ಸಚ್ಚಿನ್, ವಿರಾಟ್, ಧೋನಿ ಇವರಲ್ಲಾರು ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ?
ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಇರುವ ಜನಪ್ರಿಯತೆ ಬೇರೆ ಯಾವ ಕ್ರೀಡೆಗೂ ಇಲ್ಲ. ಇದು ಅತ್ಯಂತ ಶ್ರೀಮಂತ ಕ್ರೀಡೆ. ಇನ್ನೂ ಭಾರತ ತಂಡವನ್ನು ಪ್ರತಿನಿಧಿಸುವ ಕ್ರಿಕೆಟರ್‌ಗಳು ಸಹ ಯಾವುದೇ ಸೆಲೆಬ್ರೆಟಿಗಳಿಂತ ಕಡಿಮೆ ಇಲ್ಲ ಮತ್ತು ಆಟಗಾರರು ಶ್ರೀಮಂತ ಲೈಫ್‌ಸ್ಟೈಲ್ ಅನ್ನು ಹೊಂದಿದ್ದಾರೆ. ಹಾಗಾದರೆ ಭಾರತದ ಅತಿ ಶ್ರೀಮಂತ ಕ್ರಿಕೆಟ್ ಆಟಗಾರ ಯಾರು ಗೊತ್ತಾ?
ಸಚ್ಚಿನ್ ತೆಂಡೂಲ್ಕರ್:
ಕ್ರಿಕೆಟ್ ದೇವರು ಎಂದೇ ಖ್ಯಾತಿ ಹೊಂದಿರುವ ಸಚ್ಚಿನ್ ತೆಂಡೂಲ್ಕರ್ ಅವರು ಭಾರತದ ಶ್ರೀಮಂತ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ನೆಟ್‌ವರ್ತ್ 1300 ಕೋಟಿ.
ವಿರಾಟ್ ಕೊಹ್ಲಿ:
ಭಾರತದ ಮಾಜಿ ನಾಯಕ ಕಿಂಗ್ ಕೊಹ್ಲಿ ಎಂದು ಜನಪ್ರಿಯವಾಗಿರುವ ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿ 980 ಕೋಟಿ ರೂ.
ಮಹೇಂದ್ರ ಸಿಂಗ್ ಧೋನಿ:
ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಅವರು ಈ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದಾರೆ ಮತ್ತು ಅವರ ನೆಟ್‌ವರ್ತ್ 860 ಕೋಟಿ ರೂ.
ಸೌರವ್ ಗಂಗೂಲಿ:
ದಾದಾ ಎಂದೇ ಕರೆಯಲ್ಪಡುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಒಟ್ಟು ಆಸ್ತಿ 365 ಕೋಟಿ ರೂ ಎಂದು ಹೇಳಲಾಗುತ್ತದೆ.
ವೀರೇಂದ್ರ ಸೆಹ್ವಾಗ್:
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 286 ಕೋಟಿ ನಿವ್ವಳ ಆಸ್ತಿಯೊಂದಿಗೆ ಭಾರತದ 5 ನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.
ಯುವರಾಜ್ ಸಿಂಗ್:
ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ 255 ಕೋಟಿ ರೂ ನೆಟ್‌ವರ್ತ್ ಹೊಂದಿದ್ದು 6ನೇ ಸ್ಥಾನದಲ್ಲಿದ್ದಾರೆ.