ಜಗತ್ತಿನ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ಕ್ಯಾಪ್ಟನ್‌ಗಳಿವರು..!
ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ತನ್ನದೇ ಆದ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿದೆ. ಅದರಲ್ಲೂ ಟಿ20 ಕ್ರಿಕೆಟ್ ಜನಪ್ರಿಯವಾದ ಮೇಲಂತೂ ಕ್ರಿಕೆಟ್ ಖದರ್ ಇನ್ನೊಂದು ಹಂತಕ್ಕೇರಿದೆ. ಏಷ್ಯಾ ಖಂಡದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿದ್ದರೂ ಸಹಾ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಏಷ್ಯಾ ಯಾವ ನಾಯಕನೂ ಸ್ಥಾನ ಪಡೆದಿಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ತನ್ನ ನಾಯಕನಿಗೆ ಕೊಡುವ ಸಂಭಾವನೆಗಿಂತ, ಮತ್ತೊಂದು ಕ್ರಿಕೆಟ್ ಮಂಡಳಿ ತನ್ನ ನಾಯಕನಿಗೆ ಅತಿಹೆಚ್ಚು ಸಂಭಾವನೆ ನೀಡುತ್ತಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಸಂಭಾವನೆಯಿಂದ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಎಲ್ಲಾ 11 ಅಂತರರಾಷ್ಟ್ರೀಯ ತಂಡಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ:

11. ದೀಮುತ್ ಕರುಣರತ್ನೆ

11. ದೀಮುತ್ ಕರುಣರತ್ನೆ

ಸಂಗಕ್ಕರ ಹಾಗೂ ಜಯವರ್ಧನೆ ನಾಯಕತ್ವದಿಂದ ಕೆಳಗಿಳಿದ ಬಳಿಕ ಲಂಕಾ ತಂಡ ನಾವಿಕನಿಲ್ಲದ ದೋಣಿಯಂತಾಗಿದೆ. ಇದರ ನಡುವೆ ಕೋವಿಡ್ ಅಪ್ಪಳಿಸಿರುವುದರಿಂದ ಲಂಕಾ ಕ್ರಿಕೆಟ್ ಮಂಡಳಿ ತನ್ನ ಟೆಸ್ಟ್ ತಂಡದ ನಾಯಕ ದೀಮುತ್ ಕರುಣರತ್ನೆಗೆ 51 ಲಕ್ಷ ರುಪಾಯಿ ವಾರ್ಷಿಕ ಸಂಭಾವನೆ ನೀಡುತ್ತಿದೆ.

10. ಬಾಬರ್ ಅಜಂ

10. ಬಾಬರ್ ಅಜಂ

ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನ ಡೇಂಜರಸ್ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಹೀಗಿದ್ದೂ 3 ಮಾದರಿಯ ತಂಡದ ನಾಯಕ ಎನಿಸಿರುವ ಬಾಬರ್ ಅಜಂಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕೇವಲ 62.40 ಲಕ್ಷ ರುಪಾಯಿ ವಾರ್ಷಿಕ ಸಂಭಾವನೆ ನೀಡುತ್ತಿದೆ.

09. ಕ್ರೆಗ್ ಬ್ರಾಥ್‌ವೇಟ್

09. ಕ್ರೆಗ್ ಬ್ರಾಥ್‌ವೇಟ್

ಒಂದು ಕಾಲದಲ್ಲಿ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಕೆರಿಬಿಯನ್ ಪಡೆ ಸದ್ಯ ತನ್ನ ಆಟಗಾರರಿಗೆ ಸಂಭಾವನೆ ನೀಡುವ ವಿಚಾರದಲ್ಲಿ ಸಾಕಷ್ಟು ಹಿಂದಿದೆ. ವಿಂಡೀಸ್ ಟೆಸ್ಟ್ ತಂಡದ ನಾಯಕ ಕ್ರೆಗ್ ಬ್ರಾಥ್‌ವೇಟ್ ವಾರ್ಷಿಕ 1.39 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

