ಮೊದಲ ಪಂದ್ಯದ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮೇಜರ್‌ ಸರ್ಜರಿ; 2 ಬದಲಾವಣೆ?

First Published Mar 14, 2021, 12:04 PM IST

ಅಹಮದಾಬಾದ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ 8 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿರುವ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಲು ವಿರಾಟ್‌ ಪಡೆ ಎದುರು ನೋಡುತ್ತಿದೆ.
ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ಮಾಡುವ ಸಾಧ್ಯತೆಯಿದ್ದು, ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಎರಡನೇ ಟಿ20 ಪಂದ್ಯಕ್ಕೆ ಸಂಭಾವ್ಯ ಟೀಂ ಇಂಡಿಯಾ ಇಲ್ಲಿದೆ ನೋಡಿ.