ಆರ್‌ಸಿಬಿ ವಿಜಯೋತ್ಸವ; ವಿಧಾನ ಸೌಧದ ಮುಂದೆ ನಡೆದದ್ದಾರೂ ಏನು? ಇಲ್ಲಿವೆ ಸೀಕ್ರೆಟ್ ಫೋಟೋಸ್!
ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಸರ್ಕಾರದಿಂದ ವಿಧಾನಸೌಧದಲ್ಲಿ ಸನ್ಮಾನದ ವೇಳೆ ನಡೆದಿದ್ದಾದರೂ ಏನು? ಸಿಎಂ ಸಿದ್ದರಾಮಯ್ಯ ಹಾಗೂ ವಿರಾಟ್ ಕೊಹ್ಲಿ ಹೇಗೆ ನಡೆದುಕೊಂಡರು ಎಂಬ ಸೀಕ್ರೆಟ್ ಫೋಟೋಗಳು ಇಲ್ಲಿವೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಳೆದ 18 ವರ್ಷದ ಬಳಿಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಗೆದ್ದಿದೆ. ಆದರೆ, ಟ್ರೋಫಿ ವಿಜೇತರಿಗೆ ಸರ್ಕಾರದಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಿಧಾನಸೌಧದ ಮುಂದೆ ಏನೆಲ್ಲಾ ನಡೆಯಿತು ಎಂಬ ಮಾಹಿತಿ ಇಲ್ಲಿದೆ..
ವಿಧಾನ ಸೌಧದ ಮುಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಸಿಬಿ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ತಾವೇ ಖುದ್ದು ಶಾಲು ಹೊದಿಸಿ, ಸ್ಮರಣಿಕೆ ಕೊಟ್ಟು ಗೌರವಿಸಿದರು.
ವಿರಾಟ್ ಕೊಹ್ಲಿಗೆ ಸಿಎಂ ಸಿದ್ದರಾಮಯ್ಯ ಅವರು ಕನ್ನಡದ ನಾಡಿನ ಹಾಗೂ ಮೈಸೂರಿನ ಸಾಂಸ್ಕೃತಿಕ ಶೈಲಿಯ ಪೇಟ, ರೇಷ್ಮೆ ಶಲ್ಯ ಹಾಗೂ ಕೃತಕ ಗಂಧದ ಹಾರವನ್ನು ಹಾಕಿ ಸನ್ಮಾನಿಸಿದರು. ಈ ವೇಳೆ ಕೊಹ್ಲಿ ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಆರ್‌ಸಿಬಿ ನಾಯಕ ರಜತ್ ಪಟಿದಾರ್, ತಂಡದ ಸದಸ್ಯ ಕೃನಾಲ್ ಪಾಂಡ್ಯ ಸೇರಿ ಎಲ್ಲರಿಗೂ ಗೌರವಿಸಿದರು. ಸಿಎಂ ಸಿದ್ದರಾಮಯ್ಯ ಮುಖದಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮ ಮತ್ತು ಎಲ್ಲ ಕ್ರಿಕೆಟಿಗರನ್ನು ತಾವೇ ಖುದ್ದಾಗಿ ಸನ್ಮಾನಿಸಿದ್ದಕ್ಕೆ ಭಾರೀ ಸಂತಸ ವ್ಯಕ್ತಪಡಿಸಿದರು.
ಆರ್‌ಸಿಬಿ ವಿಯೋತ್ಸವದ ಆಚರಣೆಗೆ ಸರ್ಕಾರದಿಂದ ಸಕಲ ಸಿದ್ಧತೆ ಮಾಡಿಕೊಳ್ಳದೇ ಆತುರಾತುರದಿಂದ ಕಾರ್ಯಕ್ರಮ ಆಚರಣೆ ಮಾಡಿದ್ದರಿಂದ ಭಾರೀ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಆದರೂ ವಿಧಾನ ಸೌಧ ಆವರಣದ ರಸ್ತೆಯಲ್ಲಿ ಅಪಾರ ಅಭಿಮಾನಿಗಳು ಸೇರಿದ್ದರೂ ಯಾವುದೇ ಅವಘಡಗಳು ಸಂಭವಿಸಲಿಲ್ಲ.
ಆದರೆ, ಸಿದ್ದರಾಮಯ್ಯ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ತಂಡದ ಸದಸ್ಯರಿಗೆ ಸನ್ಮಾನ ಮಾಡುತ್ತಿದ್ದಂತೆ, ಮತ್ತೊಂದೆಡೆ ಆಯೋಜನೆ ಮಾಡಲಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಆರ್‌ಸಿಬಿ ವಿಜಯೋತ್ಸವ ಸಂಭ್ರಮಕ್ಕೆ ಬಂದವರು ಪ್ರಾಣ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸುತ್ತಿದ್ದಂತೆ 11 ಜನ ಆರ್‌ಸಿಬಿ ಅಭಿಮಾನಿಗಳು ದಾರುಣ ಸಾವಿಗೀಡಾಗಿದ್ದರು. 53 ಜನರು ಜಾಲ್ತುಳಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಯು ವಿಧಾನಸೌಧದ ಮೆಟ್ಟಿಲು ತಲುಪುವ ಮುನ್ನ ಇಲ್ಲಿ ಸನ್ಮಾನ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರನ್ನು ನೋಡಿದ ಅಭಿಮಾನಿಗಳು ಹಾಗೂ ಅವರನ್ನು ಹತ್ತಿರದಿಂದ ನೋಡಲಾಗದೇ ನಿರಾಶೆಗೊಂಡವರು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೊರಟಿದ್ದರು. ಆದರೆ, ಆರ್‌ಸಿಬಿ ಅಭಿಮಾನಿಗಳ ಈ ಹೊಯ್ದಾಟದಿಂದ ಪೊಲೀಸರ ನಿಯಂತ್ರಣವೂ ತಪ್ಪಿದ್ದು, ಅನಾಹುತ ಸಂಭವಿಸಿದೆ.
ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ಮೇಲೆ ಸೂತಕದ ಕಾರ್ಮೋಡ ಕವಿಯಿತು. ಆರ್‌ಸಿಬಿಗೆ ಕಪ್ ಗೆದ್ದುಕೊಟ್ಟ 11 ಜನರನ್ನು ನೋಡಲು ಬಂದ 11 ಅಭಿಮಾನಿಗಳ ಜೀವ ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿದೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಧನ ಕೊಡಲಾಗಿದೆ.
ಇನ್ನು ಆರ್‌ಸಿಬಿಯಿಂದ ತಲಾ 10 ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಲಾ 5 ಲಕ್ಷ ರೂ. ಕೊಡುವುದಾಗಿ ಘೋಷಣೆ ಮಾಡಿವೆ. ಆದರೆ, ಈವರೆಗೆ ಸಂತ್ರಸ್ತರ ಮನೆಗೆ ಈ ನೆರವಿನ ಹಣ ತಲುಪಿಲ್ಲ. ಇನ್ನು ಆರ್‌ಸಿಬಿ ಮತ್ತು ಕೆಎಸ್‌ಸಿಎ ಆಡಳಿತಾಧಿಕಾರಿಗಳೇ ಅಭಿಮಾನಿಗಳ ಸಾವಿಗೆ ಕಾರಣವೆಂದು ಪರಿಗಣಿಸಿದ ಸರ್ಕಾರ ಅವರಿಗೆ ಶಿಕ್ಷೆ ಕೊಡಿಸಲು ಮುಂದಾಗಿದೆ.