08. ಕೀರನ್ ಪೊಲ್ಲಾರ್ಡ್

08. ಕೀರನ್ ಪೊಲ್ಲಾರ್ಡ್

ವಿಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕ ಕೀರನ್ ಪೊಲ್ಲಾರ್ಡ್ ವಾರ್ಷಿಕ 1.73 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

07. ಇಯಾನ್ ಮಾರ್ಗನ್

07. ಇಯಾನ್ ಮಾರ್ಗನ್

ಇಂಗ್ಲೆಂಡ್‌ಗೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಸೀಮಿತ ಓವರ್‌ಗಳ ನಾಯಕ ಮಾರ್ಗನ್ ವಾರ್ಷಿಕ 1.75 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಟೆಸ್ಟ್ ತಂಡದ ನಾಯಕ ರೂಟ್ ಹಾಗೂ ಸೀಮಿತ ಓವರ್‌ಗಳ ತಂಡದ ನಾಯಕ ಮಾರ್ಗನ್‌ಗೂ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

06. ಕೇನ್ ವಿಲಿಯಮ್ಸನ್

06. ಕೇನ್ ವಿಲಿಯಮ್ಸನ್

ವಿಶ್ವಕ್ರಿಕೆಟ್‌ನ ಅದ್ಭುತ ಬ್ಯಾಟ್ಸ್‌ಮನ್, ಕ್ಯಾಪ್ಟನ್ ಕೂಲ್ ಖ್ಯಾತಿಯ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ವಾರ್ಷಿಕ ಕೇವಲ 1.77 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ.

05. ತೆಂಬ ಬವುಮಾ

05. ತೆಂಬ ಬವುಮಾ

ದಕ್ಷಿಣ ಆಫ್ರಿಕಾ ಸೀಮಿತ ಓವರ್‌ಗಳ ತಂಡದ ನಾಯಕನಾಗಿ ಇತ್ತೀಚೆಗಷ್ಟೇ ನೇಮಕವಾಗಿರುವ ತೆಂಬ ಬವುಮಾ ವಾರ್ಷಿಕ 2.5 ಕೋಟಿ ರುಪಾಯಿ ಸಂಭಾಯನೆಯನ್ನು ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಪಡೆಯುತ್ತಿದ್ದಾರೆ.

04. ಡೀನ್ ಎಲ್ಗಾರ್

04. ಡೀನ್ ಎಲ್ಗಾರ್

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಡೀನ್ ಎಲ್ಗಾರ್ ವಾರ್ಷಿಕ 3.2 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

03. ಆ್ಯರೋನ್ ಫಿಂಚ್& ಟಿಮ್ ಪೈನ್

03. ಆ್ಯರೋನ್ ಫಿಂಚ್& ಟಿಮ್ ಪೈನ್

ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಫಿಂಚ್ ಹಾಗೂ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಈ ಇಬ್ಬರು ಸಮಾನ ಸಂಬಳ ಪಡೆಯುತ್ತಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಇವರಿಬ್ಬರಿಗೂ ವಾರ್ಷಿಕ 4.87 ಕೋಟಿ ರುಪಾಯಿ ಸಂಭಾವನೆ ನೀಡುತ್ತಿದೆ.

02. ವಿರಾಟ್ ಕೊಹ್ಲಿ

02. ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ A+ ಗ್ರೇಡ್ ಪಡೆದಿದ್ದು, ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ನೆನಪಿರಲಿ ಇದು ಬರಿ ಬಿಸಿಸಿಐ ಕೊಡುವ ಸಂಭಾವನೆ. ಇದಲ್ಲದೇ ಕೊಹ್ಲಿ ಐಪಿಎಲ್, ಜಾಹೀರಾತುಗಳಿಂದ ಕೋಟ್ಯಾಂತರ ರುಪಾಯಿಗಳನ್ನು ಸಂಪಾದಿಸುತ್ತಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.