bigg boss kannada 11: ತ್ರಿವಿಕ್ರಮ್-ಚೈತ್ರಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಮನೆಮಂದಿ! ಕಿಚ್ಚ ಕೊಟ್ರು ಕ್ಲಾರಿಟಿ
ಬಿಗ್‌ಬಾಸ್ ಕನ್ನಡ 11ರಲ್ಲಿ ತ್ರಿವಿಕ್ರಮ್ ಮತ್ತು ಚೈತ್ರಾ ಕುಂದಾಪುರ ಮಾಡಿದ ತಪ್ಪಿಗೆ ಇಡೀ ಮನೆ ಶಿಕ್ಷೆ ಅನುಭವಿಸಿದೆ. ಲಕ್ಷುರಿ ಬಜೆಟ್ ಐಟಂಗಳನ್ನು ಬಿಗ್‌ಬಾಸ್ ನೀಡಿಲ್ಲ. ಇನ್ನು ನಾಮಿನೇಶನ್ ಗಾಗಿ ಗುಂಪು ಮಾಡಿಕೊಂಡಿದ್ದಕ್ಕೆ ಸುದೀಪ್ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ 11ರಲ್ಲಿ 75ನೇ ದಿನ ಸ್ಪರ್ಧಿಗಳಾದ ತ್ರಿವಿಕ್ರಮ್ ಮತ್ತು ಚೈತ್ರ ಕುಂದಾಪುರ ಮಾಡಿದ ತಪ್ಪಿಗೆ ಇಡೀ ಮನೆ ಶಿಕ್ಷೆ ಅನುಭವಿಸಿದೆ. ವಾರದ ಕತೆ ಕಿಚ್ಚನ ಜೊತೆ ವೀಕೆಂಡ್ ಎಪಿಸೋಡ್ ನಲ್ಲಿ ಈ ವಿಚಾರ ಬಹಿರಂಗವಾಗಿದೆ.
ತ್ರಿವಿಕ್ರಮ್ ಮತ್ತು ಚೈತ್ರಾ ಅವರು ಮಾಡಿದ ತಪ್ಪಿನಿಂದ ಲಕ್ಷುರಿ ಬಜೆಟ್ ನಲ್ಲಿ ಬಂದ ಐಟಂಗಳನ್ನು ಬಿಗ್‌ಬಾಸ್ ನೀಡಿಲ್ಲ. ಈ ವಿಚಾರವನ್ನು ಸುದೀಪ್ ಅವರು ಬಂದು ಹೇಳಿದ ಮೇಲೆಯೇ ಮನೆಯವರಿಗೆ ನಿಜಾಂಶ ತಿಳಿದಿದೆ.
ಕಳಪೆಯಾದ ಚೈತ್ರಾ ಮತ್ತು ತ್ರಿವಿಕ್ರಮ್ ಅವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಚೈತ್ರಾ ಪ್ರತೀಬಾರಿ ಕಳಪೆಗೆ ಹೋಗಲು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಾರಿ ಇಡೀ ಮನೆಗೆ ಶಿಕ್ಷೆ ಆಗಬೇಕು ಎಂದು ಪ್ಲಾನ್ ಮಾಡುತ್ತಲೇ ಇದ್ದರು. ಕೊನೆಗೆ ಜೈಲಿನ ಕಂಬಿಗಳ ಒಳಗಿನಿಂದ ಇಬ್ಬರೂ ಹೊರಬಂದು ಮಾತನಾಡಿದ್ದಾರೆ. ಹೀಗಾಗಿ ಲಕ್ಷುರಿ ಬಜೆಟ್‌ನಲ್ಲಿ ಬಂದ ಐಟಂಗಳನ್ನು ಬಿಗ್‌ಬಾಸ್ ನೀಡದೆ ಶಿಕ್ಷೆ ನೀಡಿದ್ದಾರೆ.
ಇನ್ನು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಡಿ.15ರಂದು ಸುದೀಪ್ ಮನೆಯವರಿಗೆಲ್ಲ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಗುಂಪು ಮಾಡಿಕೊಂಡು ನಾಮಿನೇಶನ್ ಗೆ ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದು ಸುದೀಪ್ ಹೇಳಿದ್ದಾರೆ. ನಾಮಿನೇಟ್ ಮಾಡಲು ಗ್ರೂಪ್ ಮಾಡಿ ಡಿಸ್ಕರ್ಸ್ ಮಾಡಿದ ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್‌ಗೆ ಸುದೀಪ್ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡ್ರು.
ನಾಮಿನೇಷನ್ ವಿಚಾರವಾಗಿ ಟಾರ್ಗೆಟ್ ಚರ್ಚೆ ನಡೆದಿರುವ ವಿಡಿಯೋವನ್ನ ಕಿಚ್ಚ ಮನೆಯವರಿಗೆ ತೋರಿಸಿದ್ರು. ತ್ರಿವಿಕ್ರಮ ಹಾಗೂ ಭವ್ಯಾ ಅವರನ್ನೇ ಈ ವಾರ ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದಾರೆ ಎನ್ನುವಂತೆ ಕಾಣ್ತಿತ್ತು. ಅದರಂತೆ ಅವರಿಬ್ಬರು ಈ ವಾರ ನಾಮಿನೇಟ್ ಆಗಿದ್ದಾರೆ.
ಗ್ರೂಪ್ ಮಾಡಿಕೊಂಡು ರಾಜಕೀಯ ಮಾಡಿದ್ರೆ ಬಿಗ್ ಬಾಸ್ ಗೆಲ್ಲೋಕೆ ಆಗಲ್ಲ. ಬೇಕಿದ್ರೆ ಕೇಳಿ ನನಗೆ ಎರಡೂ ಪಕ್ಷದಲ್ಲೂ ಸ್ನೇಹಿತರಿದ್ದಾರೆ ಟಿಕೆಟ್ ಕೊಡಿಸ್ತೀನಿ ಎಂದು ಮೋಕ್ಷಿತಾ, ಶಿಶಿರ್ ಹಾಗೂ ಐಶ್ವರ್ಯಾಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇನ್ನು ಜೈಲಿಗೆ ಹೋದವರು ತರಕಾರಿ ಕಟ್ ಮಾಡಬೇಕು ಎಂಬ ನಿಯಮವಿದೆ. ಆದರೆ ಇಬ್ಬರೂ ಕೂಡ ಮನೆಯವರಿಂದ ಕೆಲಸ ಮಾಡಿಸಿಕೊಂಡರೇ ಹೊರತು. ತರಕಾರಿ ಕಟ್ ಮಾಡಿ ಕೊಡಲಿಲ್ಲ. ಹೀಗಾಗಿ ಮನೆಯವರಿಗೆ ಅಡುಗೆ ಮಾಡಲು ಕಷ್ಟ ಆಯ್ತು. ಇದಕ್ಕು ಬುದ್ದಿ ಹೇಳಿದ ಕಿಚ್ಚ ಮುಂದಿನ ವಾರದಿಂದ ಯಾರೇ ಕಳಪೆಗೆ ಹೋದ್ರೂ 30 ಮಿನಿಟ್ ನಲ್ಲಿ ತರಕಾರಿ ಎಲ್ಲಾ ಕಟ್ ಮಾಡಿ ಕೊಡುವುದು ಕಡ್ಡಾಯ ಎಂದರು.