ಆಟೋಗ್ರಾಫ್ ಕೇಳಲು ಹೋದ ಹುಡುಗಿಗೆ ಹೃದಯವನ್ನೇ ಕೊಟ್ಟ ಕ್ರಿಕೆಟರ್!
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಟೆಸ್ಟ್ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ತಮ್ಮ 72ನೇ ಹುಟ್ಟುಹಬ್ಬವನ್ನು ಜುಲೈ 10ರಂದು ಆಚರಿಸಿಕೊಂಡಿದ್ದಾರೆ. ಮಾಜಿ ಬಲಗೈ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಗಡಿ ದಾಟಿದ ಇತಿಹಾಸದಲ್ಲಿ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಷ್ಟೇ ಅಲ್ಲ, 1983ರ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದಲ್ಲಿದ್ದರು. ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ತಮ್ಮ ಬ್ಯಾಟಿಂಗ್ ಮೂಲಕ ಗೆದ್ದಿದ್ದ ಗವಾಸ್ಕರ್ ಫ್ಯಾನ್ ಒಬ್ಬರಿಗೆ ಮನ ಸೋತಿದ್ದು ಮಾತ್ರ ವಿಶೇಷ. ಅದೇ ಅಭಿಮಾನಿಯೊಂದಿಗೆ ಕಳೆದ 47 ವರ್ಷಗಳಿಂದ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಇಲ್ಲಿದೆ ಗವಾಸ್ಕರ್ ಮತ್ತು ಮಾರ್ಷ್ನೀಲ್ ಗವಾಸ್ಕರ್ ಲವ್ ಸ್ಟೋರಿ.
10 ಜುಲೈ 1949 ರಂದು ಮುಂಬೈನಲ್ಲಿ ಜನಿಸಿದ ಈ ಲೆಜೆಂಡೆರಿ ಕ್ರಿಕೆಟರ್ ಪೂರ್ಣ ಹೆಸರು ಸುನಿಲ್ ಮನೋಹರ್ ಗವಾಸ್ಕರ್.
1971ರಲ್ಲಿ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಗವಾಸ್ಕರ್ ತಮ್ಮ ಮೊದಲ ಟೆಸ್ಟ್ ಸರಣಿಯಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ 774 ರನ್ ಗಳಿಸಿದರು.
ಇದರ ನಂತರ ಭಾರತದ ಅತ್ಯಂತ ಪವರ್‌ಫುಲ್ ಬ್ಯಾಟ್ಸ್‌ಮನ್ಸ್ ಎಂದು ಪರಿಗಣಿಸಲಾಯಿತು ಹಾಗೂ ರಾತ್ರೋರಾತ್ರಿ
ಅವರ ಫ್ಯಾನ್ ಫಾಲೋವರ್ಸ್ ಸಹ ಹೆಚ್ಚಾಯಿತು.
1973ರಲ್ಲಿ ಗವಾಸ್ಕರ್ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ, ದೆಹಲಿ ಮೂಲದ ಅಭಿಮಾನಿ ಮಾರ್ಷ್ನೀಲ್ ಆಟೋಗ್ರಾಫ್ ಕೇಳಲು ಬಂದರು. ಗವಾಸ್ಕರ್ ಕೇವಲ ಆಟೋಗ್ರಾಫ್ ಕೊಡೋ ಬದಲು ತಮ್ಮ ಹೃದಯವನ್ನೇ ಕೊಟ್ಟು ಬಿಟ್ಟರು!
ಮಾರ್ಷ್ನೀಲ್ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಬಿಎ ಓದುತ್ತಿದ್ದರು. ಅವರಿಗೆ ಮನ ಸೋತ ಸುನಿಲ್ ಗವಾಸ್ಕರ್ ಮಾರ್ಷ್ನಿಲ್ ಬಗ್ಗೆ ತಿಳಿಯಲು ಕಾನ್ಪುರವನ್ನು ತಲುಪಿದ್ದರು ಮತ್ತು ಅವರಿಗಾಗಿ ಬೀದಿಗಳಲ್ಲಿ ಕೂಡ ಅಲೆದಾಡಿದ್ದಾರೆ.
ಮಾರ್ಷ್ನೀಲ್ ಮತ್ತು ಅವರ ಇಡೀ ಕುಟುಂಬವನ್ನು ತನ್ನ ಒಂದು ಪಂದ್ಯಕ್ಕೆ ಆಹ್ವಾನಿಸಿದ ಗವಾಸ್ಕರ್ ಮಾರ್ಷ್ನೀಲ್‌ಗೆ ಎಲ್ಲರ ಮುಂದೆ ಮದುವೆಗೆ ಪ್ರಪೋಸ್ ಮಾಡಿದ್ದರು.
ಇದರ ನಂತರ ಇಬ್ಬರೂ ಸೆಪ್ಟೆಂಬರ್ 23, 1974 ರಂದು ವಿವಾಹವಾದರು.
ಫೆಬ್ರವರಿ 20, 1976 ರಂದು, ಈ ದಂಪತಿ ಮಗನನ್ನು ಸ್ವಾಗತಿಸಿದರು.
ವೆಸ್ಟ್ ಇಂಡೀಸ್‌ನ ಫೇಮಸ್ ಕ್ರಿಕೆಟಿಗ ರೋಹನ್ ಕನ್ಹೈ ಅವರ ಹೆಸರನ್ನು ಗಗವಾಸ್ಕರ್ ತಮ್ಮ ಮಗನಿಗೆ ಇಟ್ಟಿದ್ದಾರೆ.
ಒಟ್ಟು 125 ಟೆಸ್ಟ್ ಪಂದ್ಯಗಳನ್ನು ಆಡಿರುವ ಗವಾಸ್ಕರ್ 34 ಶತಕಗಳೊಂದಿಗೆ 10,122 ರನ್ ಗಳಿಸಿದ್ದಾರೆ.
108 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 3,093 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗವಾಸ್ಕರ್ 25,834 ರನ್ ಗಳಿಸಿದ್ದಾರೆ.
ತಮ್ಮ ಅತ್ಯುತ್ತಮ ಆಟಕ್ಕಾಗಿ ಸುನೀಲ್ ಗವಾಸ್ಕರ್ 1975ರಲ್ಲಿ ಅರ್ಜುನ ಪ್ರಶಸ್ತಿ, 1980ರಲ್ಲಿ ಪದ್ಮಭೂಷಣ್ ಮತ್ತು ವಿಸ್ಡೆನ್ ಪ್ರಶಸ್ತಿಯನ್ನೂ ಪಡೆದರು.
ಸುನಿಲ್ ಗವಾಸ್ಕರ್ ಅವರ ವೃತ್ತಿ ಜೀವನದಿಂದ ಹಿಡಿದು ಅವರ ಪ್ರೇಮ ಕಥೆಯವರೆಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದೆ. ಇದರಲ್ಲಿ ಅತ್ಯಂತ ಪ್ರಸಿದ್ಧ ಪುಸ್ತಕಗಳು ಸುನಿಡೇಜ್, ಐಡಲ್ಸ್, ರನ್ ಆ್ಯಂಡ್ ರೂಯಿನ್ಸ್, ಒನ್ ಡೇ ವಂಡರ್.