BCCI ಕೇಂದ್ರ ಗುತ್ತಿಗೆ ಪ್ರಕಟ, ಜಡೇಜಾಗೆ ಜಾಕ್‌ಪಾಟ್: 26 ಆಟಗಾರರಲ್ಲಿ ಯಾರಿಗೆ ಎಷ್ಟು ಸಂಬಳ..?
ಮುಂಬೈ(ಜ.27): ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಬಿಸಿಸಿಐ ಇದೀಗ 2022-23ನೇ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಆಲ್ರೌಂಡರ್ ರವೀಂದ್ರ ಜಡೇಜಾ A+ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಬಿಸಿಸಿಐ ಆಟಗಾರರನಿಗೆ 4 ವಿಧದಲ್ಲಿ ಸಂಭಾವನೆ ನೀಡುತ್ತಾ ಬಂದಿದೆ. A+ ದರ್ಜೆಯವರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆದರೆ, A ಕೆಟೆಗೆರೆ ಪಡೆದ ಆಟಗಾರರು ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನು B ದರ್ಜೆಗೆ 3 ಕೋಟಿ ರುಪಾಯಿ ಹಾಗೂ C ದರ್ಜೆಗೆ ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ.
ಈ ಬಾರಿ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆದ ಆಟಗಾರರರು ಯಾರ್ಯಾರು? ಯಾರಿಗೆಲ್ಲ ಸಂಭಾವನೆಯಲ್ಲಿ ಬಡ್ತಿ ಸಿಕ್ಕಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಿರೀಕ್ಷೆಯಂತೆಯೇ A+ ದರ್ಜೆಯಲ್ಲಿಯೇ ಮುಂದುವರೆದಿದ್ದಾರೆ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಜೇಬಿಗಿಳಿಸಿಕೊಳ್ಳಲಿದ್ದಾರೆ.
Image credit: PTI
2. ವಿರಾಟ್ ಕೊಹ್ಲಿ:
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಭಾರತ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ಮತ್ತೊಮ್ಮೆ A+ ದರ್ಜೆಯಲ್ಲಿಯೇ ಮುಂದುವರೆದಿದ್ದಾರೆ.
3. ಜಸ್ಪ್ರೀತ್ ಬುಮ್ರಾ:
ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಕಳೆದ ಐದಾರು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರೂ ಸಹಾ, ಕೇಂದ್ರ ಗುತ್ತಿಗೆಯಲ್ಲಿ A+ ಶ್ರೇಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
4. ರವೀಂದ್ರ ಜಡೇಜಾ:
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾಗೆ ಜಾಕ್‌ಪಾಟ್ ಹೊಡೆದಿದ್ದು, ಇದೇ ಮೊದಲ ಬಾರಿಗೆ A+ ಗ್ರೇಡ್ ಪಡೆದುಕೊಂಡಿದ್ದು, ಕೊಹ್ಲಿ, ರೋಹಿತ್ ಹಾಗೂ ಬುಮ್ರಾ ಅವರಂತೆ ಜಡೇಜಾ ಕೂಡಾ 7 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
5. ಹಾರ್ದಿಕ್ ಪಾಂಡ್ಯ:
ಭಾರತ ಟಿ20 ತಂಡದ ಪೂರ್ಣಾವಧಿ ನಾಯಕರಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಜಾಕ್ ಪಾಟ್ ಹೊಡೆದಿದ್ದು, ಸಿ ಗ್ರೇಡ್‌ನಿಂದ ಇದೀಗ ಎ ಗೇಡ್‌ಗೆ ಲಗ್ಗೆಯಿಟ್ಟಿದ್ದಾರೆ. ಪಾಂಡ್ಯ ಇದೀಗ 5 ಕೋಟಿ ರುಪಾಯಿ ಸಂಭಾವನೆ ಜೇಬಿಗಿಳಿಸಿಕೊಳ್ಳಲಿದ್ದಾರೆ.
6. ರವಿಚಂದ್ರನ್ ಅಶ್ವಿನ್:
ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸದ್ಯ ಟೆಸ್ಟ್ ತಂಡದಲ್ಲೇ ಮುಂದುವರೆಯುತ್ತಿದ್ದು, 'ಎ' ಗ್ರೇಡ್‌ನಲ್ಲಿಯೇ ಮುಂದುವರೆದಿದ್ದಾರೆ. ಅಶ್ವಿನ್ ಕೂಡಾ ವಾರ್ಷಿಕ ಐದು ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
7. ಮೊಹಮ್ಮದ್ ಶಮಿ:
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ಕೇಂದ್ರೀಯ ಗುತ್ತಿಗೆಯಲ್ಲಿ 'ಎ' ಗ್ರೇಡ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಮಿ, ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಸಾರಥ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
8. ರಿಷಭ್ ಪಂತ್
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, 'ಎ' ಗ್ರೇಡ್‌ನ ಗುತ್ತಿಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಅಪಘಾತಕ್ಕೊಳಗಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ ಸಹಾ ಪಂತ್, ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
9. ಅಕ್ಷರ್ ಪಟೇಲ್:
ಇನ್ನು ಟೀಂ ಇಂಡಿಯಾ ಪ್ರತಿಭಾನ್ವಿತ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡಾ ಇದೀಗ ಒಂದು ಹಂತ ಮೇಲೇರಿ 'ಎ' ಗ್ರೇಡ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ 'ಬಿ' ಗ್ರೇಡ್‌ನಲ್ಲಿದ್ದ ಅಕ್ಷರ್ ಪಟೇಲ್ ಇದೀಗ 'ಎ' ಗ್ರೇಡ್‌ಗೆ ಬಡ್ತಿ ಪಡೆದುಕೊಂಡಿದ್ದಾರೆ.
Cheteshwar Pujara
10. ಚೇತೇಶ್ವರ್ ಪೂಜಾರ
ಭಾರತ ಕ್ರಿಕೆಟ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಸೌರಾಷ್ಟ್ರ ಮೂಲದ ಚೇತೇಶ್ವರ್ ಪೂಜಾರ, 'ಸಿ' ಗ್ರೇಡ್‌ನಲ್ಲಿಯೇ ಮುಂದುವರೆದಿದ್ದಾರೆ. ಪೂಜಾರ ವಾರ್ಷಿಕ 3 ಕೋಟಿ ರುಪಾಯಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ.
11. ಕೆ ಎಲ್ ರಾಹುಲ್
ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್‌ಗೆ ಬಿಸಿಸಿಐ ಶಾಕ್ ನೀಡಿದೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ರಾಹುಲ್ ಅವರೀಗ 'ಎ' ದರ್ಜೆಯಿಂದ 'ಬಿ' ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ. ಹೀಗಾಗಿ ರಾಹುಲ್ ವಾರ್ಷಿಕ 3 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
12. ಶ್ರೇಯಸ್ ಅಯ್ಯರ್
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್, ಸದ್ಯ 'ಬಿ' ಗ್ರೇಡ್‌ನಲ್ಲಿಯೇ ಮುಂದುವರೆದಿದ್ದಾರೆ. ಭಾರತದ ಪರ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಶ್ರೇಯಸ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.
13. ಮೊಹಮ್ಮದ್ ಸಿರಾಜ್:
ಇತ್ತೀಚೆಗಷ್ಟೇ ಐಸಿಸಿ ಬೌಲರ್‌ಗಳ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ 'ಬಿ' ಗ್ರೇಡ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 3 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
14. ಸೂರ್ಯಕುಮಾರ್ ಯಾದವ್:
ಭಾರತದ 360 ಡಿಗ್ರಿ ಖ್ಯಾತಿಯ ಬ್ಯಾಟರ್ ಸೂರ್ಯಕುಮಾರ್ ಯಾದವ್, ಸದ್ಯ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ಭದ್ರವಾಗಿದ್ದಾರೆ. ಇದೀಗ ಸೂರ್ಯಕುಮಾರ್, 'ಸಿ' ದರ್ಜೆಯಿಂದ 'ಬಿ' ದರ್ಜೆಗೆ ಬಡ್ತಿ ಪಡೆದಿದ್ದಾರೆ.
15. ಶುಭ್‌ಮನ್ ಗಿಲ್:
ಟೀಂ ಇಂಡಿಯಾ ಪ್ರತಿಭಾನ್ವಿಯ ಬ್ಯಾಟರ್ ಶುಭ್‌ಮನ್ ಗಿಲ್, ಇದೀಗ ಭಾರತದ ಮೂರು ಮಾದರಿಯ ತಂಡದಲ್ಲೂ ಆರಂಭಿಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದು, 'ಸಿ' ಗ್ರೇಡ್‌ನಿಂದ ಇದೀಗ 'ಬಿ' ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ.
16. ಉಮೇಶ್ ಯಾದವ್:
ಟೀಂ ಇಂಡಿಯಾ ಅನುಭವಿ ವೇಗಿ ಉಮೇಶ್ ಯಾದವ್, 'ಸಿ' ಗ್ರೇಡ್‌ನಲ್ಲಿಯೇ ಮುಂದುವರೆದಿದ್ದಾರೆ. ಉಮೇಶ್ ಯಾದವ್ ವಾರ್ಷಿಕ ಒಂದು ಕೋಟಿ ರುಪಾಯಿ ತಮ್ಮ ಜೇಬಿಗಿಳಿಸಿಕೊಳ್ಳಲಿದ್ದಾರೆ.
17. ಶಿಖರ್ ಧವನ್
ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಕೂಡಾ, ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದು, 'ಸಿ' ಗ್ರೇಡ್ ಪಡೆದಿರುವ ಧವನ್ ವಾರ್ಷಿಕ ಒಂದು ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
18. ಶಾರ್ದೂಲ್ ಠಾಕೂರ್:
ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್‌ಗೆ ಕೊಂಚ ನಿರಾಸೆ ಎದುರಾಗಿದ್ದು, ನೂತನ ಗುತ್ತಿಗೆಯಲ್ಲಿ 'ಬಿ' ದರ್ಜೆಯಿಂದ 'ಸಿ' ದರ್ಜೆಗೆ ಹಿಂಬಡ್ತಿ ಪಡೆದಿದ್ದಾರೆ.
19. ಇಶಾನ್ ಕಿಶನ್:
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಇದೇ ಮೊದಲ ಬಾರಿಗೆ ಕೇಂದ್ರೀಯ ಗುತ್ತಿಗೆ ಪಡೆಯಲು ಸಫಲವಾಗಿದ್ದಾರೆ. ಕಿಶನ್, ಸದ್ಯ 'ಸಿ' ದರ್ಜೆ ಪಡೆದಿದ್ದು, ವಾರ್ಷಿಕ ಒಂದು ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
20. ದೀಪಕ್ ಹೂಡಾ:
ಬರೋಡಾದ ಪ್ರತಿಭಾನ್ವಿತ ಆಲ್ರೌಂಡರ್ ದೀಪಕ್ ಹೂಡಾ ಕೂಡಾ ಇದೇ ಮೊದಲ ಬಾರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆಯಲು ಯಶಸ್ವಿಯಾಗಿದ್ದು, 'ಸಿ' ಗ್ರೇಡ್ ಪಡೆದುಕೊಂಡಿದ್ದಾರೆ.
21. ಯುಜುವೇಂದ್ರ ಚಹಲ್:
ಟೀಂ ಇಂಡಿಯಾ ಅನುಭವಿ ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್, 'ಸಿ' ಗ್ರೇಡ್‌ನಲ್ಲಿಯೇ ಮುಂದುವರೆದಿದ್ದು, ವಾರ್ಷಿಕ ಒಂದು ಕೋಟಿ ರುಪಾಯಿ ಸಂಭಾವನೆಯನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ.
22. ಕುಲ್ದೀಪ್ ಯಾದವ್:
ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್, ಇದೀಗ ಮತ್ತೊಮ್ಮೆ ಕೇಂದ್ರ ಗುತ್ತಿಗೆ ಪಡೆಯಲು ಸಫಲರಾಗಿದ್ದಾರೆ. ಕಳೆದ ವರ್ಷ ಕೇಂದ್ರ ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕುಲ್ದೀಪ್ ಯಾದವ್, ಇದೀಗ ಮತ್ತೆ 'ಸಿ' ಗ್ರೇಡ್ ಪಡೆದು ಕಮ್‌ಬ್ಯಾಕ್ ಮಾಡಿದ್ದಾರೆ.
23. ವಾಷಿಂಗ್ಟನ್ ಸುಂದರ್:
ತಮಿಳುನಾಡು ಮೂಲದ ಪ್ರತಿಭಾನ್ವಿತ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಇದೀಗ ಕೇಂದ್ರ ಗುತ್ತಿಗೆ ಪಡೆಯಲು ಸಫಲರಾಗಿದ್ದು., 'ಸಿ' ಗ್ರೇಡ್ ಪಡೆದಿದ್ದಾರೆ. ಸುಂದರ್ ಕಳೆದ ವರ್ಷ ಬಿಸಿಸಿಐ ಗುತ್ತಿಗೆ ಪಡೆದಿರಲಿಲ್ಲ.
24. ಸಂಜು ಸ್ಯಾಮ್ಸನ್:
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಇದೀಗ ಮೊದಲ ಬಾರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜುಗೆ 'ಸಿ' ಗ್ರೇಡ್ ಗುತ್ತಿಗೆ ಸಿಕ್ಕಿದ್ದು, ಒಂದು ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.
25. ಆರ್ಶದೀಪ್ ಸಿಂಗ್:
ಪಂಜಾಬ್ ಮೂಲದ ಪ್ರತಿಭಾನ್ವಿತ ಎಡಗೈ ವೇಗದ ಬೌಲರ್ ಆರ್ಶದೀಪ್ ಸಿಂಗ್, ಇದೀಗ ಮೊದಲ ಬಾರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, 'ಸಿ' ಗ್ರೇಡ್ ಪಡೆದಿದ್ದಾರೆ.
26. ಕೆ ಎಸ್ ಭರತ್:
ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಭರತ್ ಕೂಡಾ ಇದೇ ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಲ್ಲಿ 'ಸಿ' ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ.