ಈ ಬಾರಿ ಚನ್ನೈ ಸೂಪರ್ ಕಿಂಗ್ಸ್ ಪಾಲಿಗೆ ವಿಲನ್ ಆದ ಟಾಪ್ 5 ಆಟಗಾರರಿವರು!
2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಹೊರಬಿದ್ದಿದೆ. ಅಷ್ಟಕ್ಕೂ 5 ಬಾರಿಯ ಚಾಂಪಿಯನ್ ಸಿಎಸ್‌ಕೆ ಪಾಲಿಗೆ ವಿಲನ್ ಆದ ಟಾಪ್ 5 ಆಟಗಾರರು ಯಾರು ನೋಡೋಣ ಬನ್ನಿ.

CSK ಪ್ಲೇಆಫ್‍ನಿಂದ ಹೊರಗೆ
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್‍ನಿಂದ ಹೊರಬಿದ್ದ ಮೊದಲ ತಂಡ. ಪಂಜಾಬ್ ವಿರುದ್ಧ ಸೋಲಿನೊಂದಿಗೆ CSKಯ ಪ್ಲೇಆಫ್ ಕನಸು ಭಗ್ನ.
5 ಆಟಗಾರರ ವೈಫಲ್ಯ
ಐಪಿಎಲ್ 2025ರಲ್ಲಿ CSK ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಕಂಡಿದೆ. ತಂಡದ 5 ಆಟಗಾರರ ಕಳಪೆ ಪ್ರದರ್ಶನ ಚಾಂಪಿಯನ್ ಪಟ್ಟದ ಕನಸನ್ನು ಭಗ್ನಗೊಳಿಸಿದೆ.
1. ದೀಪಕ್ ಹೂಡ
CSKಯ ಬ್ಯಾಟಿಂಗ್ ವಿಭಾಗದಲ್ಲಿ ದೀಪಕ್ ಹೂಡ ದೊಡ್ಡ ವೈಫಲ್ಯ. ದುಬಾರಿ ಮೊತ್ತಕ್ಕೆ ಖರೀದಿಸಿದ ಹೂಡ ಕೇವಲ 31 ರನ್ ಗಳಿಸಿದ್ದಾರೆ.
2. ರಚಿನ್ ರವೀಂದ್ರ
ರಚಿನ್ ರವೀಂದ್ರ ಅವರ ನಿರೀಕ್ಷೆ ಹುಸಿಯಾಗಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ರವೀಂದ್ರ ನಂತರದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರು.
3. ಮಥೀಶ ಪತಿರಾನ
ದುಬಾರಿ ಮೊತ್ತಕ್ಕೆ ಖರೀದಿಸಿದ್ದ ಮಥೀಶ ಪತಿರಾನ ವೈಡ್‌ಗಳ ಸುರಿಮಳೆಗೈದರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ 45 ರನ್ ನೀಡಿದರು.
4. ಶಿವಂ ದುಬೆ
ದುಬಾರಿ ಮೊತ್ತಕ್ಕೆ ಖರೀದಿಸಿದ್ದ ಶಿವಂ ದುಬೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೇವಲ ಒಂದು ಅರ್ಧಶತಕ ಬಾರಿಸಿದ ದುಬೆ ನಿರಾಸೆ ಮೂಡಿಸಿದರು.
5. ರವೀಂದ್ರ ಜಡೇಜ
CSK ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ವೈಫಲ್ಯ ಕಂಡರು. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದರು.