ಅಕ್ಷರ್ ಪಟೇಲ್ ಯಶಸ್ಸಿನ ಹಿಂದಿದ್ದಾರೆ ಪತ್ನಿ ಮೆಹಾ ಪಟೇಲ್..! ಈಕೆಯ ವೃತ್ತಿ...?
ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಮಿಂಚುತ್ತಿದ್ದಾರೆ. ಅಕ್ಷರ್ ಪಟೇಲ್ ಯಶಸ್ಸಿನ ಹಿಂದಿದ್ದಾರೆ ಅವರ ಪತ್ನಿ ಮೆಹಾ ಪಟೇಲ್. ಬನ್ನಿ ನಾವಿಂದು ಯಾರು ಈ ಮೆಹಾ ಪಟೇಲ್, ಈಕೆಯ ಉದ್ಯೋಗವೇನು ಎನ್ನುವುದನ್ನು ತಿಳಿಯೋಣ.

ಟೀಂ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸಿ ತಂಡ ಫೈನಲ್‌ಗೇರಲು ಪ್ರಮುಖ ಪಾತ್ರವಹಿಸಿದರು. ಈ ಪ್ರದರ್ಶನಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತು.
ಇನ್ನು ಟೂರ್ನಿಯುದ್ದಕ್ಕೂ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾಗಿದ್ದಾರೆ. ಈ ಎಡಗೈ ಆಲ್ರೌಂಡರ್ ಯಶಸ್ಸಿನ ಹಿಂದೆ ಪತ್ನಿ ಮೆಹಾ ಪಟೇಲ್ ಇರುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
ಹೌದು, ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಂದು ಮಹಿಳೆ ಇರುತ್ತಾಳೆ ಎನ್ನುವಂತೆ, ಅಕ್ಷರ್ ಪಟೇಲ್ ಯಶಸ್ಸಿನ ಹಿಂದೆ ಮೆಹಾ ಪಟೇಲ್ ಇದ್ದಾರೆ. ಮೆಹಾ ಪಟೇಲ್ ಓರ್ವ ಡಯೆಟೀಷಿಯನ್ ಹಾಗೂ ನ್ಯೂಟ್ರಿಷಿಯನಿಸ್ಟ್ ಆಗಿದ್ದು, ಅಕ್ಷರ್ ವೃತ್ತಿ ಬದುಕಿನ ಯಶಸ್ಸಿನ ಹಿಂದೆ ಮೆಹಾ ಪಟೇಲ್ ಇದ್ದಾರೆ.
ವೃತ್ತಿಪರ ನ್ಯೂಟ್ರಿಷಿಯನಿಸ್ಟ್ ಆಗಿರುವ ಮೆಹಾ ಪಟೇಲ್, ಪತಿಯ ಫಿಸಿಕಲ್ ಕಂಡೀಷನ್ ಉತ್ತಮಪಡಿಸುವಲ್ಲಿ ಸೂಕ್ತ ಸಲಹೆ ನೀಡುತ್ತಾ ಬಂದಿದ್ದಾರೆ. ಹೀಗಾಗಿಯೇ ಅಕ್ಷರ್ ಪಟೇಲ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಮೆಹಾ ಪಟೇಲ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾ ಮೂಲಕವೂ ಪೌಷ್ಟಿಕಾಂಶಗಳನ್ನು ಸೇವಿಸುವುದರಿಂದ ಹೇಗೆ ಉತ್ತಮ ಆರೋಗ್ಯ ಗಳಿಸಿಕೊಳ್ಳಬಹುದು ಎನ್ನುವುದರ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ಅಕ್ಷರ್ ಪಟೇಲ್ ತಮ್ಮ ಬಹುಕಾಲದ ಗೆಳತಿ ಮೆಹಾ ಪಟೇಲ್ ಅವರನ್ನು 2023ರ ಜನವರಿಯಲ್ಲಿ ಮದುವೆಯಾದರು. ಸಾಕಷ್ಟು ಒತ್ತಡದಿಂದ ಕೂಡಿರುವ ಕ್ರಿಕೆಟ್ ಟೂರ್ನಿಯಲ್ಲಿ ಅಕ್ಷರ್ ಪಟೇಲ್‌ಗೆ ಮಾನಸಿಕವಾಗಿ ಸದಾ ಬೆನ್ನಿಗೆ ನಿಂತು ಸಪೋರ್ಟ್ ಮಾಡುತ್ತಿದ್ದಾರೆ ಮೆಹಾ ಪಟೇಲ್.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಮೆಹಾ ಪಟೇಲ್ ತಮ್ಮ ಪತಿಯ ಜತೆಗೂಡಿ ಅವಕಾಶ ಸಿಕ್ಕಾಗಲೆಲ್ಲಾ ಪೌಷ್ಠಿಕಾಂಶಗಳ ಸೇವನೆಯ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಗುಜರಾತಿ ಮೂಲದ ಮೆಹಾ ಪಟೇಲ್ ಹಾಗೂ ಅಕ್ಷರ್ ಪಟೇಲ್ ಒಬ್ಬರಿಗೊಬ್ಬರು ಖಾಸಗಿ ಹಾಗೂ ವೃತ್ತಿಪರ ಬದುಕನ್ನು ಗೌರವಿಸಿಕೊಂಡು ಸುಂದರ ಸಂಸಾರ ನಡೆಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.