MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 'ಬ್ಯಾಟಿಂಗ್‌ ಮಾಡುವಾಗ ಬೌಲರ್‌ ಯಾರು ಅನ್ನೋದನ್ನ ನೋಡೋದಿಲ್ಲ': ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್ ಬಳಿಕ ವೈಭವ್‌ ಗುಡುಗು

'ಬ್ಯಾಟಿಂಗ್‌ ಮಾಡುವಾಗ ಬೌಲರ್‌ ಯಾರು ಅನ್ನೋದನ್ನ ನೋಡೋದಿಲ್ಲ': ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್ ಬಳಿಕ ವೈಭವ್‌ ಗುಡುಗು

ಯುವ ಕ್ರಿಕೆಟಿಗ ವೈಭವ್, ಬುಮ್ರಾರಂತಹ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಪಂದ್ಯದ ನಂತರವೂ ಸಂಭ್ರಮಕ್ಕಿಂತ ಶಿಸ್ತಿಗೆ ಆದ್ಯತೆ ನೀಡಿದ ಅವರ ವೃತ್ತಿಪರತೆ ಮತ್ತು ತಂದೆ-ಕೋಚ್‌ರ ಮಾರ್ಗದರ್ಶನವನ್ನು ನೆನಪಿಸಿಕೊಂಡಿದ್ದಾರೆ.

2 Min read
Author : Santosh Naik
Published : Apr 11 2026, 10:24 AM IST
Share this Photo Gallery
  • FB
  • TW
  • Linkdin
  • Whatsapp
15
ಬೌಲರ್ ನೋಡಿ ಹೆದರಲಿಲ್ಲ, ಚೆಂಡನ್ನು ಮಾತ್ರ ಗಮನಿಸಿದೆ
Image Credit : ANI

ಬೌಲರ್ ನೋಡಿ ಹೆದರಲಿಲ್ಲ, ಚೆಂಡನ್ನು ಮಾತ್ರ ಗಮನಿಸಿದೆ

ಜೋಶ್ ಹ್ಯಾಸಲ್‌ವುಡ್‌ ಮತ್ತು ಜಸ್ಪ್ರೀತ್ ಬುಮ್ರಾರಂತಹ ಅಪಾಯಕಾರಿ ಬೌಲರ್‌ಗಳ ಎದುರು ಬ್ಯಾಟ್ ಬೀಸುವಾಗ ಭಯವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈಭವ್, "ಯಾರು ಬೌಲಿಂಗ್ ಮಾಡುತ್ತಿದ್ದಾರೆ ಎಂಬುದು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಓಡುತ್ತಿರುತ್ತದೆ. ಆದರೆ ಬ್ಯಾಟಿಂಗ್ ಮಾಡುವಾಗ ನನ್ನ ಸಂಪೂರ್ಣ ಗಮನ ಚೆಂಡಿನ ಮೇಲಿತ್ತೇ ಹೊರತು ಬೌಲರ್ ಮೇಲಲ್ಲ. ಚೆಂಡಿನ ವೇಗ ಮತ್ತು ಲೈನ್ ನೋಡಿ, ನಾನು ಅಭ್ಯಾಸ ಮಾಡಿದ್ದನ್ನೇ ಮೈದಾನದಲ್ಲಿ ಅಳವಡಿಸಿಕೊಂಡೆ. ನನ್ನ ಸಹಜ ಆಟಕ್ಕೆ ನಾನು ಒತ್ತು ನೀಡಿದೆ" ಎಂದು ಹೇಳಿದ್ದಾರೆ.

25
ಮಿಂಚಿನ ಅರ್ಧಶತಕದಲ್ಲಿ ಸಿಕ್ಸರ್‌ ಮಳೆ
Image Credit : BCCI

ಮಿಂಚಿನ ಅರ್ಧಶತಕದಲ್ಲಿ ಸಿಕ್ಸರ್‌ ಮಳೆ

ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚಿದ ವೈಭವ್, ಎದುರಾಳಿ ತಂಡಕ್ಕೆ ಶಾಕ್ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 7 ಗಗನಚುಂಬಿ ಸಿಕ್ಸರ್‌ಗಳು ಸೇರಿದ್ದವು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್‌, ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ವೇಗದ ಅರ್ಧಶತಕ ಬಾರಿಸಿದ ಮೂರನೇ ಭಾರತೀಯ ಎಂಬ ದಾಖಲೆ ಬರೆದರು. ವಿಶೇಷವೆಂದರೆ ಇದೇ ಸೀಸನ್‌ನಲ್ಲಿ ಸಿಎಸ್‌ಕೆ ವಿರುದ್ಧವೂ ಇವರು 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

