34 ಶಾಲೆಯ 10 ಸಾವಿರ ಮಕ್ಕಳಿಗೆ ಶಿಕ್ಷಣ, ಕುಡಿಯುವ ನೀರು ಸೌಲಭ್ಯ ವಾಗ್ದಾನ ನೀಡಿದ ಸುರೇಶ್ ರೈನಾ!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ, ನೆರವಿನ ವಿಚಾರದಲ್ಲಿ ದೂರವಾಗಿಲ್ಲ. ಗ್ರೇಸಿಯಾ ರೈನಾ ಫೌಂಡೇಶನ್ ಮೂಲಕ ಸುರೇಶ್ ರೈನಾ ಈಗಾಗಲೇ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. 34ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿರುವ ರೈನಾ, ಮಕ್ಕಳ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿ, ಶೌಚಾಲಯ ಸೇರಿದಂತೆ ಹತ್ತು ಹಲವು ಮಹತ್ವಾಕಾಂಕ್ಷೆಯ ಸೇವೆ ಘೋಷಿಸಿದ್ದಾರೆ. ರೈನಾ ಹೊಸ ಪ್ರಯತ್ನದ ವಿವರ ಇಲ್ಲವೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ವಿದಾಯ ಹೇಳಿದ್ದರು ಬಳಿಕ ಐಪಿಎಲ್ ಟೂರ್ನಿಯಿಂದ ಹೊರಬಂದು ಭಾರಿ ಸಂಚಲನ ಸೃಷ್ಟಿಸಿದ್ದರು.

ನವೆಂಬರ್ 27ಕ್ಕೆ ಸುರೇಶ್ ರೈನಾ 34ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಸುರೇಶ್ ರೈನಾ ತಮ್ಮ ಸಾಮಾಜಿಕ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ಘೋಷಿಸಿದ್ದಾರೆ.

ನನಗೆ ಎಲ್ಲಾ ನೀಡಿದ ಸಮಾಜಕ್ಕೆ ಮರಳಿ ನೀಡುವುದು ನನ್ನ ತತ್ವವಾಗಿದೆ. ನನ್ನ 34ನೇ ಹುಟ್ಟು ಹಬ್ಬಕ್ಕೆ ನಾನು ಹೊಸ ಯೋಜನೆ ಘೋಷಿಸಲು ಉತ್ಸುಕನಾಗಿದ್ದೇನೆ ಎಂದು ರೈನಾ ಹೇಳಿದ್ದಾರೆ.

ಪುತ್ರಿ ಗ್ರೇಸಿಯಾ ಹೆಸರಲ್ಲಿ ಆರಂಭಿಸಿರುವ ಗ್ರೇಸಿಯಾ ರೈನಾ ಫೌಂಡೇಶನ್ ಹಾಗೂ ಅನ್‌ಸ್ಟಾಪೇಬಲ್ ಯುವಾ ಫೌಂಡೇಶನ್ ಸಹಭಾಗಿತ್ವದಲ್ಲಿ 10,000 ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಲು ರೈನಾ ಸಜ್ಜಾಗಿದ್ದಾರೆ.

34ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರೈನಾ ದೇಶದ 34 ಸರ್ಕಾರಿ ಶಾಲೆಗಳ 10,000 ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ, ಹದಿ ಹರೆಯದ ಆರೋಗ್ಯ ಕಾರ್ಯಕ್ರಮ ಸೇರಿದಂತೆ ಹಲವು ಸೌಲಭ್ಯಗಳನ್ನು ಗ್ರೇಸಿಯಾ ರೈನಾ ಫೌಂಡೇಶನ್ ಒದಗಿಸಲಿದೆ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿ ವಲಯದ ಶಾಲೆಗಳ ಮಕ್ಕಳಿಗೆ ರೈನಾ ಈ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.

ನೈರ್ಮಲ್ಯ, ಕುಡಿಯುವ ನೀರು ಸೌಲಭ್ಯದ ಜೊತೆಗೆ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಹದಿ ಹರೆಯದ ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು 34 ಶಾಲೆಗಳಲ್ಲಿ ನಡೆಸಲು ರೈನಾ ನಿರ್ಧರಿಸಿದ್ದಾರೆ.

ಗ್ರೇಸಿಯಾ ರೈನಾ ಫೌಂಡೇಶನ್ ಮೂಲಕ ಸುರೇಶ್ ರೈನಾ ಈಗಾಗಲೇ ಹಲವು ಮಕ್ಕಳಿಗೆ ನೆರವಾಗಿದ್ದಾರೆ. ಇದೀಗ ಮಹತ್ವದ ಯೋಜನೆ ಘೋಷಿಸುವ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ.

ಟೀಂ ಇಂಡಿಯಾಗೆ ವಿದಾಯ ಹೇಳಿದ ಬಳಿಕ 2020 IPL ಟೂರ್ನಿಯಿಂದ ಹೊರಬಂದ ಸುರೇಶ್ ರೈನಾ, ಇದೀಗ ಸಂಪೂರ್ಣವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ರೈನಾ ನಿರ್ಧರಿಸಿದ್ದಾರೆ.