- Home
- Sports
- Cricket
- ಕೊಹ್ಲಿ ಹೊಸ ವರ್ಷದ ಪೋಸ್ಟ್‌ಗೆ 80 ಲಕ್ಷ ಲೈಕ್ಸ್; ವಿರುಷ್ಕಾ ಜೋಡಿ ನೋಡಿ ದೃಷ್ಟಿ ಆಗೋದು ಗ್ಯಾರಂಟಿ ಎಂದ ಫ್ಯಾನ್ಸ್
ಕೊಹ್ಲಿ ಹೊಸ ವರ್ಷದ ಪೋಸ್ಟ್‌ಗೆ 80 ಲಕ್ಷ ಲೈಕ್ಸ್; ವಿರುಷ್ಕಾ ಜೋಡಿ ನೋಡಿ ದೃಷ್ಟಿ ಆಗೋದು ಗ್ಯಾರಂಟಿ ಎಂದ ಫ್ಯಾನ್ಸ್
ದುಬೈ: 2026ರನ್ನು ಅದ್ದೂರಿಯಾಗಿ ಎಲ್ಲರೂ ಸ್ವಾಗತಿಸಿದ್ದೇವೆ. ಈ ಪೈಕಿ ವಿರಾಟ್ ಕೊಹ್ಲಿ ಹೊಸ ವರ್ಷವನ್ನು ದುಬೈನಲ್ಲಿ ಸ್ವಾಗತಿಸಿದ್ದಾರೆ. ಇದರ ನಡುವೆ ಪತ್ನಿ ಅನುಷ್ಕಾ ಜತೆಗಿನ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಹಂಚಿಕೊಂಡಿದ್ದು, ಕೇವಲ 24 ಗಂಟೆಯೊಳಗೆ 80 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

ಕೊಹ್ಲಿ ದುಬೈನಲ್ಲಿ ಹೊಸ ವರ್ಷಾಚರಣೆ
ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೊಸ ವರ್ಷವನ್ನು ಆಚರಿಸಲು ದುಬೈಗೆ ತೆರಳಿದ್ದರು. ತಮ್ಮ ಕುಟುಂಬದ ಸದಸ್ಯರ ಜೊತೆ ಕಿಂಗ್ ಕೊಹ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದಾರೆ.
ಹೊಸ ವರ್ಷವನ್ನು ಸ್ವಾಗತಿಸಿದ ವಿರುಷ್ಕಾ ದಂಪತಿ
ಹೊಸ ವರ್ಷವನ್ನು ಸ್ವಾಗತಿಸುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
24 ಗಂಟೆಯಲ್ಲಿ 80 ಲಕ್ಷ ಲೈಕ್ಸ್
ವಿರಾಟ್ ಕೊಹ್ಲಿಯ ಈ ಫೋಟೋಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 24 ಗಂಟೆಗೂ ಕಡಿಮೆ ಸಮಯದಲ್ಲಿ ಬರೋಬ್ಬರಿ 80 ಲಕ್ಷ ಲೈಕ್‌ಗಳು ಬಂದಿವೆ.
ಫ್ಯಾನ್ಸ್ ಮನಗೆದ್ದ ಕೊಹ್ಲಿ ಫೋಟೋ
ಇನ್ನು ವಿರಾಟ್ ಕೊಹ್ಲಿ ಬ್ಲೂ ಸೂಟ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡರೆ, ಅನುಷ್ಕಾ ಶರ್ಮಾ ಕಪ್ಪು ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಈ ಫೋಟೋ ನೆಟ್ಟಿಗರ ಮನ ಗೆದ್ದಿದೆ.
ವಿರುಷ್ಕಾ ದಂಪತಿಯನ್ನು ಕೊಂಡಾಡಿದ ಫ್ಯಾನ್ಸ್
ಈ ಫೋಟೋಗೆ ನೆಟ್ಟಿಗರು ರಾಜ ಮತ್ತು ರಾಣಿಯ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ. ಜೋಡಿ ನೋಡಿದರೆ ದೃಷ್ಠಿ ಆಗಬಹುದು ಎಂದು ಕಮೆಂಟ್ ಮಾಡಿದ್ದಾರೆ.
15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಆಡಿದ ಕೊಹ್ಲಿ
ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ, 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಡೆಲ್ಲಿ ಪರ ಎರಡು ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 104.00ರ ಸರಾಸರಿಯಲ್ಲಿ 208 ರನ್ ಸಿಡಿಸಿದ್ದರು.
ರೆಡ್ ಹಾಟ್ ಫಾರ್ಮ್‌ನಲ್ಲಿರುವ ಕೊಹ್ಲಿ
ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಜನವರಿ 11ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.
ಮುಗಿಲು ಮುಟ್ಟಿದ ಕೊಹ್ಲಿ ಕ್ರೇಜ್
ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ಇದೀಗ ಜನವರಿ 11ರಂದು ಕಿವೀಸ್ ಎದುರಿನ ಪಂದ್ಯಕ್ಕೆ ಟಿಕೆಟ್ ಹರಾಜಿಗಿಟ್ಟ ಕೇವಲ 8 ನಿಮಿಷದಲ್ಲಿ ಎಲ್ಲಾ ಟಿಕೆಟ್ ಸೋಲ್ಡೌಟ್ ಆಗಿದ್ದು, ಇದು ಕೊಹ್ಲಿ ಕ್ರೇಜ್ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

