MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ದಾದಾ ಹುಟ್ಟುಹಬ್ಬದ ಸಂಭ್ರಮ: ಸೌರವ್ ಗಂಗೂಲಿ ಹೆಸರಿನಲ್ಲಿರುವ ಅಪರೂಪದ ರೆಕಾರ್ಡ್‌ಗಳಿವು!

ದಾದಾ ಹುಟ್ಟುಹಬ್ಬದ ಸಂಭ್ರಮ: ಸೌರವ್ ಗಂಗೂಲಿ ಹೆಸರಿನಲ್ಲಿರುವ ಅಪರೂಪದ ರೆಕಾರ್ಡ್‌ಗಳಿವು!

ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ ಕ್ರಿಕೆಟಿಗ ಅಂದ್ರೆ ಅದು ಸೌರವ್ ಗಂಗೂಲಿ. ದಾದಾ ಬ್ಯಾಟಿಂಗ್‌ನಲ್ಲಿ ಧೈರ್ಯ, ನಾಯಕತ್ವದಲ್ಲಿ ಛಲ, ಹೊಸ ಚೈತನ್ಯ ತುಂಬಿದ ಕ್ಯಾಪ್ಟನ್‌. ಕ್ರಿಕೆಟ್‌ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಗಂಗೂಲಿ ಹುಟ್ಟುಹಬ್ಬ ಇಂದು. 

1 Min read
Author : Naveen Kodase
Published : Jul 08 2025, 12:34 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Getty

ನಾಲ್ಕು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಸೌರವ್ ಗಂಗೂಲಿ ಹೆಸರಿನಲ್ಲಿದೆ. ಒಡಿಐ ಕ್ರಿಕೆಟ್‌ನಲ್ಲಿ ಇದೊಂದು ಅಪರೂಪದ ಸಾಧನೆ. ದಾದಾ ಹೊರತುಪಡಿಸಿ ಮತ್ತೆ ಯಾವ ಆಟಗಾರನಿಗೂ ಇದು ಸಾಧ್ಯವಾಗಿಲ್ಲ.

28
Image Credit : our own

ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ 11,363 ರನ್‌ಗಳಿಸಿದ ಅಗ್ರಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ರನ್ ಬಾರಿಸಿದ ಎಡಗೈ ಅಗ್ರಕ್ರಮಾಂಕದ ಬ್ಯಾಟರ್‌ಗಳ ಪೈಕಿ ಕುಮಾರ ಸಂಗಕ್ಕರ, ಸನತ್ ಜಯಸೂರ್ಯ ನಂತರ ದಾದಾ ಮೂರನೇ ಸ್ಥಾನದಲ್ಲಿದ್ದಾರೆ.

Related Articles

Related image1
ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು: ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್
Related image2
ರೂಪಾಲಿ ಗಂಗೂಲಿ ಮನೆ ಹೇಗಿದೆ ನೋಡಿ; ಕಣ್‌ ಕಣ್‌, ಬಾಯ್ ಬಾಯ್ ಬಿಟ್ಟಲ್ಲಾ ಅಂದ್ರೆ ಹೇಳಿ..!
38
Image Credit : Getty

ಬ್ಯಾಟಿಂಗ್‌ ಮಾತ್ರವಲ್ಲ, ಬೌಲಿಂಗ್‌ನಲ್ಲೂ ದಾದಾ ಮಿಂಚಿದ್ದಾರೆ. ಒಡಿಐನಲ್ಲಿ 10,000ಕ್ಕೂ ಹೆಚ್ಚು ರನ್‌, 100ಕ್ಕೂ ಹೆಚ್ಚು ವಿಕೆಟ್‌ ಪಡೆದ ಅಪರೂಪದ 6 ಆಟಗಾರರಲ್ಲಿ ಗಂಗೂಲಿ ಕೂಡಾ ಒಬ್ಬರು ಎನಿಸಿಕೊಂಡಿದ್ದಾರೆ.

48
Image Credit : our own

1997 ರಿಂದ 2000 ರವರೆಗೆ ಸತತ ನಾಲ್ಕು ವರ್ಷ 1000ಕ್ಕೂ ಹೆಚ್ಚು ರನ್‌ ಗಳಿಸಿದ ಏಕೈಕ ಕ್ರಿಕೆಟಿಗ ಗಂಗೂಲಿ.

