ವಿರಾಟ್ ಕೊಹ್ಲಿಗೆ ರಕ್ತದಲ್ಲಿ ಬಿಡಿಸಿದ ಭಾವಚಿತ್ರ ಅರ್ಪಿಸಿದ ಚಿತ್ರಕಲಾ ಶಿಕ್ಷಕ
ಬಾಗಲಕೋಟೆ (ಮೇ 20): ಬಾಗಲಕೋಟೆಯ ಚಿತ್ರಕಲಾ ಶಿಕ್ಷಕನೊಬ್ಬ ತನ್ನ ದೇಹದ ರಕ್ತ ಬಸಿದು, ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಭಾವಚಿತ್ರ ಬರೆದಿದ್ದಾನೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಐಪಿಎಲ್ 2024ರ ಋತುವಿನಲ್ಲಿ ಪ್ಲೇಆಪ್ ಹಂತವನ್ನು ತಲುಪಿದ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಚಿತ್ರಕಲಾ ಶಿಕ್ಷಕ ರಕ್ತದಿಂದ ಕೊಹ್ಲಿ ಭಾವಚಿತ್ರ ಬಿಡಿಸಿದ್ದಾನೆ.
ಆರ್‌ಸಿಬಿ ಸತತವಾಗಿ 6 ಪಂದ್ಯಗಳನ್ನು ಸೋತು ಐಪಿಎಲ್ ಟೂರ್ನಿಯಿಂದ ಹೊರಬೀಳುತ್ತದೆ ಎಂಬುದು ಖಚಿತವಾಗಿತ್ತು. ಇದಕ್ಕೆ ಬೆಂಗಳೂರಿನ ಜನತೆ ಇದೇನಾ ಆರ್‌ಸಿಬಿ ಹೊಸ ಅಧ್ಯಾಯ ಎಂದು ಭಾರಿ ಟೀಕೆ ಮಾಡಿ ತಂಡದ ಎಲ್ಲ ಸದಸ್ಯರಿಗೂ ಮಂಗಳಾರತಿ ಮಾಡಿದ್ದರು.
ಇದರ ಬೆನ್ನಲ್ಲಿಯೇ ಸತತವಾಗಿ 6 ಪಂದ್ಯಗಳನ್ನು ಗೆದ್ದ ಆರ್‌ಸಿಬಿ ತಂಡವು ಕಳೆದೆರಡು ದಿನಗಳ ಹಿಂದೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿಯೂ ಭಾರಿ ಅಂತರದಲ್ಲಿ ಗೆದ್ದು ರೇಟಿಂಗ್ ಪಾಯಿಂಟ್ಸ್ ಮೂಲಕ ಪ್ಲೇ ಹಂತವನ್ನು ತಲುಪಿದೆ.
ಆರ್‌ಸಿಬಿ ಸತತವಾಗಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದ ಹಾಗೂ ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ಪರವಾಗಿ ಆಟವಾಡುತ್ತಿರುವ ವಿರಾರ್ ಕೊಹ್ಲಿ ಕೊಡುಗೆ ಅಗ್ರಗಣ್ಯವಾಗಿದೆ. ಹೀಗಾಗಿ, ಬಾಗಲಕೋಟೆ ಚಿತ್ರಕಲಾ ಶಿಕ್ಷಕನೊಬ್ಬ ತನ್ನ ದೇಹದ ರಕ್ತವನ್ನು ಬಸಿದು ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಬಿಡಿಸಿದ್ದಾನೆ.
ಶಿವಾನಂದ ನೀಲನ್ನವರ ರಕ್ತದಲ್ಲಿ ವಿರಾಟ್ ಕೊಹ್ಲಿ ಭಾವಚಿತ್ರ ಬರೆದ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿಯ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಅವರು ಸಿಎಸ್‌ಕೆ ಎದುರಿನ ಪಂದ್ಯವನ್ನು ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಮೇಲಿನ ಅಭಿಮಾನ ತೋರಿಸಲು ರಕ್ತದಲ್ಲಿ ಚಿತ್ರ ಬರೆದಿದ್ದಾರೆ.
ಇನ್ನು ತಮ್ಮ ದೇಹದ ರಕ್ತದಿಂದ ಬಿಡಿಸಿರೋ ಚಿತ್ರಕಲೆಯನ್ನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ತೋರಿಸಬೇಕೆಂಬ ಬಯಕೆಯನ್ನು ಹೊತ್ತಿದ್ದಾರೆ. ಆರ್‌ಸಿಬಿ ಪ್ಲೇ ಆಫ್ ಮ್ಯಾಚ್ ಆಡುವ ಕ್ರೀಡಾಂಗಣಕ್ಕೆ ರಕ್ತದಲ್ಲಿ ಬರೆದಿರುವ ವಿರಾಟ್ ಕೊಹ್ಲಿ ಅವರ ಭಾವಚಿತ್ರಕ್ಕೆ ಫ್ರೇಮ್ ಹಾಕಿಸಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿಯ ಎಸ್‌ಸಿಪಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಮುಂದಿನ ಐಪಿಎಲ್ ಮ್ಯಾಚ್‌ಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದು, ಕೊಹ್ಲಿ ಅವರಿಗೆ ಹೇಗೆ ತೋರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.