'ಸಾಕು ನಾನು ನಿವೃತ್ತಿಯಾಗುತ್ತೇನೆ' ಪಾಕಿಸ್ತಾನದಲ್ಲಿದ್ದಾಗಲೇ ಟೀಂ ಇಂಡಿಯಾಗೆ ಶಾಕ್ ಕೊಟ್ಟಿದ್ದರಂತೆ ಧೋನಿ..!

First Published 18, Aug 2020, 2:11 PM

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮಾಜಿ ನಾಯಕ ಧೋನಿ ನೀಡಿದ ಶಾಕ್‌ಅನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಪಾಕಿಸ್ತಾನದಲ್ಲಿ 2006ರಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆ ನಾನು ನಿವೃತ್ತಿಯಾಗುತ್ತೇನೆ ಎಂದು ಜೋರಾಗಿ ಕೂಗಿ ಹೇಳುವ ಮೂಲಕ ಟೀಂ ಇಂಡಿಯಾ ಆಟಗಾರರಿಗೆ ಶಾಕ್ ನೀಡಿದ್ದರಂತೆ. ವಿವಿಎಸ್ ಲಕ್ಷ್ಮಣ್ ಪ್ರಕಾರ ಅಂದು ಆಗಿದ್ದೇನು ಎಂದು ನೀವೇ ನೋಡಿ.

ಧೋನಿ ಕುರಿತಂತೆ ಎರಡು ಘಟನೆಗಳನ್ನು ನನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿದ್ದ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಮೊದಲನೆಯದ್ದು 2006ರಲ್ಲಿ ಫೈಸಲಾಬಾದ್‌ನಲ್ಲಿ ಧೋನಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದು ಎಂದು ಕ್ರಿಕೆಟ್ ಕನೆಕ್ಟೆಡ್ ಎಂಬ ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮುಂದುವರೆದು, ನನಗಿನ್ನೂ ನೆನಪಿದೆ, ಡ್ರೆಸ್ಸಿಂಗ್ ರೂಂಗೆ ಬರುತ್ತಿದ್ದಂತೆ ಧೋನಿ ಜೋರಾಗಿ ಹೇಳಿದ ಆ ಮಾತು. ಸಾಕು ನಾನಿನ್ನು ನಿವೃತ್ತಿಯಾಗುತ್ತೇನೆ ಎಂದಿದ್ದರಂತೆ.

ನಾನು ಕೊನೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ(148) ಶತಕ ಬಾರಿಸುವಲ್ಲಿ ಯಶಸ್ವಿಯಾದೆ. ಇಷ್ಟು ಸಾಕು ನಾನು ನಿವೃತ್ತಿ ಹೇಳಲು. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಇದಕ್ಕಿಂತ ಹೆಚ್ಚೇನು ಸಾಧಿಸಲು ಸಾಧ್ಯವಿಲ್ಲ. ಇದನ್ನು ಕೇಳಿ ನಾವೆಲ್ಲ ಒಂದು ಕ್ಷಣ ಶಾಕ್ ಆಗಿದ್ದೆವು ಎಂದು ವಿವಿಎಸ್ ಹೇಳಿದ್ದಾರೆ.

ಎರಡನೇಯದ್ದು, ನಾವು 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದೆವು. ಆಗ ಅನಿಲ್ ಕುಂಬ್ಳೆ ನಿವೃತ್ತಿಯಾಗಿದ್ದರಿಂದ ಧೋನಿ ತಂಡದ ನಾಯಕರಾಗಿದ್ದರು.

ಧೋನಿ ಇದ್ದಕ್ಕಿದ್ದಂತೆ ಬಸ್ ಡ್ರೈವರ್‌ಗೆ ನೀವು ಹಿಂದೆ ಕುಳಿತುಕೊಳ್ಳಿ, ನಾನು ಬಸ್ ಚಲಾಯಿಸುತ್ತೇನೆ ಎಂದು ನಾಗ್ಪುರ ಮೈದಾನದಿಂದ ಹೋಟೆಲ್‌ವರೆಗೆ ಟೀಂ ಬಸ್‌ನ್ನು ಧೋನಿ ಡ್ರೈವಿಂಗ್ ಮಾಡಿದ್ದರಂತೆ. ಆ ಸಮಯದಲ್ಲಿ ನಾವೆಲ್ಲ ಆಶ್ಚರ್ಯಚಕಿತರಾಗಿದ್ದೆವು ಎಂದು ಲಕ್ಷ್ಮಣ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಭಾರತ ತಂಡದ ನಾಯಕ ಆಟಗಾರರಿದ್ದ ಟೀಂ ಬಸ್ ಡ್ರೈವಿಂಗ್ ಮಾಡುವುದು ಸುಲಭದ ಮಾತಲ್ಲ. ಆದರೆ ಧೋನಿ ಪ್ರತಿ ಕ್ಷಣವನ್ನು ಈ ರೀತಿಯಾಗಿ ಎಂಜಾಯ್ ಮಾಡುತ್ತಿದ್ದರು.

ಧೋನಿ ಕ್ರಿಕೆಟಿಗನಾಗಿ ಮೈದಾನದಲ್ಲಿ ಏನೆಲ್ಲಾ ಮಾಡಬೇಕೋ ಅದನ್ನೆಲ್ಲವನ್ನು ಮಾಡಿದ್ದಾರೆ. ಅದೇ ರೀತಿ ಮೈದಾನದಾಚೆಯೂ ಎಲ್ಲವೂ ಸಾಮಾನ್ಯವಾಗಿರುವಂತೆ ನಡೆದುಕೊಂಡಿದ್ದಾರೆ. ಈ ಎರಡು ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ವಿವಿಎಸ್ ಹೇಳಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವದ ದಿನದಂದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸದ್ಯ ಧೋನಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ದತೆ ನಡೆಸುತ್ತಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿದೆ.

loader