ವಿರಾಟ್ ಕೊಹ್ಲಿ ಕೆಟ್ಟ ನಡವಳಿಕೆಯ ಆಟಗಾರ -ನಾಸಿರುದ್ದೀನ್ ಶಾ!
ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಒಮ್ಮೆ ವಿರಾಟ್ ಕೊಹ್ಲಿಯನ್ನು ‘ವಿಶ್ವದ ಕೆಟ್ಟ ನಡವಳಿಕೆಯ ಆಟಗಾರ’ಎಂದು ಕರೆದಿದ್ದರು. ನಾಸಿರುದ್ದೀನ್ ಶಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇಲ್ಲಿದೆ ಈ ಘಟನೆ ಪೂರ್ಣ ವಿವರ.
ಕೆಲವು ವರ್ಷಗಳ ಹಿಂದೆ ಅಂದರೆ 2018 ರಲ್ಲಿ, ಭಾರತದ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಜೊತೆ ಮಾತಿನ ಚಕಮಕಿಯ ಕಾರಣ ದೊಡ್ಡ ಸುದ್ದಿಯಾಗಿದ್ದರು. ಡೌನ್ ಅಂಡರ್ ಸರಣಿಯ ಸಮಯದಲ್ಲಿ ಈ ಘಟನೆ ನೆಡೆದಿತ್ತು.
Virat Kohli animated
ಈ ಘಟನೆಗೆ ಸಂಬಂಧಿಸಿದಂತೆ ನಂತರದಲ್ಲಿ ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿಬೇಕಾಯಿತು. ಕೆಲವರು ಅವರನ್ನು ಬೆಂಬಲಿಸಿದರು. ಸಾಮಾಜಿಕ ಮಾಧ್ಯಮವು ಎರಡು ಗುಂಪುಗಳಾಗಿ ಭಾಗವಾಗಿತ್ತು.
ಆ ಸಮಯದಲ್ಲಿ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಶಾ ವಿರಾಟ್ ಕೊಹ್ಲಿಯನ್ನು 'ವಿಶ್ವದ ಕೆಟ್ಟ ನಡವಳಿಕೆಯ ಆಟಗಾರ' ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕರೆದಿದ್ದರು. ವಿರಾಟ್ ಕೊಹ್ಲಿ ಕೆಟ್ಟ ನಡವಳಿಕೆಯ ಆಟಗಾರ ಭಾರತೀಯ ಕ್ರಿಕೆಟ್ ನಾಯಕ ಎಂದು ಶಾ ತರಾಟೆಗೆ ತೆಗೆದುಕೊಂಡರು.
'ವಿರಾಟ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ, ವಿಶ್ವದ ಅತ್ಯಂತ ಕೆಟ್ಟ ನಡವಳಿಕೆಯ ಆಟಗಾರ. ಅವರ ದುರಹಂಕಾರ ಮತ್ತು ಕೆಟ್ಟ ನಡವಳಿಕೆಯ ಪಕ್ಕದಲ್ಲಿ ಅವರ ಕ್ರಿಕೆಟ್ ಪ್ರತಿಭೆ ಮಸುಕಾಗಿದೆ. ಮತ್ತು ನಾನು ದೇಶವನ್ನು ತೊರೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ' ಎಂದು ನಾಸಿರುದ್ದೀನ್ ಶಾ ಬರೆದಿದ್ದಾರೆ.
Virat Kohli
ವಿರಾಟ್ ಹಿಂದಿನ ವೀಡಿಯೋದಲ್ಲಿ ಅವರ ಒಬ್ಬ ಅಭಿಮಾನಿಯನ್ನು ದೇಶವನ್ನು ತೊರೆಯುವಂತೆ ಕೇಳಿದರು. ನಾಸಿರುದ್ದೀನ್ ಅವರ ಫೇಸ್ಬುಕ್ ಪೋಸ್ಟ್ ಆ ವಿಡಿಯೋಗೆ ಪ್ರತಿಕ್ರಿಯಿಸಿದಂತೆ ಕಾಣುತ್ತದೆ.
ट्विटर,FB पर गजब की फॉलोइंग
ವಿಡಿಯೋದಲ್ಲಿ ಒಬ್ಬ ಅಭಿಮಾನಿಯು ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿಂತ ಇಂಗ್ಲಿಷ್ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಿದಾಗ ಆ ಅಭಿಮಾನಿಯನ್ನು ದೇಶವನ್ನು ತೊರೆಯುವಂತೆ ವಿರಾಟ್ ಹೇಳಿದರು.
ನಸೀರುದ್ದೀನ್ ಶಾ ಅವರ ಫೇಸ್ಬುಕ್ ಪೋಸ್ಟ್ ಅನ್ನು ಅನೇಕರು ಟೀಕಿಸಿದರೆ, ಇತರರು ಅವರನ್ನು ಬೆಂಬಲಿಸಿದರು. ಕ್ರಿಕೆಟಿಗ ಮತ್ತು ನಟನ ಫ್ಯಾನ್ಸ್ ಮತ್ತು ಫಾಲೋವರ್ಸ್‌ನಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಐಪಿಎಲ್ 2021 ಟೂರ್ನಿ ಕಾರಣದಿಂದ ವಿರಾಟ್ ಪ್ರಸ್ತುತ ದುಬೈನಲ್ಲಿದ್ದಾರೆ. ಮುಂಬರುವ ಟಿ 20 ವಿಶ್ವಕಪ್ ನಂತರ ಭಾರತದ ಟಿ 20 ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸುವ ಮೂಲಕ ವಿರಾಟ್ ತನ್ನ ಅಭಿಮಾನಿಗಳಿಗೆ ಆಘಾತ ನೀಡಿದರು. ಆದರೆ ಅವರು ಟೆಸ್ಟ್ ಮತ್ತು ಏಕದಿನ ನಾಯಕನಾಗಿ ಮುಂದುವರಿಯಲು ಬಯಸುತ್ತಾರೆ.