ಈ ವರ್ಷ ಆರ್‌ಸಿಬಿ ಕಪ್ ಗೆಲ್ಲಲು ಪ್ರಮುಖ ಕಾರಣಗಳೇನು?
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಗೆಲುವಿಗೆ ಕಾರಣವೇನು ನೋಡೋಣ ಬನ್ನಿ

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್‌ಸಿಬಿ ಚಾಂಪಿಯನ್ ಆಗಲು ಕಾರಣವೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಹರಾಜಿನಲ್ಲೇ ಗೆದ್ದಿದ್ದ ಆರ್‌ಸಿಬಿ. ಸ್ಟಾರ್ ಆಟಗಾರರಿಗೆ ಮಣೆ ಹಾಕದೆ, ಟೀಕೆಗಳಿಗೆ ಕಿವಿಗೊಡದೆ ಮ್ಯಾಚ್ ವಿನ್ನರ್‌ಗಳನ್ನು ಖರೀದಿಸಿದ ತಂಡ.
ಪ್ರತಿ ಆಟಗಾರನಿಗೂ ತಂಡದಲ್ಲಿ ಆತನ ಪಾತ್ರವೇನು ಎಂಬ ಬಗ್ಗೆ ಸ್ಪಷ್ಟತೆ ಒದಗಿಸಿದ್ದ ಕೋಚ್‌ಗಳು. ಬಹುತೇಕ ಆಟಗಾರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇ ಯಶಸ್ಸಿಗೆ ಕಾರಣ.
ಕೇವಲ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಅವಲಂಬಿತಗೊಳ್ಳದ ತಂಡ, 9, 10ನೇ ಕ್ರಮಾಂಕದ ವರೆಗೂ ಬ್ಯಾಟರ್‌ಗಳನ್ನು ಹೊಂದಿದ್ದ ರಿಂದ ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಯಿತು.
ಒಂದಕ್ಕಿಂತ ಹೆಚ್ಚು ಫಿನಿಶರ್‌ಗಳು ಇದ್ದಿದ್ದೇ ತಂಡ ಬಹುತೇಕ ಪಂದ್ಯಗಳಲ್ಲಿ ಮೇಲುಗೈ ಸಾಧಿಸಲು ಕಾರಣ. ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯಾ ಶೆಫರ್ಡ್‌ರಿಂದ ಅದ್ಭುತ ಕೊಡುಗೆ
• ಕಪ್ ಗೆಲುವಿನ ಹಿಂದಿದೆ ಸಂಘಟಿತ ಪರಿಶ್ರಮ, ಟೂರ್ನಿಯಲ್ಲಿ ಆಡಿದ ಒಟ್ಟು 16 ಪಂದ್ಯದಲ್ಲಿ ಬೇರೆ ಆಟಗಾರರಿಗೆ ಸಿಕ್ಕಿದೆ ಪಂದ್ಯ ಶ್ರೇಷ್ಠ ಗೌರವ
ಟೂರ್ನಿಯಲ್ಲಿ ಆರ್‌ಸಿಬಿಯ 10 ಬ್ಯಾಟರ್‌ಗಳಿಂದ ಮೂಡಿದೆ ಅರ್ಧಶತಕ. ಐಪಿಎಲ್ ಇತಿಹಾಸದಲ್ಲೇ ಇದೊಂದು ದಾಖಲೆ.
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್‌ರ ಸ್ಥಿರ ಪ್ರದರ್ಶನ. ಕೊಹ್ಲಿಯಿಂದ ದಾಖಲೆಯ 8 ಬಾರಿಗೆ ಲೀಗ್‌ನಲ್ಲಿ 500ಕ್ಕೂ ಹೆಚ್ಚು ರನ್.
ಟೂರ್ನಿಯುದ್ದಕ್ಕೂ ಅಮೋಘ ಬೌಲಿಂಗ್ ಪ್ರದರ್ಶನ. ತಂಡದ ಗೆಲುವಿನಲ್ಲಿದೆ ಹೇಜಲ್‌ವುಡ್, ಭುವನೇಶ್ವರ್, ಯಶ್ ದಯಾಳ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ಪಾತ್ರ.
ಆರ್‌ಸಿಬಿಯ ಪವರ್-ಪ್ಲೇ(ಓವರ್ 1-6), ಡೆತ್ ಓವರ್ (ಓವರ್ 17-20) ಬೌಲಿಂಗ್ ಪ್ರದರ್ಶನ 10 ತಂಡಗಳ ಪೈಕಿ ಶ್ರೇಷ್ಠ ಎನಿಸಿದೆ. ಪವರ್-ಪ್ಲೇನಲ್ಲಿ 7.75, ಡೆತ್ ಓವರ್‌ಗಳಲ್ಲಿ 10.2 ರನ್ ಎಕಾನಮಿ ರೇಟ್ ಹೊಂದಿದೆ.
ತವರಿನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ತವರಿನಾಚೆ ನಡೆದ ಲೀಗ್ ಹಂತದ ಎಲ್ಲಾ7 ಪಂದ್ಯದಲ್ಲೂ ಗೆದ್ದು ಹೊಸ ದಾಖಲೆ ಸೃಷ್ಟಿಸಿದ ತಂಡ. ಸ್ಥಳಾಂತರಗೊಂಡ, ಪ್ಲೇ-ಆಫ್ ಪಂದ್ಯಗಳನ್ನೂ ಪರಿಗಣಿಸಿದರೆ, ತವರಿನಾಚೆ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆದ್ದ ತಂಡ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.