ಕೇವಲ 6 ರನ್‌ನಿಂದ ಶತಕ ಮಿಸ್ ಮಾಡಿಕೊಂಡರೂ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
ತ್ರಿಕೋಸರಣಿ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 94 ರನ್ ಸಿಡಿಸಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಆದರೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ವೈಭವ್ ಸ್ಫೋಟಕ ಇನ್ನಿಂಗ್ಸ್‌ನಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ವೈಭವ್ ಸ್ಫೋಟಕ ಬ್ಯಾಟಿಂಗ್
ಭಾರತ ಎ ತಂಡದ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ ಸ್ಫೋಟಕ 94 ರನ್ ಸಿಡಿಸಿ ಮಿಂಚಿದ್ದಾರೆ. ಕೇವಲ 6 ರನ್‌ಗಳಿಂದ ವೈಭವ್ ಸೂರ್ಯವಂಶಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಶ್ರೀಲಂಕಾ ಎ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ದಿಗ್ಗಜರ ದಾಖಲೆ ಪುಡಿ ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಫಾಸ್ಟೆಸ್ಟ್ ಫಿಫ್ಟ್ ವಿಶ್ವ ದಾಖಲೆ
ಎ ಲಿಸ್ಟ್ ಪಂದ್ಯದಳಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಇದೀಗ ವೈಭವ್ ಸೂರ್ಯವಂಶಿ ಬರೆದಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 11 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಎ ಪಂದ್ಯಗಳಲ್ಲಿ ಅತೀ ವೇಗದ ಶತಕದ ಸಿಡಿಸಿದ ದಾಖಲೆ ಶ್ರೀಲಂಕಾದ ಕೌಶಲ್ಯ ವೀರರತ್ನೆ ಹೆಸರಿನಲ್ಲಿತ್ತು. ಕೌಶಲ್ಯ 12 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.
ಲಿಸ್ಟ್ 1 ಪಂದ್ಯಗಳಲ್ಲಿ ಅತೀ ವೇಗದ ಅರ್ಧಶತಕ
- ವೈಭವ್ ಸೂರ್ಯವಂಶಿ, 11 ಎಸೆತ
- ಕೈಶಲ್ಯ ವೀರರತ್ನೆ, 12 ಎಸೆತ
- ತಿಸರಾ ಪರೇರಾ, 13 ಎಸೆತ
- ರೋರಿ ಕ್ಲೈನ್ವೆಲ್ಡ್, 14 ಎಸೆತ
- ಆಡ್ಯಮ್ ಹೊಲ್ಲಿಯೊಕೆ, 15 ಎಸೆತ
ಫಾಸ್ಟೆಸ್ಟ್ ಶತಕ ಮಿಸ್ ಮಾಡಿದ ವೈಭವ್
ವೈಭವ್ ಸೂರ್ಯವಂಶಿ 28 ಎಸೆತದಲ್ಲಿ 94 ರನ್ ಸಿಡಿಸಿ ಔಟಾದರು. ಔಟ್ ವೇಳೆ ಅಂತಿಮ ಕೆಲ ಎಸೆತ ಡಾಟ್ ಬಾಲ್ ಆಗಿತ್ತು. ಲಿಸ್ಟ್ ಎ ಪಂದ್ಯದಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್‌ಗ್ರುಕ್ ಹೆಸರಲ್ಲಿದೆ. ಜೇಕ್ 29 ಎಸೆತದಲ್ಲಿ ಸೆಂಚುರಿ ಸಿಡಿಸಿದ್ದಾರೆ. ಈ ದಾಖಲೆ ಪುಡಿ ಮಾಡುವ ಎಲ್ಲಾ ಅವಕಾಶ ವೈಭವ್‌ಗಿತ್ತು. ಆದರೆ ಔಟ್ ಆಗೋ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ
ತ್ರಿಕೋನ ಸರಣಿ ಫೈನಲ್ ಪಂದ್ಯದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ಹೋರಾಟ ಕುತೂಹಲಕ್ಕೆ ಕಾರಣವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ವೈಭವ್ ಸೂರ್ಯವಂಶಿ 28 ಎಸೆತದಲ್ಲಿ 10 ಬೌಂಡರಿ, 8 ಸಿಕ್ಸರ್ ಮೂಲಕ 94 ರನ್ ಸಿಡಿಸಿದ್ದಾರೆ. ಇದರೊಂದಿಗೆ ಭಾರತ ಎ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಟೀಂ ಇಂಡಿಯಾ ಪರ ವೈಭವ್
ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಭಾರತ ಸೀನಿಯರ್ ತಂಡ ಸೇರಿಕೊಳ್ಳಲಿದ್ದಾರೆ. ಜೂನ್ 26 ರಿಂದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಕೇವಲ 15ರ ಪೋರ ವೈಭವ್ ಇದೀಗ ಟೀಂ ಇಂಡಿಯಾ ಪರ ಅಬ್ಬರ ಆರಂಭಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

