MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • Virat Kohliಯಿಂದ ಪಾಂಡ್ಯವರೆಗೆ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ರೊನಾಲ್ಡೊ ಫ್ಯಾನ್ಸ್ ಗೊತ್ತಾ?

Virat Kohliಯಿಂದ ಪಾಂಡ್ಯವರೆಗೆ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ರೊನಾಲ್ಡೊ ಫ್ಯಾನ್ಸ್ ಗೊತ್ತಾ?

ಟೀಂ ಇಂಡಿಯಾ ಆಟಗಾರರಿಗೆ ಕೋಟಿ ಕೋಟಿ ಅಭಿಮಾನಿಳಿದ್ರೆ ಟೀಂ ಇಂಡಿಯಾ ಆಟಗಾರರು ಮಾತ್ರ ಕ್ರಿಸ್ಟಿಯಾನೊ ರೊನಾಲ್ಡೊ ಆಟಕ್ಕೆ ಫಿದಾ ಆಗಿದ್ದಾರೆ. 41 ನೇ ವಯಸ್ಸಿನಲ್ಲಿ ಕ್ರೊಯೇಷಿಯಾ ವಿರುದ್ಧ ಕಣಕ್ಕಿಳಿದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ದಾಖಲೆ ಬರೆದು ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ.

2 Min read
Author : Roopa Hegde
Published : Jul 03 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
18
ಕ್ರಿಸ್ಟಿಯಾನೊ ರೊನಾಲ್ಡೊ
Image Credit : Asianet News

ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ ಭಾರತೀಯ ಕ್ರಿಕೆಟ್ ತಂಡವನ್ನು ಒಳಗೊಂಡಂತೆ ವಿಶ್ವಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶ್ವಾದ್ಯಂತ 1 ಬಿಲಿಯನ್ ಜನರು ಅಂದರೆ ಪ್ರತಿ ಎಂಟು ಜನರಲ್ಲಿ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ರೊನಾಲ್ಡೊ ಅವರನ್ನು ಫಾಲೋ ಮಾಡ್ತಿದ್ದಾರೆ. ಈ ಸಂಖ್ಯೆ ಯುರೋಪ್ನ ಜನಸಂಖ್ಯೆಯನ್ನು ಮೀರಿದೆ. ಅಂದರೆ ಸುಮಾರು 750 ಮಿಲಿಯನ್ ತಲುಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ವಿರಾಟ್ ಕೊಹ್ಲಿ
Image Credit : Asianet News

ವಿರಾಟ್ ಕೊಹ್ಲಿ

ಕಿಂಗ್ ಕೊಹ್ಲಿ, ರೊನಾಲ್ಡೊ ಅವರ ದೊಡ್ಡ ಅಭಿಮಾನಿ. 2022 ರ ವಿಶ್ವಕಪ್ನಿಂದ ಪೋರ್ಚುಗಲ್ ನಿರ್ಗಮಿಸಿದ ನಂತರ ಕೊಹ್ಲಿ, ರೊನಾಲ್ಡೊ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಎಂದು ಕರೆದು ಪೋಸ್ಟ್ ಹಂಚಿಕೊಂಡಿದ್ದರು. ರೊನಾಲ್ಡೊ ಅವರಿಗೆ ಆಟದ ಮೇಲಿನ ಹಸಿವು ಅವರನ್ನು ಪ್ರತ್ಯೇಕಿಸುತ್ತದೆ ಎಂದು ನಾಲ್ಕು ವರ್ಷಗಳ ಹಿಂದೆ ಕೊಹ್ಲಿ ಹೇಳಿದ್ದರು.

Related Articles

Related image1
IPL ಹರಾಜಿನಿಂದ ಒಂದು ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ ಅಳಿಯ, ಸೆಹ್ವಾಗ್ ಕಿರಿಮಗ
Related image2
ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
38
ಶ್ರೇಯಸ್ ಅಯ್ಯರ್
Image Credit : Asianet News

ಶ್ರೇಯಸ್ ಅಯ್ಯರ್

ಮೆಸ್ಸಿ ಮತ್ತು ರೊನಾಲ್ಡೊ ನಡುವೆ ಆಯ್ಕೆ ಬಂದಾಗ ಟೀಮ್ ಇಂಡಿಯಾದ ಪ್ರಸ್ತುತ ನಾಯಕ ಶ್ರೇಯಸ್ ಅಯ್ಯರ್ ಆಯ್ಕೆ ಮಾಡಿದ್ದು ರೊನಾಲ್ಡೊ ಅವರನ್ನು. ಇನ್ನು ಟೀಮ್ ಇಂಡಿಯಾದ ವಿಶ್ವ ಚಾಂಪಿಯನ್ ನಾಯಕ ಸೂರ್ಯಕುಮಾರ್ ಯಾದವ್ಕೂಡ ರೊನಾಲ್ಡೊ ಅವರ ದೊಡ್ಡ ಅಭಿಮಾನಿ.

48
ಹಾರ್ದಿಕ್ ಪಾಂಡ್ಯ
Image Credit : Asianet News

ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರೊನಾಲ್ಡೊ ಅವರ ದೊಡ್ಡ ಅಭಿಮಾನಿ ಎನ್ನಲಾಗುತ್ತೆ. ಅವರು ಸೋಶಿಯಲ್ ಮೀಡಿಯಾದಲ್ಲಿ ರೊನಾಲ್ಡೊ ಅವರ ಹೆಸರು ಮತ್ತು ಸಂಖ್ಯೆ ಇರುವ ಜೆರ್ಸಿಗಳನ್ನು ಧರಿಸಿ ಅವರ ಸ್ಟೈಲ್ ಫಾಲೋ ಮಾಡ್ತಾರೆ.

58
ಮೊಹಮ್ಮದ್ ಸಿರಾಜ್
Image Credit : Asianet News

ಮೊಹಮ್ಮದ್ ಸಿರಾಜ್

ಕ್ರಿಕೆಟ್ ಮೈದಾನದಲ್ಲಿ ವಿಕೆಟ್ ಪಡೆದ ನಂತರ ಸಿರಾಜ್ ಅವರ SIUU ಸೆಲಬ್ರೇಷನ್ ಪೋರ್ಚುಗೀಸ್ ನಾಯಕನ ಮೇಲಿರುವ ಅಭಿಮಾನಕ್ಕೆ ಸಾಕ್ಷ್ಯವಾಗಿದೆ.

68
ಯುವರಾಜ್ ಸಿಂಗ್
Image Credit : Asianet News

ಯುವರಾಜ್ ಸಿಂಗ್

ಮಾಜಿ ಕ್ರಿಕೆಟಿಗ ಮತ್ತು ಭಾರತದ ಅತ್ಯುತ್ತಮ ಆಲ್ರೌಂಡರ್ ಯುವರಾಜ್ ಸಿಂಗ್, ರೊನಾಲ್ಡೊ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ರೊನಾಲ್ಡೊ ಕಾರಣದಿಂದಾಗಿ, ಯುವರಾಜ್ ಯಾವಾಗಲೂ ಪೋರ್ಚುಗಲ್ ಅನ್ನು ಕಪ್ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಿದ್ದಾರೆ.

78
ಕೆಎಲ್ ರಾಹುಲ್
Image Credit : Asianet News

ಕೆಎಲ್ ರಾಹುಲ್

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೆಎಲ್ ರಾಹುಲ್ ರೊನಾಲ್ಡೊ ಮತ್ತು ಆರ್ಸೆನಲ್ನ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತದೆ. ರಾಹುಲ್ ಬಾಲ್ಯದಲ್ಲಿ ಫುಟ್ಬಾಲ್ ಆಟಗಾರನಾಗಬೇಕೆಂದು ಬಯಸಿದ್ದರು.

88
ಸೌರವ್ ಗಂಗೂಲಿ
Image Credit : Asianet News

ಸೌರವ್ ಗಂಗೂಲಿ

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಫುಟ್ಬಾಲ್ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಅವರು ಹೆಚ್ಚಾಗಿ ಫುಟ್ಬಾಲ್ ಆಡುವುದನ್ನು ಕಾಣ್ಬಹುದು. ವಿಶ್ವ ಚಾಂಪಿಯನ್ ಅರ್ಜೆಂಟೀನಾ ನಾಯಕ ಡಿಯಾಗೋ ಮರಡೋನಾ ಮತ್ತು ಪೋರ್ಚುಗೀಸ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಕ್ರಿಸ್ಟಿಯಾನೊ ರೊನಾಲ್ಡೊ
ವಿರಾಟ್ ಕೊಹ್ಲಿ
ಸೌರವ್ ಗಂಗೂಲಿ
ಕ್ರಿಕೆಟ್
ಫುಟ್‌ಬಾಲ್

Latest Videos
Recommended Stories
Recommended image1
ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!
Recommended image2
IPL ಹರಾಜಿನಿಂದ ಒಂದು ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ ಅಳಿಯ, ಸೆಹ್ವಾಗ್ ಕಿರಿಮಗ
Recommended image3
Cricket: ಸಾಮಾಜಿಕ ಜಾಲತಾಣದಲ್ಲಿ ಪರಿಚಯ, ಅಪ್ರಾಪ್ತೆಯ ಮೇಲೆ ಲೈ*ಗಿಕ ದೌರ್ಜನ್ಯ: ಕಂಬಿ ಎಣಿಸಲಿದ್ದಾನೆ ಖ್ಯಾತ ಕ್ರಿಕೆಟಿಗ!
Related Stories
Recommended image1
IPL ಹರಾಜಿನಿಂದ ಒಂದು ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ ಅಳಿಯ, ಸೆಹ್ವಾಗ್ ಕಿರಿಮಗ
Recommended image2
ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved