೇಜ್ ಮೇಲೆ ತಮ್ಮ ಡಾನ್ಸ್‌ನಿಂದ ಧೂಳೆಬ್ಬಿಸ್ತಾರೆ. ಅವರಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿರುತ್ತೆ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಐಪಿಎಲ್ ಸೀಸನ್‌ಗೆ ಅವ್ರು ಒಳ್ಳೆ ಜೋಶ್ ತರ್ತಾರೆ. ಅವ್ರ ಡಾನ್ಸ್ ಮೂಮೆಂಟ್ಸ್ ಎಲ್ಲರ ಗಮನ ಸೆಳೆಯುತ್ತವೆ.
ಡ್ಯಾನ್ಸ್ ಪರ್ಫಾಮೆನ್ಸ್ ಜೊತೆ ಅರಿಜಿತ್ ಸಿಂಗ್ ತಮ್ಮ ಹಾಡುಗಳಿಂದ ಪ್ರೇಕ್ಷಕರನ್ನ ಮಂತ್ರಮುಗ್ಧರನ್ನಾಗಿ ಮಾಡ್ತಾರೆ. ಅವ್ರು ತಮ್ಮ ಸೂಪರ್ ಹಿಟ್ ಹಾಡುಗಳನ್ನ ಹಾಡಿ ಪ್ರೇಕ್ಷಕರನ್ನ ಬೆಚ್ಚಿ ಬೀಳಿಸ್ತಾರೆ. ಅವ್ರ ಹಾಡುಗಳು ಐಪಿಎಲ್ ಓಪನಿಂಗ್‌ಗೆ ಒಳ್ಳೆ ಕಿಕ್ ಕೊಡುತ್ತವೆ. ಅರಿಜಿತ್ ಸಿಂಗ್ ಕಳೆದ ಐಪಿಎಲ್ ಆವೃತ್ತಿಗಳಲ ಒಪನಿಂಂಗ್ ಸೆರೆಮನಿಯಲ್ಲೂ ಮ್ಯೂಸಿಕ್ ಪರ್ಫಾಮೆನ್ಸ್ ನೀಡಿದ್ದಾರೆ.
ಓಪನಿಂಗ್ ಸರಮನಿ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಟನಾ ಪಂದ್ಯ ನಡೆಯಲಿದೆ. ಈ ಮೂಲಕ 2025ರ ಐಪಿಎಲ್ ಟೂರ್ನಿ ಅಧಿಕೃತವಾಗಿ ಆರಂಭಗೊಳ್ಳಲಿದೆ. ಸರಿ ಸುಮಾರು 2 ತಿಂಗಳು ಕ್ರಿಕೆಟ್ ಹಬ್ಬ, ಡ್ರಾಮಾ, ಸ್ಟಾರ್ಸ್ ಪರ್ಫಾರ್ಮೆನ್ಸ್ ಸೇರಿದಂತೆ ಹಲವು ರೋಚಕತೆ ಹೊಂದಿದೆ . ಕ್ರಿಕೆಟ್, ಎಂಟರ್‌ಟೈನ್‌ಮೆಂಟ್ ಮಿಕ್ಸ್ ಆಗಿ ಈ ಐಪಿಎಲ್ ಸೀಸನ್ ಎಲ್ಲರಿಗೂ ನೆನಪಿರುತ್ತೆ.