world Cup 2023: ಈ ಕ್ರಿಕೆಟಿಗರ ಹೆಂಡತಿಯರೂ ಫೇಮಸ್ ಕ್ರೀಡಾಪಟುಗಳು
ಪ್ರಸ್ತುತ್ತ ಕ್ರಿಕೆಟ್ ವಿಶ್ವ ಕಪ್ 2023 (World Cup 2023) ಶುರುವಾಗಿದ್ದು ಎಲ್ಲೆಡೆ ಕ್ರಿಕೆಟ್ ಸದ್ದು ಮಾಡುತ್ತಿದೆ. ಕ್ರಿಕೆಟ್ ಆಟಗಾರರು ಜನಪ್ರಿಯತೆಯ ವವಿಷಯದಲ್ಲಿ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಫ್ಯಾನ್ಸ್ ಕೇವಲ ಕ್ರಿಕೆಟಿಗರ ಆಟ ಮಾತ್ರವಲ್ಲ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಕೂತುಹಲ ಹಾಗೂ ಆಸಕ್ತಿ ಹೊಂದಿದ್ದಾರೆ. ಕೆಲವು ಕ್ರಿಕೆಟಿಗರ ಪತ್ನಿಯರೂ ಕ್ರೀಡಾಪಟುಗಳಾಗಿದ್ದಾರೆ. ಅವರ ವಿವರ ಇಲ್ಲಿದೆ.

ಮಿಚೆಲ್ ಸ್ಟಾರ್ಕ್:
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಪತ್ನಿ ಅಲಿಸಾ ಹೀಲಿ ಕೂಡ ಕ್ರಿಕೆಟ್ ಆಟಗಾರ್ತಿ ಮತ್ತು ಅವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ.
ಡೇವಿಡ್ ವಾರ್ನರ್:
ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ವೃತ್ತಿಪರ ಐರನ್ ವುಮನ್ ಮತ್ತು ಅವರು ಸರ್ಫ್ ಲೈಫ್ ಸೇವರ್ ಕೂಡ ಆಗಿದ್ದರು.
.
ಇಶಾಂತ್ ಶರ್ಮಾ:
ಭಾರತೀಯ ತಂಡದ ಮಾಜಿ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಪತ್ನಿ ಪ್ರತಿಮಾ ಸಿಂಗ್ ಸಹ ಕ್ರೀಡಾಪಟು. ಆಕೆ ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ.
ಕೇದಾರ್ ಜಾಧವ್:
ಭಾರತೀಯ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಪತ್ನಿ ಸ್ನೇಹಲ್ ಪ್ರಮೋದ್ ಜಾಧವ್ ಕೂಡ ಕ್ರಿಕೆಟಿಗರಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಪರ ಆಡುವ ಅವರು ಬಲಗೈ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ.
ಶಿಖರ್ ಧವನ್:
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಶಾ ಮುಖರ್ಜಿ ಬಾಕ್ಸರ್ .ಆದರೆ ಆಯೇಶಾ ಮತ್ತು ಶಿಖರ್ ಧವನ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು.
ರಾಬಿನ್ ಉತ್ತಪ್ಪ:
ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಗೌತಮ್ ಟೆನಿಸ್ ಆಟಗಾರ್ತಿ. ಅವರು 9 ವರ್ಷದವಳಿದ್ದಾಗಿನಿಂದ ಟೆನಿಸ್ ಆಡಲು ಪ್ರಾರಂಭಿಸಿದರು.
ದಿನೇಶ್ ಕಾರ್ತಿಕ್:
ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಳ್ಳಿಕಲ್ ಪ್ರಸಿದ್ಧ ಸ್ಕ್ವಾಷ್ ಆಟಗಾರ್ತಿ ಮತ್ತು ಅವರು ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ.
ಶೋಯೆಬ್ ಮಲಿಕ್:
ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಪತ್ನಿ ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ. ಅವರು ಒಲಿಂಪಿಕ್ಸ್‌ನಿಂದ ಏಷ್ಯನ್ ಗೇಮ್ಸ್ ವರೆಗೆ ಮತ್ತು ವಿಂಬಲ್ಡನ್ ಟೆನಿಸ್ ಪಂದ್ಯಾವಳಿಗಳಲ್ಲಿ ಆಡಿದ್ದಾರೆ ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.