- Home
- Sports
- Cricket
- ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ಬಗ್ಗೆ ನಿಮಗೆ ಗೊತ್ತಿರದ ಟಾಪ್ 10 ಸೀಕ್ರೇಟ್ಸ್‌ಗಳಿವು
ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ಬಗ್ಗೆ ನಿಮಗೆ ಗೊತ್ತಿರದ ಟಾಪ್ 10 ಸೀಕ್ರೇಟ್ಸ್‌ಗಳಿವು
ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ [ಜನವರಿ 6, 2020] 61ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹರಿಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.1983ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಭಾರತ ಚಾರಿತ್ರಿಕ ಸಾಧನೆ ಮಾಡಿತ್ತು. ಈ ಸಂದರ್ಭದಲ್ಲಿ ಕಪಿಲ್ ದೇವ್ ಬಗೆಗಿನ ಟಾಪ್ 10 ಕುತೂಹಲಕಾರಿ ಅಂಶಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ...
110

1. ಟೆಸ್ಟ್ ಕ್ರಿಕೆಟ್‌ನಲ್ಲಿ 5,000+ ರನ್ ಹಾಗೂ 400+ ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಕಪಿಲ್ ದೇವ್

210
2. ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಫಿಟ್ನೆಸ್ ಇಲ್ಲವೇ ಗಾಯದ ವಿಚಾರದಲ್ಲಿ ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಿಕೊಂಡಿಲ್ಲ. ಕಪಿಲ್ ದೇವ್ 131 ಟೆಸ್ಟ್ ಹಾಗೂ 225 ಏಕದಿನ ಪಂದ್ಯಗಳನ್ನಾಡಿದ್ದಾರೆ.

310
3. ಕಪಿಲ್ ಕ್ರಿಕೆಟ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಕೈಯಾಡಿಸಿದ್ದಾರೆ. ಮುಜುಸೇ ಶಾದೀ ಕರೋಗಿ, ಚೈನ್ ಕುಲ್ ಕಿ ಮೈನ್ ಕುಲ್ ಹಾಗೂ ಆರ್ಯನ್: ಅನ್ ಬ್ರೇಕಬಲ್ ಎನ್ನುವ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

410
4. ಆಡಿರುವ ಒಟ್ಟು 184 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಕಪಿಲ್ ದೇವ್ ಒಮ್ಮೆಯೂ ರನೌಟ್ ಆಗಿಲ್ಲ ಅನ್ನೋದು ನಿಜಕ್ಕೂ ಅಚ್ಚರಿ.

510
5. ಕಪಿಲ್ ದೇವ್ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಿ 303 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 12 ವಿಕೆಟ್ ಹಾಗೂ ಫೀಲ್ಡಿಂಗ್‌ನಲ್ಲಿ 8 ಕ್ಯಾಚ್ ಪಡೆದಿದ್ದರು.

610
6. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಮೊದಲ ಶತಕ ಸಿಡಿಸಿದ್ದು ಕಪಿಲ್ ದೇವ್. 1983ರ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಪಿಲ್ ದೇವ್ ಅಜೇಯ 175 ರನ್ ಬಾರಿಸಿದ್ದರು.

710
7. 1990ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಫಾಲೋ ಆನ್‌ನಿಂದ ಪಾರು ಮಾಡಲು ಸ್ಪಿನ್ನರ್ ಎಡ್ಡಿ ಹೆಮ್ಮಿಂಗ್ಸ್ ಬೌಲಿಂಗ್‌ನಲ್ಲಿ ಸತತ 4 ಸಿಕ್ಸರ್ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.

810
8. ಕಪಿಲ್ ದೇವ್ 1980ರಲ್ಲಿ ರೋಮಿ ಭಾಟಿಯಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಆಮಿಯಾ ದೇವ್ ಎನ್ನುವ ಮಗಳಿದ್ದಾಳೆ.

910
9. ಕಪಿಲ್ ದೇವ್ ರೋಮಿ ಭಾಟಿಯಾ ವಿವಾಹಕ್ಕೂ ಮುನ್ನ ಬಾಲಿವುಡ್ ನಟಿ ಸಾರಿಕಾ ಠಾಕೂರ್ ಜತೆ ಡೇಟಿಂಗ್ ನಡೆಸಿದ್ದರು. ಸಾರಿಕಾ ಕಮಲ್ ಹಾಸನ್ ಎರಡನೇ ಪತ್ನಿ ಹಾಗೂ ನಟಿ ಶೃತಿ ಹಾಸನ್ ತಾಯಿಯಾಗಿದ್ದಾರೆ.

1010
10. ಕಪಿಲ್ ದೇವ್ 1999ರ ಅಕ್ಟೋಬರ್‌ನಿಂದ, ಆಗಸ್ಟ್ 2000ದವರೆಗೆ ಟೀಂ ಇಂಡಿಯಾ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಟೀಂ ಇಂಡಿಯಾ ಕ್ರಿಕೆಟಿಗ ಮನೋಜ್ ಪ್ರಭಾಕರ್ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. ಆದರೆ ಆ ಆರೋಪದಲ್ಲಿ ಹುರಳಿಲ್ಲ ಎನ್ನುವುದು ಸಾಬೀತಾಯಿತು. ಈ ವಿವಾದದ ಬಳಿಕ ಕೊಚ್ ಹುದ್ದೆಯನ್ನು ಕಪಿಲ್ ದೇವ್ ತ್ಯಜಿಸಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos