ಮಗಳನ್ನು ಸ್ವಾಗತಿಸಲು ರೆಡಿಯಾಗಿರುವ ವಿರುಷ್ಕಾ ದಂಪತಿ ಮನೆ ನೋಡಿ!

First Published Jan 15, 2021, 5:50 PM IST

ಕಳೆದ ವಾರ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಶೀಘ್ರದಲ್ಲೇ ಇಬ್ಬರೂ ತಮ್ಮ ಮಗುವಿನ ಜೊತೆ ಮನೆಗೆ ತಲುಪಲಿದ್ದಾರೆ. ತಮ್ಮ ಮಗಳನ್ನು ಮುಂಬೈನ ವರ್ಲಿಯಲ್ಲಿರುವ ತಮ್ಮ ಐಷಾರಾಮಿ ಫ್ಲ್ಯಾಟ್‌ಗೆ ಕರೆದೊಯ್ಯಲಿದ್ದಾರೆ. ವಿರಾಟ್ ಕೊಹ್ಲಿ ಈ ಫ್ಲಾಟ್ ಅನ್ನು 2016ರಲ್ಲಿ ಖರೀದಿಸಿದರು. 7,171 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಪಾರ್ಟ್‌ಮೆಂಟ್ ಓಂಕರ್ 1973 ರ 35ನೇ ಮಹಡಿಯಲ್ಲಿದೆ. ಈ ಅಪಾರ್ಟ್ಮೆಂಟ್‌ನಿಂದ ಇಡೀ ಮುಂಬೈ ನಗರ ಮತ್ತು ಅರೇಬಿಯನ್ ಸಮುದ್ರ ಕಾಣಿಸುತ್ತದೆ. ಇದರ ಪೋಟೋಗಳು ಹೇಗಿವೆ ನೋಡಿ.