1997ರಲ್ಲಿ – 1338 ರನ್‌

1998ರಲ್ಲಿ – 1328 ರನ್‌

1999ರಲ್ಲಿ – 1767 ರನ್‌

2000ದಲ್ಲಿ – 1579 ರನ್‌

58
Image Credit : Getty

ದೊಡ್ಡ ಪಂದ್ಯಗಳಲ್ಲಿ ಮಿಂಚುವುದು ಗಂಗೂಲಿ ಸ್ಟೈಲ್‌. ಐಸಿಸಿ ಟೂರ್ನಿ ಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಆಟಗಾರ. ಐಸಿಸಿ ನಾಕೌಟ್‌ ಹಂತದಲ್ಲಿ ಮೂರು ಶತಕ ಬಾರಿಸಿದ ಮೂವರು ಆಟಗಾರರಲ್ಲಿ ದಾದಾ ಕೂಡಾ ಒಬ್ಬರು. ಉಳಿದ ಇಬ್ಬರು ಪಾಂಟಿಂಗ್‌ ಮತ್ತು ಸಯೀದ್ ಅನ್ವರ್.

68
Image Credit : Asianet News

ಗಂಗೂಲಿ ಸಿಡಿಸಿದ ಒಟ್ಟು 22 ಅಂತಾರಾಷ್ಟ್ರೀಯ ಏಕದಿನ ಶತಕಗಳಲ್ಲಿ 18 ಶತಕಗಳನ್ನು ವಿದೇಶದಲ್ಲೇ ಬಾರಿಸಿದ್ದಾರೆ. ಗಂಗೂಲಿ ಶತಕ ಬಾರಿಸಿದ ಹೆಚ್ಚಿನ ಪಂದ್ಯಗಳಲ್ಲಿ ಭಾರತ ಗೆದ್ದಿದೆ.  

78
Image Credit : Getty

ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಗಂಗೂಲಿ. ಆಸೀಸ್‌ ಪಿಚ್‌ಗಳಲ್ಲಿ ಶತಕ ಬಾರಿಸುವುದು ಕಷ್ಟ ಎನಿಸಿದ್ದ ಕಾಲದಲ್ಲಿ 90ರ ದಶಕದಲ್ಲೇ ಈ ಸಾಧನೆ ಮಾಡಿದ್ದಾರೆ.

88
Image Credit : Getty

ಎಲ್ಲರನ್ನೂ ಮುನ್ನಡೆಸುವ ಸಾಮರ್ಥ್ಯ, ಆಟದಲ್ಲಿ ಉತ್ಸಾಹ, ಆಟಗಾರರಲ್ಲಿ ಧೈರ್ಯ ತುಂಬಿದ ನಾಯಕತ್ವ. ಭಾರತೀಯ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದ ಸೌರವ್ ಗಂಗೂಲಿ ಹೆಸರು ಕ್ರಿಕೆಟ್ ಇರುವವರೆಗೂ ಚಿರಸ್ಥಾಯಿಯಾಗಿ ಉಳಿಯುತ್ತದೆ. ದಾದಾಗೆ ಹುಟ್ಟುಹಬ್ಬದ ಶುಭಾಶಯಗಳು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಸೌರವ್ ಗಂಗೂಲಿ
ಬಿಸಿಸಿಐ
ಕ್ರೀಡೆಗಳು
ಟೀಮ್ ಇಂಡಿಯಾ
ಹುಟ್ಟುಹಬ್ಬ

Latest Videos
Recommended Stories
Recommended image1
ಅರ್ಜುನ್ ತೆಂಡೂಲ್ಕರ್-ಸಾನಿಯಾ ಮದುವೆಗೆ ರಾಹುಲ್ ಗಾಂಧಿ ಆಹ್ವಾನಿಸಿದ ಸಚಿನ್ ಫ್ಯಾಮಿಲಿ!
Recommended image2
T20 ವಿಶ್ವಕಪ್‌ನಲ್ಲಿ ಇದೇ ಮೊದಲು! ಡಬಲ್ ಸೂಪರ್ ಓವರ್‌ಗೆ ಸಾಕ್ಷಿಯಾದ ದಕ್ಷಿಣ ಆಫ್ರಿಕಾ-ಆಫ್ಘಾನಿಸ್ತಾನ ಮ್ಯಾಚ್! ಗೆದ್ದಿದ್ದು ಯಾರು?
Recommended image3
ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು!
Related Stories
Recommended image1
ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು: ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್
Recommended image2
ರೂಪಾಲಿ ಗಂಗೂಲಿ ಮನೆ ಹೇಗಿದೆ ನೋಡಿ; ಕಣ್‌ ಕಣ್‌, ಬಾಯ್ ಬಾಯ್ ಬಿಟ್ಟಲ್ಲಾ ಅಂದ್ರೆ ಹೇಳಿ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved