ಕ್ರಿಕೆಟ್ ದಂತಕಥೆ ಗ್ಯಾರಿ ಸೋಬರ್ಸ್, ವಿರಾಟ್ ಕೊಹ್ಲಿ ದಾಖಲೆ ಮುರಿದ ಜಡೇಜಾ!
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಆರು ಅರ್ಧಶತಕಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಗ್ಯಾರಿ ಸೋಬರ್ಸ್ ಮತ್ತು ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ.

ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಐದನೇ ಟೆಸ್ಟ್‌ನ ಮೂರನೇ ದಿನ ಜಡೇಜಾ ಅರ್ಧಶತಕ ಸಿಡಿಸಿ ಗಮನ ಸೆಳೆದರು.
77 ಎಸೆತಗಳಲ್ಲಿ 53 ರನ್ ಗಳಿಸಿದ ಜಡೇಜಾ ಐದು ಬೌಂಡರಿ ಬಾರಿಸಿದರು. ಈ ಇನ್ನಿಂಗ್ಸ್ ಮೂಲಕ ದಿಗ್ಗಜ ಆಟಗಾರರ ದಾಖಲೆಗಳನ್ನು ಮುರಿದರು.
Ravindra Jadeja departs, but not before completing his 27th Test half-century 👍 👍
Updates ▶️ https://t.co/Tc2xpWMCJ6#TeamIndia | #ENGvIND | @imjadejapic.twitter.com/1MNEN1VQNv— BCCI (@BCCI) August 2, 2025
ಈ ಅರ್ಧಶತಕದೊಂದಿಗೆ ಜಡೇಜಾ ಇಂಗ್ಲೆಂಡ್‌ನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ 6ನೇ ಅಥವಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಆರು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಈ ಮೂಲಕ ಗ್ಯಾರಿ ಸೋಬರ್ಸ್ ದಾಖಲೆ(5) ಮುರಿದರು.
ಈ ಸಾಧನೆ ಮಾಡಿದ ಮೊದಲ ಭಾರತೀಯ ಜಡೇಜಾ. ಇದಕ್ಕೂ ಮೊದಲು ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಇಂಗ್ಲೆಂಡ್‌ನಲ್ಲಿ ಒಂದೇ ಸರಣಿಯಲ್ಲಿ ಐದು ಬಾರಿ 50+ ಸ್ಕೋರ್‌ಗಳನ್ನು ಗಳಿಸಿದ್ದರು. ಜಡೇಜಾ ಈಗ ಆ ದಾಖಲೆ ಮುರಿದಿದ್ದಾರೆ.
6ನೇ ಅಥವಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಒಂದೇ ಸರಣಿಯಲ್ಲಿ 500 ರನ್‌ಗಳನ್ನು ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಸರಣಿಯಲ್ಲಿ ಜಡೇಜಾ 516 ರನ್ ಗಳಿಸಿದ್ದಾರೆ. 2002ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿವಿಎಸ್ ಲಕ್ಷ್ಮಣ್ ಗಳಿಸಿದ್ದ 474 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ಇಂಗ್ಲೆಂಡ್‌ನಲ್ಲಿ 6ನೇ ಅಥವಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿಹೆಚ್ಚು 50+ ಸ್ಕೋರ್ ಗಳಿಸಿದ ಆಟಗಾರ ಎಂಬ ದಾಖಲೆ ಜಡೇಜಾ (10) ಪಾಲಾಗಿದೆ. ಗ್ಯಾರಿ ಸೋಬರ್ಸ್ (9) ದಾಖಲೆ ಮುರಿದಿದ್ದಾರೆ.
ಒಂದು ವಿದೇಶಿ ಟೆಸ್ಟ್ ಸರಣಿಯಲ್ಲಿ 6ನೇ ಅಥವಾ ಕೆಳ ಕ್ರಮಾಂಕದಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಜಡೇಜಾ (516) ಮೂರನೇ ಸ್ಥಾನದಲ್ಲಿದ್ದಾರೆ. ಗ್ಯಾರಿ ಸೋಬರ್ಸ್ (722) ಮತ್ತು ವಸೀಮ್ ರಾಜಾ (517) ಮಾತ್ರ ಮುಂದಿದ್ದಾರೆ.
ಈ ಸರಣಿಯಲ್ಲಿ ಜಡೇಜಾ ಒಂದು ಶತಕ ಮತ್ತು ಐದು ಅರ್ಧಶತಕ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 107*. ಬೌಲಿಂಗ್‌ನಲ್ಲೂ ಏಳು ವಿಕೆಟ್ ಪಡೆದಿದ್ದಾರೆ.
2025ರ ಇಂಗ್ಲೆಂಡ್ ಸರಣಿಯಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದ ಮೂರನೇ ಭಾರತೀಯ ಜಡೇಜಾ. ಶುಭ್‌ಮನ್ ಗಿಲ್ (754) ಮತ್ತು ಕೆ.ಎಲ್. ರಾಹುಲ್ (532) ಮುಂದಿದ್ದಾರೆ. ಒಂದೇ ಸರಣಿಯಲ್ಲಿ ಮೂವರು ಭಾರತೀಯರು 500+ ರನ್ ಗಳಿಸಿದ್ದು ಇದೇ ಮೊದಲು.
ಇಂಗ್ಲೆಂಡ್‌ನಲ್ಲಿ ಒಂದೇ ಸರಣಿಯಲ್ಲಿ ಹೆಚ್ಚು 50+ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು:
6 – ರವೀಂದ್ರ ಜಡೇಜಾ (2025)
5 – ಸುನಿಲ್ ಗವಾಸ್ಕರ್ (1979)
5 – ವಿರಾಟ್ ಕೊಹ್ಲಿ (2018)
5 – ರಿಷಭ್ ಪಂತ್ (2025)