Related Articles

Related image1
ಶಹಬ್ಬಾಶ್ ವೈಭವ್! ಯುವ ಆಟಗಾರನ ಆರ್ಭಟಕ್ಕೆ ಮನಸೋತು ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ
Related image2
ಐಪಿಎಲ್ 2026: ವಿಡಿಯೋ ಗೇಮ್‌ ಕ್ರಿಕೆಟ್‌ ಆಡಿದ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್‌
35
ಶಿಸ್ತಿಗೆ ಹೆಚ್ಚಿನ ಆದ್ಯತೆ
Image Credit : Getty

ಶಿಸ್ತಿಗೆ ಹೆಚ್ಚಿನ ಆದ್ಯತೆ

ಗೆಲುವಿನ ನಂತರ ಇಂದು ರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತೀರಾ? ಎಂಬ ಆಂಕರ್ ಪ್ರಶ್ನೆಗೆ ಮುಗುಳ್ನಕ್ಕ ವೈಭವ್, "ಇಲ್ಲ ಸರ್, ಅಂತಹದ್ದೇನೂ ಇಲ್ಲ. ನಮಗೆ ಬೆಳಿಗ್ಗೆ ಬೇಗ ಫ್ಲೈಟ್ ಇರುವುದರಿಂದ ನಾವು ಇಂದು ಸ್ವಲ್ಪ ಬೇಗ ಮಲಗಬೇಕು ಮತ್ತು ಬೇಗ ಹೊರಡಬೇಕು" ಎಂದು ಹೇಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.

45
ತಂದೆ, ಕೋಚ್‌ ಕಿವಿಮಾತು
Image Credit : Getty

ತಂದೆ, ಕೋಚ್‌ ಕಿವಿಮಾತು

ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಮಾತನಾಡಿದ 15 ವರ್ಷದ ಈ ಯುವಕ, "ನನ್ನ ತಂದೆ, ನನ್ನ ಕೋಚ್ ಮತ್ತು ನನ್ನ ಮಾರ್ಗದರ್ಶಿ ರೋಹಿತ್ ಸರ್ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಇದು ಸುದೀರ್ಘ ಪ್ರಯಾಣ, ಇದು ಕೇವಲ ಆರಂಭವಷ್ಟೇ ಎಂದು ಹೇಳಿದ್ದಾರೆ. ಬೇರೆ ಯಾವುದಕ್ಕೂ ಗಮನ ಕೊಡದೆ ಕೇವಲ ನಿಮ್ಮ ಕೆಲಸ ಮತ್ತು ಪ್ರಕ್ರಿಯೆಯ ಮೇಲೆ ಗಮನಹರಿಸಿ ಎಂಬುದು ಅವರ ಕಿವಿಮಾತು" ಎಂದು ತಿಳಿಸಿದರು.

55
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನಗೆದ್ದ ವೈಭವ್
Image Credit : Getty

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನಗೆದ್ದ ವೈಭವ್

ವೈಭವ್ ಅವರ ಈ ಸರಳ ಮತ್ತು ಸ್ಪಷ್ಟ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸ್ಟಾರ್ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಧೈರ್ಯ ಮತ್ತು ಪಂದ್ಯದ ನಂತರದ ಅವರ ನಮ್ರತೆ ಅಭಿಮಾನಿಗಳ ಹೃದಯ ಗೆದ್ದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವೈಭವ್ ಸೂರ್ಯವಂಶಿ
ರಾಜಸ್ಥಾನ್ ರಾಯಲ್ಸ್
ಕ್ರಿಕೆಟ್
ಐಪಿಎಲ್

Latest Videos
Recommended Stories
Recommended image1
ಶಹಬ್ಬಾಶ್ ವೈಭವ್! ಯುವ ಆಟಗಾರನ ಆರ್ಭಟಕ್ಕೆ ಮನಸೋತು ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ
Recommended image2
ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈಗೆ ಡಬಲ್ ಗುಡ್ ನ್ಯೂಸ್! ತಂಡಕ್ಕೆ ಸ್ಟಾರ್ ಆಟಗಾರನ ಎಂಟ್ರಿ, ಧೋನಿ ಕಮ್‌ಬ್ಯಾಕ್ ಡೇಟ್ ಫಿಕ್ಸ್!
Recommended image3
ಆರ್‌ಸಿಬಿ ಸೋಲಿಗೆ ವೈಭವ್ ಸೂರ್ಯವಂಶಿ ಕಾರಣಾನಾ? ಅಲ್ಲವೇ ಅಲ್ಲ, ಇವರೇ ನೋಡಿ ರಾಜಸ್ಥಾನವನ್ನು ಗೆಲ್ಲಿಸಿದ್ದು!
Related Stories
Recommended image1
ಶಹಬ್ಬಾಶ್ ವೈಭವ್! ಯುವ ಆಟಗಾರನ ಆರ್ಭಟಕ್ಕೆ ಮನಸೋತು ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ
Recommended image2
ಐಪಿಎಲ್ 2026: ವಿಡಿಯೋ ಗೇಮ್‌ ಕ್ರಿಕೆಟ್‌ ಆಡಿದ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved